»   » ರಿಯಲ್ ಸ್ಟಾರ್ ಉಪ್ಪಿ 'ಬ್ರಹ್ಮ' ಚಿತ್ರದ ಬಜೆಟ್ ಎಷ್ಟು?

ರಿಯಲ್ ಸ್ಟಾರ್ ಉಪ್ಪಿ 'ಬ್ರಹ್ಮ' ಚಿತ್ರದ ಬಜೆಟ್ ಎಷ್ಟು?

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿರುವ ಚಿತ್ರಗಳಲ್ಲಿ 'ಬ್ರಹ್ಮ' ಚಿತ್ರ ಸೈಲೆಂಟಾಗಿಯೇ ಸಾಕಷ್ಟು ಅಲೆಗಳನ್ನು ಎಬ್ಬಿಸಿದೆ. ಚಿತ್ರದ ಟೈಟಲ್ ನಿಂದ ಹಿಡಿದು ಅದರ ಹಿಂದಿರುವ ನಿರ್ದೇಶಕ ಆರ್ ಚಂದ್ರು ಅವರ ಕಾರಣ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವೂ ಇದೆ.

'The Leader' ಎಂಬುದು ಚಿತ್ರದ ಅಡಿಬರಹ. ಈಗಾಗಲೆ ಈ ಚಿತ್ರದ ಮೇಕಿಂಗ್ ವಿಡಿಯೋ ಯೂಟ್ಯೂಬ್ ನಲ್ಲಿ ಸೂಪರ್ ಡೂಪರ್ ಹಿಟ್ ಆಗಿದೆ. ಮೈಲಾರಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಂಜುನಾಥ ಬಾಬು (ಅಮೃತಹಳ್ಳಿ) ನಿರ್ಮಿಸುತ್ತಿರುವ ಬ್ರಹ್ಮ' ಚಿತ್ರಕ್ಕೆ ಮಾತಿನ ಭಾಗದ(ಟಾಕಿ) ಚಿತ್ರೀಕರಣ ಮುಕ್ತಾಯವಾಗಿದೆ. ಈಗ ನಿರ್ಮಾಣ ನಂತರದ ಕೆಲಸಗಳು ಭರದಿಂದ ಸಾಗಿವೆ.

ಆರ್.ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಉಪೇಂದ್ರ ಅಭಿನಯಿಸುತ್ತಿದ್ದಾರೆ. ಪ್ರಣೀತಾ, ರಂಗಾಯಣ ರಘು, ಸಾಧುಕೋಕಿಲ, ಶಯ್ಯಾಜಿ ಶಿಂಧೆ, ನಾಜರ್, ರಾಹುಲ್ ದೇವ್, ಸೋನು ಸೂಧ್, ಸುಭಾಷ್ ಶೆಟ್ಟಿ, ಗಿರೀಶ್ ಕಾರ್ನಾಡ್, ಕಾಟ್ ರಾಜು, ಬುಲೆಟ್ ಪ್ರಕಾಶ್, ಜಾನ್ ಕೊಕೇನ್, ಮಂಗಳೂರು ಸುರೇಶ್, ಲಕ್ಷ್ಮಣ್,ಶರಣ್, ಪದ್ಮಜಾರಾವ್, ಸುಚೇಂದ್ರಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಶೇಖರ್ ಚಂದ್ರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್, ಇಸ್ಮಾಯಿಲ್ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು, ವಿಜಯ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಆಂಟೋನಿ ಅವರ ನೃತ್ಯ ನಿರ್ದೇಶನ 'ಬ್ರಹ್ಮ' ಚಿತ್ರಕ್ಕಿದೆ. ಈ ಚಿತ್ರದ ವಿಶೇಷಗಳ ಬಗ್ಗೆ ಒಂದು ಲುಕ್ ಹಾಕೋಣ ಬನ್ನಿ.

ಇಬ್ಬರ ನಿರ್ದೇಶಕರ ಸಂಗಮನದ ಚಿತ್ರ

ಸ್ವತಃ ಉಪೇಂದ್ರ ಅವರು ನಿರ್ದೇಶಕರಾಗಿರುವ ಕಾರಣ ಇಬ್ಬರು ನಿರ್ದೇಶಕರ ಚಿತ್ರ ಇದು ಎನ್ನಬಹುದು.

ಎಲ್ಲರ ಗಮನಸೆಳೆದಿರುವ ಉಪ್ಪಿ ಗೆಟಪ್

ಇನ್ನು ಚಿತ್ರದಲ್ಲಿ ಉಪೇಂದ್ರ ಅವರ ಡಿಫರೆಂಟ್ ಗೆಟಪ್ ಈಗಾಗಲೆ ಅಭಿಮಾನಿಗಳ ಮನಗೆದ್ದಿದೆ. ಇದಕ್ಕೆ ಯೂಟ್ಯೂಬ್ ನಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯವೇ ಸಾಕ್ಷಿ.

ಇದೇ ಮೊದಲ ಬಾರಿಗೆ ಪ್ರಣೀತಾ ಉಪ್ಪಿ ಜೋಡಿ

ಇದೇ ಮೊದಲ ಬಾರಿಗೆ ಪ್ರಣೀತಾ ಅವರು ಉಪ್ಪಿಗೆ ಜೊತೆಯಾಗಿದ್ದಾರೆ. ಆಕ್ಷನ್ ಜೊತೆಗೆ ಗ್ಲಾಮರ್ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ.

ಏಕಕಾಲಕ್ಕೆ ಕನ್ನಡ, ತೆಲುಗಿನಲ್ಲಿ ನಿರ್ಮಾಣ

ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಿಸುತ್ತಿರುವ ಚಿತ್ರ ಎಂಬ ಹೆಗ್ಗಳಿಕೆಗೂ 'ಬ್ರಹ್ಮ' ಪಾತ್ರವಾಗಿದೆ.

ಚಿತ್ರದ ಬಜೆಟ್ ಸುಮಾರು ರು.30 ಕೋಟಿ

ಅಮೃತಹಳ್ಳಿ ಮಂಜುನಾಥ್ ಬಾಬು ಅವರು ಸರಿಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸುತ್ತಿರುವ ಚಿತ್ರವಿದು.

ಎರಡೂ ಭಾಷೆಗೆ ಹೊಂದುವ ಪಾತ್ರವರ್ಗ

ಎರಡೂ ಭಾಷೆಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಉಳಿದ ಪಾತ್ರವರ್ಗವನ್ನು ಆಯ್ಕೆ ಮಾಡಲಾಗಿದೆ.

'ಬ್ರಹ್ಮ' ತಾಂತ್ರಿಕ ಬಳಗವೂ ಅದ್ಭುತ

ಈ ಚಿತ್ರದ ತಾಂತ್ರಿಕ ಬಳಗದಲ್ಲಿ ಹಾಲಿವುಡ್ ಹಾಗೂ ಬಾಲಿವುಡ್ ಚಿತ್ರಗಳಿಗೆ ಕೆಲಸ ಮಾಡಿದ ತಂತ್ರಜ್ಞರಿದ್ದಾರೆ. ಧೂಮ್ 2 ನಂತಹ ಚಿತ್ರಗಳಿಗೆ ವಿಎಫ್ಎಕ್ಸ್ ಮಾಡಿದ ತಂತ್ರಜ್ಞರನ್ನು ಬಳಸಿಕೊಳ್ಳಲಾಗಿದೆ.

ನವೆಂಬರ್ ನಲ್ಲಿ ಚಿತ್ರ ಬಿಡುಗಡೆಗೆ ತಯಾರಿ

ಬ್ರಹ್ಮ ಚಿತ್ರವನ್ನು ಸುಮಾರು 250 ರಿಂದ 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನವೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಬಗ್ಗೆ ಪ್ಲಾನ್ ಮಾಡಲಾಗಿದೆ. ತೆಲುಗು ಚಿತ್ರಕ್ಕೆ 'ಉಪೇಂದ್ರುಡು' ಎಂದು ಹೆಸರಿಡಲಾಗಿದೆ.

English summary
The Real Star Upendra and Pranitha starrer movie 'Brahma' highlights are here. Brahma is slated to release in 250-300 screens during the month of November. The same movie will be released under the title Upendrudu in Telugu.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada