»   » ನೆಲಮಂಗಲದಲ್ಲಿ ನೆಲ ನಡುಗಿಸಿದ ಉಪೇಂದ್ರ 'ಬ್ರಹ್ಮ'

ನೆಲಮಂಗಲದಲ್ಲಿ ನೆಲ ನಡುಗಿಸಿದ ಉಪೇಂದ್ರ 'ಬ್ರಹ್ಮ'

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಇದೇ ಮೊಟ್ಟ ಮೊದಲ ಬಾರಿಗೆ ಕೈಜೋಡಿಸಿರುವ ಚಿತ್ರ 'ಬ್ರಹ್ಮ'. ಆರಂಭದಿಂದಲೂ ಈ ಚಿತ್ರ ಒಂದಿಲ್ಲೊಂದು ಕಾರಣಗಳಿಂದ ಸದ್ದು ಮಾಡುತ್ತಲೇ ಇದೆ. ಈಗ ಚಿತ್ರದ ಫಸ್ಟ್ ಲುಕ್ ಈಗಾಗಲೆ ಯೂಟ್ಯೂಬ್ ಗೆ ಸೇರ್ಪಡೆಯಾಗಿದ್ದು ನಿಧಾನಕ್ಕೆ ಟೇಕಾಫ್ ಆಗುತ್ತಿದೆ.

ಬ್ರಹ್ಮ ಚಿತ್ರದ ಫೈಟಿಂಗ್ ಸನ್ನಿವೇಶಕ್ಕಾಗಿ ನೆಲಮಂಗಲ ಬಳಿ ಭರ್ಜರಿ ಸೆಟ್ ಹಾಕಲಾಗಿದೆ. ಇದಕ್ಕಾಗಿ ಚಿತ್ರದ ನಿರ್ಮಾಪಕ ಮಂಜುನಾಥ ಬಾಬು ಅವರು ರು.70 ಲಕ್ಷ ಖರ್ಚು ಮಾಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣದಲ್ಲಿ ಮೂರು ದಿನಗಳ ಕಾಲ ಯುದ್ಧದ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ.

ಈ ಸಾಹಸ ಸನ್ನಿವೇಶಗಳನ್ನು ರಾಜಸ್ತಾನದಲ್ಲಿ ಚಿತ್ರೀಕರಿಸಬೇಕೆಂದುಕೊಂಡಿದ್ದರು. ಆದರೆ ಈಗ ನೆಲಮಂಗಲ ಬಳಿಯೇ ಬ್ಲೂಮ್ಯಾಟ್ ಹಾಕಿ ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಅರುವತ್ತಕ್ಕೂ ಹೆಚ್ಚು ಕುದುರೆ, 700ಕ್ಕೂ ಹೆಚ್ಚು ಸೇನಾನಿಗಳನ್ನು ಬಳಸಿಕೊಂಡು ನೆಲಮಂಗಲದಲ್ಲಿ ಸತತ ಚಿತ್ರೀಕರಣ ನಡೆಯುತ್ತಿದೆ.

ಒಂದೇ ಒಂದು ಶಾಟ್ ಗೆ ರು.1 ಕೋಟಿ ಖರ್ಚು

ಕೆಲದಿನಗಳ ಹಿಂದೆ ಈ ಚಿತ್ರದ ಒಂದೇ ಒಂದು ಶಾಟ್ ಗೆ ಬರೋಬ್ಬರಿ ರು.1 ಕೋಟಿ ಖರ್ಚು ಮಾಡಲಾಗಿತ್ತು. ಈಗ ಯುದ್ಧದ ಸನ್ನಿವೇಶಗಳಿಗೆ ಎಪ್ಪತ್ತು ಲಕ್ಷ ಖರ್ಚು ಮಾಡಲಾಗುತ್ತಿದೆ.

ಉಪೇಂದ್ರ ಅವರ ಡಿಫರೆಂಟ್ ಗೆಟಪ್

ಎಲ್ಲರ ಗಮನಸೆಳೆದಿರುವ ಉಪ್ಪಿ ಗೆಟಪ್ ಇನ್ನು ಚಿತ್ರದಲ್ಲಿ ಉಪೇಂದ್ರ ಅವರ ಡಿಫರೆಂಟ್ ಗೆಟಪ್ ಈಗಾಗಲೆ ಅಭಿಮಾನಿಗಳ ಮನಗೆದ್ದಿದೆ. ಇದಕ್ಕೆ ಯೂಟ್ಯೂಬ್ ನಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯವೇ ಸಾಕ್ಷಿ.

ಇದು ತ್ರಿಭಾಷಾ ಚಿತ್ರ

ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಿಸುತ್ತಿರುವ ಚಿತ್ರ ಎಂಬ ಹೆಗ್ಗಳಿಕೆಗೂ 'ಬ್ರಹ್ಮ' ಪಾತ್ರವಾಗಿದೆ. ಈ ಚಿತ್ರ ತಮಿಳು ಭಾಷೆಗೂ ಡಬ್ ಆಗಲಿದೆ.

ಚಿತ್ರದ ಬಜೆಟ್ ರು.30 ಕೋಟಿ

ಚಿತ್ರದ ಬಜೆಟ್ ಸುಮಾರು ರು.30 ಕೋಟಿ ಅಮೃತಹಳ್ಳಿ ಮಂಜುನಾಥ್ ಬಾಬು ಅವರು ಸರಿಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸುತ್ತಿರುವ ಚಿತ್ರವಿದು.

ತಾಂತ್ರಿಕ ಬಳಗದಲ್ಲಿ ಹಾಲಿವುಡ್ ತಂತ್ರಜ್ಞರು

ಈ ಚಿತ್ರದ ತಾಂತ್ರಿಕ ಬಳಗದಲ್ಲಿ ಹಾಲಿವುಡ್ ಹಾಗೂ ಬಾಲಿವುಡ್ ಚಿತ್ರಗಳಿಗೆ ಕೆಲಸ ಮಾಡಿದ ತಂತ್ರಜ್ಞರಿದ್ದಾರೆ. ಧೂಮ್ 2 ನಂತಹ ಚಿತ್ರಗಳಿಗೆ ವಿಎಫ್ಎಕ್ಸ್ ಮಾಡಿದ ತಂತ್ರಜ್ಞರನ್ನು ಬಳಸಿಕೊಳ್ಳಲಾಗಿದೆ.

ಸುಮಾರು 250 ಥಿಯೇಟರ್ ಗಳಲ್ಲಿ ಬಿಡುಗಡೆ

ಬ್ರಹ್ಮ ಚಿತ್ರವನ್ನು ಸುಮಾರು 250 ರಿಂದ 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತೆಲುಗು ಚಿತ್ರಕ್ಕೆ 'ಬ್ರಹ್ಮ' ಎಂದು ಹೆಸರಿಡಲಾಗಿದೆ.

ಅಮೃತಹಳ್ಳಿ ಬಾಬು ನಿರ್ಮಿಸುತ್ತಿರುವ ಚಿತ್ರ

ಮೈಲಾರಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಂಜುನಾಥ ಬಾಬು (ಅಮೃತಹಳ್ಳಿ) ನಿರ್ಮಿಸುತ್ತಿರುವ ಚಿತ್ರ. ಆರ್.ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಉಪೇಂದ್ರ ಅಭಿನಯಿಸುತ್ತಿದ್ದಾರೆ.

ಪಾತ್ರವರ್ಗದಲ್ಲಿ ಯಾರ್ಯಾರಿದ್ದಾರೆ?

ಪ್ರಣೀತಾ, ರಂಗಾಯಣ ರಘು, ಸಾಧುಕೋಕಿಲ, ಶಯ್ಯಾಜಿ ಶಿಂಧೆ, ನಾಜರ್, ರಾಹುಲ್ ದೇವ್, ಸೋನು ಸೂಧ್, ಸುಭಾಷ್ ಶೆಟ್ಟಿ, ಗಿರೀಶ್ ಕಾರ್ನಾಡ್, ಕಾಟ್ ರಾಜು, ಬುಲೆಟ್ ಪ್ರಕಾಶ್, ಜಾನ್ ಕೊಕೇನ್, ಮಂಗಳೂರು ಸುರೇಶ್, ಲಕ್ಷ್ಮಣ್,ಶರಣ್, ಪದ್ಮಜಾರಾವ್, ಸುಚೇಂದ್ರಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ತಾಂತ್ರಿಕ ಬಳಗದಲ್ಲಿ ಯಾರ್ಯಾರು?

ಶೇಖರ್ ಚಂದ್ರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್, ಇಸ್ಮಾಯಿಲ್ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು, ವಿಜಯ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಆಂಟೋನಿ ಅವರ ನೃತ್ಯ ನಿರ್ದೇಶನ 'ಬ್ರಹ್ಮ' ಚಿತ್ರಕ್ಕಿದೆ.

English summary
Costly fight sequence for the film 'Brahma' was recently shot on Real Star Upendra near Nelamangala. Producer Manjunath Babu almost spent around Rs 70 Lakh to shoot this sequence. Brahma is a historical drama romance film directed by R. Chandru.
Please Wait while comments are loading...