»   » ಉಪ್ಪಿ-ಪ್ರಿಯಾಂಕಾ ಆರು ತಿಂಗಳ ಕಾಲ ಡೈವೋರ್ಸ್!

ಉಪ್ಪಿ-ಪ್ರಿಯಾಂಕಾ ಆರು ತಿಂಗಳ ಕಾಲ ಡೈವೋರ್ಸ್!

By: ಜೀವನರಸಿಕ
Subscribe to Filmibeat Kannada

ಪ್ರಿಯಾಂಕಾ ಉಪೇಂದ್ರಗೆ ರಿಯಲ್ ಸ್ಟಾರ್ ಉಪೇಂದ್ರ ಆರು ತಿಂಗಳ ಮಟ್ಟಿಗೆ ನಾನು ನಿನ್ನ ಗಂಡ ಅಲ್ಲ ಅಂತ ಬಿಟ್ಟುಬಿಡು ಅಂದಿದ್ದಾರೆ. ಉಪ್ಪಿ ಹೀಗೆ ಹೇಳಿರೋದು ಕೋಪದಿಂದಲ್ಲ ಶಾಂತರಾಗಿಯೇ ರಿಯಲ್ ಸ್ಟಾರ್ ಈ ಡೈಲಾಗ್ ಹೇಳಿದ್ದಾರೆ. ಉಪ್ಪಿ ಹೀಗೆ ಹೇಳೋಕೆ ಕಾರಣವೂ ಇದೆ.

ರಿಯಲ್ ಸ್ಟಾರ್ ಹೀಗೆ ಹೇಳಿರೋದು 'ಉಪ್ಪಿ-2' ಸಿನಿಮಾದ ಆಡಿಯೋ ರೆಕಾರ್ಡಿಂಗ್ ಪತ್ರಿಕಾಗೋಷ್ಠಿಯಲ್ಲಿ. ಅಂದಹಾಗೆ ಉಪ್ಪಿ ಕೂಲ್ ಕೂಲಾಗಿ ತಮ್ಮ ಪತ್ನಿ ಪ್ರಿಯಾಂಕಾರಿಗೆ ಪತ್ರಕರ್ತರ ಮಧ್ಯೇನೇ ಕೈ ಕೊಟ್ರು, ದಯವಿಟ್ಟು ಇನ್ನು ಆರು ತಿಂಗಳು ನನ್ನನ್ನ ಗಂಡ ಅನ್ನೋದನ್ನ ಮರೆತುಬಿಡಿ ನಾನೊಬ್ಬ ನಿರ್ದೇಶಕ ಅಂದ್ರು.

ಉಪ್ಪಿ ತಮ್ಮ ಮುಂದಿನ ಬಹುನಿರೀಕ್ಷಿತ 'ಉಪ್ಪಿ-2' ಸಿನಿಮಾದ ಬಗ್ಗೆ ದೊಡ್ಡ ಪ್ಲ್ಯಾನ್ ಇಟ್ಟುಕೊಂಡಿದ್ದಾರೆ. ಸದ್ಯ 'ಬಸವಣ್ಣ' ಶೂಟಿಂಗ್ ನಾಲ್ಕು ದಿನ 'ಸೂಪರೋ ರಂಗ' ಶೂಟಿಂಗ್ ಏಪ್ರಿಲ್ 16ರ ವರೆಗೂ ಇರೋದು ಬಿಟ್ರೆ ಮೇ ಮೊದಲಿಂದಲೇ ಬಹು ನಿರೀಕ್ಷಿತ 'ಉಪ್ಪಿ-2' ಚಿತ್ರೀಕರಣ ಶುರುವಾಗಲಿದೆ. [ಉಪೇಂದ್ರ 'ಉಪ್ಪಿ 2' ಬಗ್ಗೆ ಕೈಕೈ ಹಿಸುಕಿಕೊಂಡವರು!]

ಹೀಗೆ ಒಂದಷ್ಟು ಮಾಹಿತಿ ಒಂದಷ್ಟು ಫನ್ ಜೊತೆ ಆಡಿಯೋ ರೆಕಾರ್ಡಿಂಗ್ ಪ್ರೆಸ್ ಮೀಟ್ ನಲ್ಲಿ 'ಉಪ್ಪಿ-2' ಸಿನಿಮಾ ಬಗ್ಗೆ ಉಪೇಂದ್ರ ಬಿಚ್ಚಿಟ್ಟ ಕೆಲವು ಕುತೂಹಕರ ಸಂಗತಿಗಳನ್ನ ನಿಮ್ ಮುಂದೆ ಇಡ್ತಾ ಇದ್ದೀವಿ ಮಿಸ್ ಮಾಡ್ದೇ ಓದಿ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

10 ವರ್ಷಗಳಿಂದ ತಯಾರಿ ಮಾಡ್ತಿದ್ದಾರೆ ಉಪ್ಪಿ

ಉಪ್ಪಿ-2 ಸಿನಿಮಾಗೆ ಉಪೇಂದ್ರ 10 ವರ್ಷಗಳ ತನ್ನೊಳಗೆ ತಾನೇ ತಯಾರಾಗ್ತಿದ್ದಾರಂತೆ. ಉಪೇಂದ್ರ ಮುಗಿದ ನಂತರ ಈ ಸಬ್ಜೆಕ್ಟ್ ಉಪೇಂದ್ರರನ್ನ ಬಿಡ್ತಾ ಇಲ್ಲವಂತೆ.

ಉಪ್ಪಿ-2 ಬೆಂಬಿಡದೆ ಕಾಡ್ತಿರೋ ಸಬ್ಜೆಕ್ಟ್

ಈ ಸಿನಿಮಾವನ್ನ ಮುಗಿಸದೇ ಉಪ್ಪಿ ಮತ್ಯಾವುದನ್ನೂ ಮಾಡೋದಿಲ್ವಂತೆ. ಇದೊಂದು ಕಾನ್ಸೆಪ್ಟ್ ಅವ್ರನ್ನ ತೀವ್ರವಾಗಿ ಕಾಡ್ತಿದೆಯಂತೆ. ಆದ್ರೆ ಆ ಕಾನ್ಸೆಪ್ಟ್ ಹೇಳೋಕೆ ಉಪ್ಪಿ ತಯಾರಿಲ್ಲ.

ಚಿತ್ರಕಥೆಯನ್ನ ಕದ್ದರೂ ಅರ್ಥವಾಗಲ್ಲ

ಸಿನಿಮಾ ಡಿಫ್ರೆಂಟ್ ಆಗಿರೋ ಬಗ್ಗೆ ಉಪ್ಪಿಗೆ ಎಂತಹಾ ಕಾನ್ಫಿಡೆನ್ಸ್ ಇದೆ ಅಂದ್ರೆ ಈ ಸ್ಕ್ರೀನ್ ಪ್ಲೇ ಮತ್ತು ಕಥೆಯನ್ನ ಕದ್ದರೂ ಬೇರೆ ಯಾರಿಗೂ ತಾನು ಅಂದುಕೊಂಡ ಸಿನಿಮಾ ಮಾಡೋಕಾಗಲ್ವಂತೆ. ಅಷ್ಟರಮಟ್ಟಿಗೆ ಉಪ್ಪಿ ಖುಷಿಯಾಗಿದ್ದಾರೆ.

ಡಿಫ್ರೆಂಟ್ ಗೊತ್ತಿಲ್ಲ ಆದ್ರೆ ಹೊಸತನ್ನ ಮಾಡೋ ಪ್ರಯತ್ನ

ಇನ್ನು ನೀವು ಡಿಫ್ರೆಂಟ್ ಸಿನಿಮಾ ಮಾಡೋದು ಹೇಗೆ ಅಂತ ಉಪ್ಪಿಯವ್ರನ್ನ ಕೇಳಿದ್ರೆ ನಾನೇನು ಡಿಫ್ರೆಂಟ್ ಮಾಡಲ್ಲ. ಹೊಸತನ್ನ ಟ್ರೈ ಮಾಡ್ತೀನಿ ಅಷ್ಟೇ ಅಂತಾರೆ.

ಉಪೇಂದ್ರ ನಾನು ಉಪ್ಪಿ-2 ನೀನು

ಉಪೇಂದ್ರ ಸಿನಿಮಾದಲ್ಲಿ ನಾನು ಅಂದ್ರೆ ಯಾರು ಅನ್ನೋ ಕ್ಯೂರಿಯಸಿಟಿ ಹುಟ್ಟುಹಾಕಿದ್ದ ಉಪ್ಪಿ ತಲೆಗೆ ಹುಳ ಬಿಟ್ಟು ಗೆದ್ದಿದ್ರು ಈ ಬಾರಿ ನೀನು ಯಾರು ಅಂತ ಹೇಳೋಕೆ ಹೊರಟಿದ್ದಾರಂತೆ ಇದ್ರಲ್ಲಿ ಇನ್ನೇನು ಹುಳ ಬಿಡ್ತಾರೋ.

ಗಂಡ ಮನೆಯಲ್ಲಿ ರೋಮ್ಯಾಂಟಿಕ್ ಅಲ್ಲ ಅಂತಾರೆ ಪ್ರಿಯಾಂಕಾ

ಉಪ್ಪಿ ಸಿನಿಮಾದಲ್ಲಿ ಮಾತ್ರ ರೋಮ್ಯಾಂಟಿಕ್ ಮೂಡ್ನಲ್ಲಿರ್ತಾರೆ. ಮನೆಯಲ್ಲಿ ಉಪ್ಪಿ ಸಿನಿಮಾ ಬಗ್ಗೇನೇ ಯೋಚನೆ ಮಾಡ್ತಿರ್ತಾರೆ ಅನ್ನೋದು ಪತ್ನಿ ಪ್ರಿಯಾಂಕಾ ದೂರು.

ಫ್ಯಾಮಿಲಿಗೆ ಅರ್ಧ ಗಂಟೆ ಟೈಮ್ ಕೊಡಿ ಅಂತಾರೆ ಪ್ರಿಯಾಂಕಾ

ಇನ್ನು ಆರು ತಿಂಗಳು ಗಂಡ ಅಲ್ಲ ಡೈರೆಕ್ಟರ್ ಅಂತಾರಲ್ಲ ಉಪ್ಪಿ ಅಂದ್ರೆ, ಪ್ರಿಯಾಂಕಾ ಹೇಳ್ತಾರೆ, "ಅವ್ರು ಮನೆಯಲ್ಲಿ ಫ್ಯಾಮಿಲಿಗೆ ಟೈಮೇ ಕೊಡಲ್ಲ ಅಂತ. ಅರ್ಧ ಗಂಟೆ ಟೈಂ ಕೊಟ್ರೆ ಮಕ್ಕಳ ಜೊತೆ ಕಾಲ ಕಳೀಬಹುದು ಅಂತಾರೆ.

ಪ್ರಿಯಾಂಕಾ ಪ್ರೊಡ್ಯೂಸರ್ ಉಪ್ಪಿ ಡೈರೆಕ್ಟರ್

ಕಮಾನ್ ಕಮಾನ್ ಡೈರೆಕ್ಟರ್ ಅಂತ ಉಪ್ಪಿ ಇಲ್ಲಿ ಡೈರೆಕ್ಟರ್ ಟೊಪಿ ಹಾಕಿದ್ರೆ ಪ್ರಿಯಾಂಕಾ ಪ್ರೊಡ್ಯೂಸರ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಗಂಡ ಹೆಂಡತಿ ಕಾಂಬಿನೇಷನ್ನಲ್ಲಿ ಸಿನಿಮಾ ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಿಗಿದೆ.

ಗುರುಕಿರಣ್ ಸಂಗೀತ ಅಶೋಕ್ ಕಶ್ಯಪ್ ಕ್ಯಾಮೆರಾ ಕಮಾಲ್

ಉಪೇಂದ್ರ ಸಿನಿಮಾಗೆ ಮಸ್ತ್ ಮಸ್ತ್ ಹುಡುಗಿ ಬಂದ್ಳು ಅಂತ ಹುಚ್ಚೆಬ್ಬಿಸೋ ಸಂಗೀತ ನೀಡಿದ್ದ ಗುರುಕಿರಣ್ ಆರು ಹಾಡುಗಳನ್ನ ನೀಡಲಿದ್ದು ಹೊಸ ಸೌಂಡಿಂಗ್ ಕೊಡೋ ಪ್ರಯತ್ನದಲ್ಲಿದ್ದಾರಂತೆ. ಇನ್ನು ಸೂಪರ್ ಕ್ಯಾಮೆರಾಮನ್ ಅಶೋಕ್ ಕಶ್ಯಪ್ ಕ್ಯಾಮೆರಾ ಕಮಾಲ್ ಇಲ್ಲೂ ಮುಂದುವರಿಯಲಿದೆ.

ಯಾರಾಗ್ತಾರೆ ಉಪ್ಪಿ-2ಗೆ ಉಪ್ಪಿ ಜೋಡಿ

ಉಪ್ಪಿ-2ಗೆ ಹೀರೋಯಿನ್ ಗೆ ಡರ್ಟಿ ಬ್ಯೂಟಿ ವಿದ್ಯಾ ಬಾಲನ್ ರನ್ನ ಕರೆತರೋ ಪ್ರಯತ್ನದಲ್ಲಿದೆ ಅನ್ನೋ ಸುದ್ದಿ ಇತ್ತು. ಆದ್ರೆ ಅದು ಮುಂದಿನ ತಿಂಗಳು ಅಂದ್ರೆ ಮೇನಲ್ಲಿ ತಿಳಿಯಲಿದೆ.

English summary
Real Star Upendra all set to start his upcoming project 'Uppi 2', recently the audio recording begins in Bangalore. At this time the Real Star said, he wants to get away from his wife Priyanka Upendra at least six months. Uppi 2 is a Sequel of 1999 Blockbuster Upendra.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada