»   » ಉಪ್ಪಿಟ್ಟು ಉಪೇಂದ್ರ : ವಿಶೇಷ ಸಂದರ್ಶನ

ಉಪ್ಪಿಟ್ಟು ಉಪೇಂದ್ರ : ವಿಶೇಷ ಸಂದರ್ಶನ

By: ಸಂದೇಶ್ ಎಂ ಎಸ್
Subscribe to Filmibeat Kannada

ಚಿತ್ರರಂಗದ ಎಲ್ಲಾ ರಂಗದಲ್ಲೂ ಕೈಯಾಡಿಸಿರುವ 'ಸೂಪರ್ರೋ ರಂಗ' ಉಪೇಂದ್ರ ಈಗ ಚಿತ್ರ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಉಪೇಂದ್ರ ಪ್ರೊಡಕ್ಷನ್ ಮೂಲಕ ಚೊಚ್ಚಲ 'ಉಪ್ಪಿ 2' ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಅವರ ಜನ್ಮದಿನದಂದು ಹೊಸ ಚಿತ್ರಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಸಿ ಆರ್ ಮೋಹನ್ ಜೊತೆಗೂಡಿ ನಿರ್ಮಿಸುತ್ತಿರುವ ಚಿತ್ರಕ್ಕೆ ಖುದ್ದು ಉಪೇಂದ್ರ ಅವರೇ ನಿರ್ದೇಶಕರು. ಉಪ್ಪಿ ಚಿತ್ರ ನಿರ್ದೇಶಿಸುತ್ತಿದ್ದಾರೆಂದರೆ ಅಭಿಮಾನಿಗಳಿಗೆ ಇನ್ನಿಲ್ಲದ ಆಸಕ್ತಿ.

ಕಾಶೀನಾಥ್ ಅವರ ಅನಂತನ ಆವಾಂತರ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಉಪೇಂದ್ರ, ತರ್ಲೆ ನನ್ ಮಗ ಚಿತ್ರದ ಮೂಲಕ ನಿರ್ದೇಶಕರೂ ಆದರು. ತನ್ನ ಮಹತ್ವಾಕಾಂಕ್ಷೆಯ ಉಪ್ಪಿ 2 ಚಿತ್ರದ ಬಗ್ಗೆ ಮತ್ತು ಇತರ ವಿಚಾರಗಳ ಬಗ್ಗೆ ಉಪೇಂದ್ರ ಏನಂತಾರೆ?

ನಮ್ಮ ಸಿನಿ ವರದಿಗಾರರಿಗೆ ಉಪೇಂದ್ರ ನೀಡಿದ ಸಂದರ್ಶನದ ಆಯ್ದ ಭಾಗ ಸ್ಲೈಡಿನಲ್ಲಿದೆ..

ಉಪೇಂದ್ರ ಸಂದರ್ಶನ

ಪ್ರ: ನಿಮ್ಮ ಉಪೇಂದ್ರ ಪ್ರೊಡಕ್ಷನ್ ಬಗ್ಗೆ ಹೇಳಿ. ಹೇಗೆನಿಸುತ್ತೆ ನಿರ್ಮಾಪಕರಾಗಿ?
ಉಪ್ಪಿ: ದೇವರ ದಯೆಯಿಂದ ನನ್ನದೇ ಬ್ಯಾನರ್ ಆರಂಭಿಸಿದ್ದೇನೆ. ಸಮಸ್ತ ಕನ್ನಡಿಗರಲ್ಲಿ, ನನ್ನ ಅಭಿಮಾನಿಗಳಲ್ಲಿ ನನ್ನ ಹೊಸ ಪ್ರೊಡಕ್ಷನ್ ಹೌಸಿಗೆ ಬೆಂಬಲಿಸುವಂತೆ ಕೋರುತ್ತಿದ್ದೇನೆ. ಚಿತ್ರರಸಿಕರಿಗೆ ಉತ್ತಮ, ಸದಭಿರುಚಿಯ ಚಿತ್ರಗಳನ್ನು ನನ್ನ ಬ್ಯಾನರಿನ ಮೂಲಕ ಮುಂದಿನ ದಿನದಲ್ಲಿ ನೀಡುತ್ತೇನೆ.

