»   » ತೆಲುಗಿನಲ್ಲಿ ಉಪೇಂದ್ರ ವಯಸ್ಕರ ಚಿತ್ರ 'XYZ'

ತೆಲುಗಿನಲ್ಲಿ ಉಪೇಂದ್ರ ವಯಸ್ಕರ ಚಿತ್ರ 'XYZ'

Posted By:
Subscribe to Filmibeat Kannada

ಉಪೇಂದ್ರ ಅವರು ಸದ್ದಿಲ್ಲದಂತೆ ಈ ಚಿತ್ರವನ್ನು ಯಾವಾಗ ಮುಗಿಸಿದರು ಎಂಬುದು ತಾನೆ ನಿಮ್ಮ ಡೌಟು! ಇದು ಖಂಡಿತವಾಗಿಯೂ 'XXX' ಚಿತ್ರ ಅಲ್ಲವೇ ಅಲ್ಲ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿರುವ ವಯಸ್ಕರ ಚಿತ್ರ 'XYZ'. ಸೀಮಾಂಧ್ರ ಪ್ರದೇಶದಲ್ಲಿ ಬಿಡುಗಡೆಯಾಗುತ್ತಿದೆ.

ಇದು ಕನ್ನಡದ 'ಶ್ರೀಮತಿ' ಚಿತ್ರದ ಡಬ್ಬಿಂಗ್ ಆವೃತ್ತಿ. ತೆಲುಗಿನಲ್ಲಿ 'XYZ' ಎಂದು ಹೆಸರಿಡಲಾಗಿದೆ. ಸೆಲೀನಾ ಜೇಟ್ಲಿ, ಪ್ರಿಯಾಂಕಾ ಉಪೇಂದ್ರ ಚಿತ್ರದ ತಾರಾಬಳಗದಲ್ಲಿದ್ದಾರೆ. ಶೀಘ್ರದಲ್ಲೇ ಈ ಚಿತ್ರ ಆಂಧ್ರಪ್ರದೇಶದಲ್ಲಿ ಬಿಡುಗಡೆಯಾಗುತ್ತಿದೆ.


ಈ ಹಿಂದೆ ಉಪೇಂದ್ರ ಅಭಿನಯದ ಸಾಕಷ್ಟು ಚಿತ್ರಗಳು ತೆಲುಗಿನಲ್ಲಿ ತೆರೆಕಂಡಿವೆ. ಕನ್ಯಾದಾನಂ, ಒಕೇಮಾಟ, ರಾ, ನೀತೋನೆ ಉಂಟಾನು, ಟಾಸ್ ಮುಂತಾದ ಚಿತ್ರಗಳ ಮೂಲಕ ತೆಲುಗು ಚಿತ್ರರಂಗದಲ್ಲೂ ಉಪ್ಪಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಈಗ ಚಿತ್ರೀಕರಣ ಭರದಿಂದ ಸಾಗುತ್ತಿರುವ 'ಬ್ರಹ್ಮ' ಚಿತ್ರವೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಉಪೇಂದ್ರ ಅವರದು ಬಿಜಿನೆಸ್ ಮ್ಯಾನ್ ಪಾತ್ರ. ತನ್ನ ಪತ್ನಿಯೊಂದಿಗೆ ಹ್ಯಾಪಿಯಾಗಿರುತ್ತಾನೆ. ಎಲ್ಲವೂ ಚೆನ್ನಾಗಿರಬೇಕಾದರೆ ಆತನ ಬಾಳಿನಲ್ಲಿ ಸುನಾಮಿಯಂತೆ ಗರ್ಲ್ ಫ್ರೆಂಡ್ ಎಂಟ್ರಿ ಕೊಡುತ್ತಾಳೆ. ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸುತ್ತಾಳೆ. ಕಡೆಗೆ ವಕೀಲೆಯಾದ ಆತನ ಪತ್ನಿ ತನ್ನ ಗಂಡ ಅಮಾಯಕ ಎಂಬುದನ್ನು ಸಾಬೀತು ಮಾಡುತ್ತಾಳೆ.

ಅಕ್ಷಯ್ ಕುಮಾರ್ ಅಭಿನಯದ ಬಾಲಿವುಡ್ ಚಿತ್ರ 'ಐತ್ ರಾಜ್' ರೀಮೇಕ್ 'ಶ್ರೀಮತಿ'. ಈಗ ಇದೇ 'ಶ್ರೀಮತಿ' ಚಿತ್ರದ ಡಬ್ಬಿಂಗ್ ಆವೃತ್ತಿ ತೆಲುಗಿನಲ್ಲಿ 'XYZ' ಆಗಿ ತೆರೆಕಾಣುತ್ತಿದೆ. ಜಿಎಂಆರ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಗಾಜುಲ ಮಾಣಿಕ್ಯ ರಾವ್ ಚಿತ್ರದ ಡಬ್ಬಿಂಗ್ ರೈಟ್ಸ್ ಪಡೆದಿದ್ದಾರೆ. ಕನ್ನಡದಲ್ಲಿ ಅಷ್ಟೇನು ಸದ್ದು ಮಾಡದ ಈ ಚಿತ್ರ ತೆಲುಗು ಬಾಕ್ಸ್ ಆಫೀಸ್ ಮೇಲೆ ಕಣ್ಣಿಟ್ಟಿದೆ.

ಜಾನಿಲಾಲ್ ಛಾಯಾಗ್ರಹಣ, ಚಿನ್ನಿಪ್ರಕಾಶ್ ನೃತ್ಯನಿರ್ದೇಶನ, ರಾಜೇಶ್ ರಾಮನಾಥ್ ಸಂಗೀತ ಚಿತ್ರಕ್ಕಿದೆ. ಎಂ ರವಿ ಆಕ್ಷನ್ ಕಟ್ ಹೇಳಿರುವ ಚಿತ್ರ. ಚಿತ್ರದಲ್ಲಿ ಪ್ರಿಯಾಂಕಾ ಹಾಗೂ ಉಪೇಂದ್ರ ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ. ಈ ಭಾನುವಾರ ಡೋಂಟ್ ಮಿಸ್ 'ಶ್ರೀಮತಿ'. (ಒನ್ಇಂಡಿಯಾ ಕನ್ನಡ)

English summary
Real Star Upendra is gearing up to release the dubbed version of his Kannada movie Shrimathi starring Celina Jaitley and Priyanka with him. Titled XYZ in Telugu, the film is expected to hit the screens very soon.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada