For Quick Alerts
  ALLOW NOTIFICATIONS  
  For Daily Alerts

  ಉಪ್ಪಿಗೆ ಸಿನಿಮಾ ತೋರಿಸಲು ಮುಂದಾದ ಸಲಗ ತಂಡ

  |

  ನಟ ದುನಿಯಾ ವಿಜಯ್ ಅಭಿನಯಿಸಿ, ನಿರ್ದೇಶಿಸಿರುವ ಸಲಗ ಚಿತ್ರ ಬೆಳ್ಳಿ ತೆರೆಗೆ ಅಪ್ಪಳಿಸಿ ಭಾರಿ ಸದ್ದು ಮಾಡುತ್ತಾ ಇದೆ. ಸಲಗ ಸಿನಿಮಾ ಪ್ರೇಕ್ಷಕರ ಮನ ಮುಟ್ಟಿದೆ. ಕೊಂಚ ಅಂತರದ ಬಳಿಕ ಬಂದ ದುನಿಯಾ ವಿಜಯ್ ಸಲಗ ಸಿನಿಮಾದ ಮೂಲಕ ಗೆದ್ದಿದ್ದಾರೆ. ಸಲಗ ನೋಡಿದವರೆಲ್ಲಾ ಸಲಗ ಸೂಪರ್‌ ಎನ್ನುತ್ತಿದ್ದಾರೆ. ಇನ್ನೂ ಸಲಗನಿಗೆ ಸಿನಿಮಾ ಮಂದಿ ಕೂಡ ಫಿದಾ ಆಗಿದ್ದಾರೆ. ಈಗ ಸಲಗ ಸಿನಿಮಾವನ್ನ ನೋಡಲು ರಿಯಲ್ ಸ್ಟಾರ್‌ ಉಪೇಂದ್ರ ಸಜ್ಜಾಗಿದ್ದಾರೆ.

  ಸಲಗ ಸಿನಿಮಾ ತಂಡ ಉಪ್ಪಿಯನ್ನ ಭೇಟಿ ಮಾಡಿದೆ. ಉಪ್ಪಿಗೆ ಸಿನಿಮಾ ತೋರಿಸಲು ಸಲಗ ತಂಡ ಯೋಜನೆ ಹಾಕಿಕೊಂಡಿದೆ. ಇದೇ ವೇಳೆ ಉಪೇಂದ್ರ ಸಲಗ ಚಿತ್ರಕ್ಕೆ ಸಿಕ್ಕಿರುವ ಯಶಸ್ಸಿಗೆ ಶುಭಕೋರಿದ್ದಾರೆ. ಜೊತೆಗೆ ಸದ್ಯದಲ್ಲೇ ಬಿಗ್‌ ಸ್ಕ್ರೀನ್‌ ಮೇಲೆ ಉಪೇಂದ್ರ ಸಲಗ ಸಿನಿಮಾ ನೋಡಲಿದ್ದಾರೆ. ಈ ವಿಚಾರವನ್ನ ಚಿತ್ರತಂಡ ಫಿಲ್ಮೀ ಬೀಟ್‌ ಜೊತೆಗೆ ಹಂಚಿಕೊಂಡಿದೆ.

  ಶಿವರಾಜಕುಮಾರ್ ಮೆಚ್ಚಿದ ಸಲಗ..!

  ಇನ್ನೂ ಇತ್ತೀಚೆಗೆ ನಟ ಶಿವರಾಜ್‌ ಕುಮಾರ್ ಸಲಗ ಸಿನಿಮಾವನ್ನು ನೋಡಿದ್ದರು. . ಶಿವರಾಜ್‌ಕುಮಾರ್‌ ಅವರಿಗಾಗಿ ಚಿತ್ರತಂಡ ವಿಶೇಷ ಪ್ರದರ್ಶನ ಆಯೋಜನೆ ಮಾಡಿತ್ತು. ಸಲಗ ನೋಡಿದ ಶಿವರಾಜ್‍ಕುಮಾರ್ ಸಲಗ ಸೂಪರ್‌ ಅಂದಿದ್ದರು. ದುನಿಯಾ ವಿಜಯ್ ನಿರ್ದೇಶನವನ್ನು ಶಿವರಾಜ್‍ಕುಮಾರ್ ಮೆಚ್ಚಿಕೊಂಡಿದ್ದರು. ಈಗ ಉಪೇಂದ್ರ ಸರದಿ.

  ಸಲಗ ಬರೀ ಸಿನಿಮಾ ಅಲ್ಲ. ಇದು ನಟ ದುನಿಯಾ ವಿಜಯ್ ಕನಸಿನ ಕೂಸು. ಹೀಗೊಂದು ಸಿನಿಮಾ ಮಾಡಬೇಕು ಎಂದು ದುನಿಯಾ ವಿಜಯ್ ಪಣ ತೊಟ್ಟಿದ್ದರು. ಒಂದಷ್ಟು ವಿವಾದಗಳಿಂದಾಗಿ ದುನಿಯಾ ವಿಜಯ್ ನೆಲ ಕಚ್ಚಿದ್ರು. ಮತ್ತೆ ಮೇಲೇಳಲು ವಿಜಯ್‌ಗೆ ಸಲಗ ಸಿನಿಮಾ ತುಂಬಾ ಮುಖ್ಯ ಆಗಿತ್ತು. ಹಾಗಾಗಿಯೆ ವಿಜಯ್ ಸಲಗ ಸಿನಿಮಾ ನಿರ್ದೇಶಕನಕ್ಕೆ ಇಳಿದಿದ್ದು. ಈ ವಿಚಾರವನ್ನ ಸ್ವತಃ ವಿಜಯ್ ಹಲವು ಬಾರಿ ಬಿಚ್ಚಿಟ್ಟಿದ್ದಾರೆ. ಈಗ ಸಲಗ ಮೂಲಕ ಗೆಲವಿನ ನಗೆಯನ್ನು ಬೀರಿದ್ದಾರೆ ವಿಜಯ್. ಸಲಗ ಹೊತ್ತು ಬಂತಾ ಅಷ್ಟೂ ಪಾತ್ರಗಳು ತೆರೆಮೇಲೆ ಜಾದೂ ಮಾಡಿವೆ. ಸಲಗ ಅಂದಾಕ್ಷಣ ಪ್ರತಿ ಪಾತ್ರವೂ ನೆನಪಾಗುವಷ್ಟರ ಮಟ್ಟಿಗೆ ವಿಜಯ್ ನಿರ್ದೇಶಕನಾಗಿ ಕಟ್ಟಿ ಕೊಟ್ಟಿದ್ದಾರೆ. ಸದ್ಯಕ್ಕೆ ವಿಜಯ್ ಮುಂದಿನ ನಡೆ ಮೇಲೆ ಕುತೂಹಲ ಹೆಚ್ಚಾಗಿದೆ. ವಿಜಯ್ ನಿರ್ದೇಶನ ಮುಂದುವರೆಸುತ್ತಾರ..? ಅಥವಾ ನಿರ್ದೇಶಕನ ನಾಯಕನಾಗಿ ಅಭಿನಯ ಮುಂದುವರೆಸುತ್ತಾರಾ ಅನ್ನೋ ವಿಚಾರದ ಬಗ್ಗೆ ಅಭಿಮಾನಿಗಳಲ್ಲಿ ಕೌತುಕ ಮನೆ ಮಾಡಿದೆ.

  English summary
  real star upendara will be watch duniya vijay starar salaga!
  Saturday, October 23, 2021, 18:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X