ಉಪೇಂದ್ರ ಸಂದರ್ಶನ

ಪ್ರ: ಉಪ್ಪಿ 2 ಬಗ್ಗೆ ಹೇಳಿ?
ಉಪ್ಪಿ: ನಗುತ್ತಾ.. ಹೊಸ ಚಿತ್ರದ ಬಗ್ಗೆ ಸದ್ಯ ಯಾವುದೇ ವಿಷಯ ಬಹಿರಂಗ ಪಡಿಸಲು ಆಗುವುದಿಲ್ಲ. ನನ್ನ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಾರೆ ಎನ್ನುವ ನಂಬಿಕೆ ನನಗಿದೆ.

ಉಪೇಂದ್ರ ಸಂದರ್ಶನ

ಪ್ರ: ನೀನು ಎನ್ನುವ ಕಾನ್ಸೆಪ್ಟ್ ಬಗ್ಗೆ ಹೇಳಿ?
ಉಪ್ಪಿ : ನನ್ನ ಹಿಂದಿನ ಉಪೇಂದ್ರ ಚಿತ್ರದಲ್ಲಿ ನಾನು ಎನ್ನುವ ಪದವನ್ನು ಬಳಸಿದ್ದೆ, ಈ ಚಿತ್ರದಲ್ಲಿ ನೀನು ಎನ್ನುವ ಪದ ಬಳಸಿಕೊಂಡಿದ್ದೇನೆ. ನಾನು ಆದಮೇಲೆ ನೀನು. ಅಷ್ಟೇ, ಅದಕ್ಕೆ ವಿಶೇಷ ಅರ್ಥವೇನೂ ಇಲ್ಲ.

ಉಪೇಂದ್ರ ಸಂದರ್ಶನ

ಪ್ರ: ಉಪ್ಪಿ 2 ಯಾವಾಗ ಬಿಡುಗಡೆಯಾಗುತ್ತಿದೆ:
ಉಪ್ಪಿ: ಎಲ್ಲಾ ಅಂದು ಕೊಂಡಂತೆ ನಡೆದರೆ, ನನ್ನ ಮುಂದಿನ ಬರ್ತ್ ಡೇಗೆ (ಸೆ18,2014) ಬಿಡುಗಡೆ ಮಾಡ ಬೇಕೆಂದು ಅಂದು ಕೊಂಡಿದ್ದೇನೆ. Let us see..

ಉಪೇಂದ್ರ ಸಂದರ್ಶನ

ಪ್ರ: ನಿಮಗೆ ಇಷ್ಟವಾದ ನಟ ಯಾರು?
ಉಪ್ಪಿ: ನನಗೆ ಎಲ್ಲಾ ನಟರು ಇಷ್ಟ. ಒಂದೊಂದು ನಟರಲ್ಲಿ ನಾವು ಕಲಿಯುವುದು ಬೇಕಾದಷ್ಟು ಇರುತ್ತೆ.

ಉಪೇಂದ್ರ ಸಂದರ್ಶನ

ಪ್ರ: ನಿಮ್ಮ ಹಿಂದಿನ ಓಂ ಚಿತ್ರದ ಬಗ್ಗೆ ಹೇಳಿ
ಉಪ್ಪಿ: ಓಂ ಚಿತ್ರ ನನಗೆ ಹೆಸರು ತಂದು ಕೊಟ್ಟ ಚಿತ್ರ. ಶಿವಣ್ಣ ಜೊತೆ ಕೆಲಸ ಮಾಡುವುದು ನನಗೆ ಬಹಳ ಇಷ್ಟ. ಶಿವಣ್ಣ ಚಿತ್ರರಂಗದಲ್ಲಿ ಬೇರೂರಿರುವ ನಟನಾದರೂ ಅವರ ಸಿಂಪ್ಲಿಸಿಟಿ ಐ ಲೈಕ್ ಇಟ್.

English summary
Real Star Upendra exclusive interview to Oneindia. He said, acting and direction are very different. If I am directing a movie, I will be whole and soul of the movie. On the other hand, acting is equally challenging, because people considers that.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada