»   » ರಿಯಲ್ ಸ್ಟೋರಿ 'ಕೃಷ್ಣಲೀಲಾ'ದ ಅಸಲಿ ಜೋಡಿ

ರಿಯಲ್ ಸ್ಟೋರಿ 'ಕೃಷ್ಣಲೀಲಾ'ದ ಅಸಲಿ ಜೋಡಿ

Posted By:
Subscribe to Filmibeat Kannada

ಕರ್ನಾಟಕದ ಮೂಲೆ ಮೂಲೆಯಲ್ಲೂ 'ಸ್ಮೈಲಿಂಗ್ ಕೃಷ್ಣ' ಅಜೇಯ್ ರಾವ್ ನಿರ್ಮಿಸಿ-ನಟಿಸಿರುವ 'ಕೃಷ್ಣಲೀಲಾ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಯಾವುದೇ ಗಿಮಿಕ್ಕು, ಮಸಾಲೆ ಇಲ್ಲದ 'ಕೃಷ್ಣಲೀಲಾ' ಕೌಟುಂಬಿಕ ಜನರನ್ನ ಆಕರ್ಷಿಸುತ್ತಿದೆ.

ಆರಂಭದಿಂದಲೂ ''ಕೃಷ್ಣಲೀಲಾ' ನೈಜ ಕಥೆ ಆಧರಿಸಿರುವ ಸಿನಿಮಾ. 2010 ರಲ್ಲಿ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆದ ಸ್ಟೋರಿ'' ಅಂತ ನಿರ್ದೇಶಕ ಶಶಾಂಕ್ ಹೇಳುತ್ತಲೇ ಇದ್ದರು. ಅಂದು ಬಹಿರಂಗ ಪಡಿಸದ ಆ ನಿಜವಾದ 'ಕೃಷ್ಣಲೀಲಾ', ಇಂದು ವರ್ಲ್ಡ್ ಫೇಮಸ್ ಆಗಿದ್ದಾರೆ.


ಹೌದು, ರಿಯಲ್ 'ಕೃಷ್ಣಲೀಲಾ' ಇವರೇ...ಹರೀಶ್ ಮತ್ತು ದಿವ್ಯಾ.


Real Krishna Leela Harish and Divya revealed

ಕ್ಯಾಬ್ ಡ್ರೈವರ್ ಹರೀಶ್ ಮತ್ತು ದಿವ್ಯಾ, ಆಶಾಡ ಮಾಸದಲ್ಲಿ ಆತುರದಲ್ಲಿ ಆದ ಮದುವೆಯ ಸ್ಟೋರಿಯೇ 'ಕೃಷ್ಣಲೀಲಾ'. ಮೂರು ತಿಂಗಳಿನಿಂದ ಫೋನ್ ನಲ್ಲಿ ಮಾತನಾಡುತ್ತಿದ್ದ ಹರೀಶ್ ಮತ್ತು ದಿವ್ಯಾ ಒಬ್ಬರನ್ನೊಬ್ಬರು ನೋಡಿರಲಿಲ್ಲ.


ಸಿನಿಮಾದಲ್ಲಿ ಸಿಕ್ಕ ಟ್ವಿಸ್ಟ್ ನಂತೆ ಅವರ ನಿಜ ಬದುಕಲ್ಲೂ ನಡೆದ ಘಟನೆಯೊಂದರಿಂದ ಪೊಲೀಸರ ಸಮ್ಮುಖದಲ್ಲಿ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಹಸೆಮಣೆ ಏರುವ ಪರಿಸ್ಥಿತಿ ಹರೀಶ್-ದಿವ್ಯಾಗೆ ಎದುರಾಗುತ್ತೆ. ಮದುವೆ ನಂತರ ತೆರೆಮೇಲೆ ಅಜೇಯ್ ರಾವ್ ಎಷ್ಟು ಸಿಟ್ಟಿಗೇಳುತ್ತಾರೋ, ಹಾಗೇ ಹರೀಶ್ ಕೂಡ. [ಅಜೇಯ್ ರಾವ್ 'ಕೃಷ್ಣಲೀಲಾ'ಗೆ ಬಾಕ್ಸಾಫೀಸ್ ಉಡೀಸ್]


Here is the Real 'KRISHNA-LEELA'!!


Posted by Krishnaleela on Thursday, April 2, 2015

ಇಬ್ಬರ ಈ ಮದುವೆ ಕಹಾನಿ 2010 ರ ಜುಲೈ 21 ರಂದು, ಕನ್ನಡ ಸುದ್ದಿ ವಾಹಿನಿ ಟಿವಿ9 ನ ವಾರೆಂಟ್ ಕಾರ್ಯಕ್ರಮದಲ್ಲಿ ಪ್ರಸಾರವಾಗಿತ್ತು. ಇದನ್ನ ನೋಡಿ, ನಿರ್ದೇಶಕ ಶಶಾಂಕ್ ಕಥೆ ಹೆಣೆದ್ರು. ನಿರ್ಮಾಣ ಮಾಡೋಕೆ ಅಜೇಯ್ ರಾವ್ ಮುಂದೆ ಬಂದ್ರು. ಇದರ ಪ್ರತಿಫಲವೇ 'ಕೃಷ್ಣಲೀಲಾ'. ['ಕೃಷ್ಣಲೀಲಾ' ವಿಮರ್ಶೆ: ಗಿಮಿಕ್ ಇಲ್ಲ...ಎಲ್ಲೂ ಕೆಮ್ಮಂಗಿಲ್ಲ!]


Real Krishna Leela Harish and Divya revealed

ಹರೀಶ್-ದಿವ್ಯಾ ಪೋನ್ ಪುರಾಣವಿರುವ 'ಕೃಷ್ಣಲೀಲಾ' ಇಂದು ಸೂಪರ್ ಹಿಟ್ ಆಗಿದೆ. ಆದ್ರೆ, ಹರೀಶ್-ದಿವ್ಯಾ ಈಗೆಲ್ಲಿದ್ದಾರೆ? ಹೇಗಿದ್ದಾರೆ? ಅನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. 'ಕೃಷ್ಣಲೀಲಾ' ಸಿನಿಮಾವನ್ನ ಅವರಿಬ್ಬರು ನೋಡಿದ್ರೆ, ಬಹುಶಃ ಫ್ಲ್ಯಾಶ್ ಬ್ಯಾಕ್ ಗೆ ಜಾರಬಹುದೇನೋ.

English summary
Earlier it was reported that Ajay Rao starrer 'Krishna Leela' is based on a real story. Now, Kannada News Channel TV9 has revealed the Real Krishna-Leela. Read the article to know more.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada