For Quick Alerts
  ALLOW NOTIFICATIONS  
  For Daily Alerts

  'ನಾಗರಹಾವು' ಚಿತ್ರದಲ್ಲಿ ಉಪ್ಪಿಗೆ ಹೆಚ್ಚು ಕಾಡುವ ದೃಶ್ಯ ಯಾವುದು.?

  By Bharath Kumar
  |
  Nagarahaavu 2018 : ನಾಗರಹಾವು ಸಿನಿಮಾದ ಆ ದೃಷ್ಯ ಉಪ್ಪಿಯನ್ನು ಕಾಡುತ್ತಂತೆ..! | Filmibeat Kannada

  ಪುಟ್ಟಣ್ಣ ಕಣಗಾಲ್ ನಿರ್ದೇಶನ ಹಾಗೂ ವಿಷ್ಣುವಧನ್ ಅಭಿನಯದಲ್ಲಿ ಮೂಡಿ ಬಂದಿದ್ದ ಎವರ್ ಗ್ರೀನ್ ಸಿನಿಮಾ 'ನಾಗರಹಾವು' ಮತ್ತೆ ಹೊಸ ತಂತ್ರಜ್ಞಾನದಲ್ಲಿ ಇದೇ ವಾರ (ಜುಲೈ 20) ರಿ-ರಿಲೀಸ್ ಆಗುತ್ತಿದೆ.

  ಈ ಚಿತ್ರವನ್ನ ನೋಡಲು ಅಭಿಮಾನಿಗಳಷ್ಟೇ ಅಲ್ಲದೇ ಸ್ಯಾಂಡಲ್ ವುಡ್ ತಾರೆಯರು ಕೂಡ ಕಾಯ್ತಿದ್ದಾರೆ. ಶಿವರಾಜ್ ಕುಮಾರ್, ಅಂಬರೀಶ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಅನೇಕರ ನಾಗರಹಾವು ಸಿನಿಮಾ ನೋಡಿದ ಅನುಭವ ಹಂಚಿಕೊಂಡಿದ್ದರು.

  ಇದೀಗ, ರಿಯಲ್ ಸ್ಟಾರ್ ಉಪೇಂದ್ರ ಅವರ 'ನಾಗರಹಾವು' ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ವಿಷ್ಯಗಳನ್ನ ಹೇಳಿಕೊಂಡಿದ್ದಾರೆ. ವಿಶೇಷ ಅಂದ್ರೆ ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾವನ್ನ ಉಪೇಂದ್ರ ಅವರು ನೋಡಿದ ಮೊದಲ ಸಿನಿಮಾ ಅಂತೆ. ಹಾಗಿದ್ರೆ, ರಾಮಾಚಾರಿಯ ಬಗ್ಗೆ ರಿಯಲ್ ಸ್ಟಾರ್ ಏನಂದ್ರು.? ಮುಂದೆ ಓದಿ....

  ನಾನು ನೋಡಿದ ಮೊದಲ ಸಿನಿಮಾ

  ನಾನು ನೋಡಿದ ಮೊದಲ ಸಿನಿಮಾ

  ''ನಾನು ನೋಡಿರುವ ಮೊದಲ ಸಿನಿಮಾ ನಾಗರಹಾವು. ಆಗ ನನಗೆ ಮೂರು ಅಥವಾ ನಾಲ್ಕು ವಯಸ್ಸಾಗಿರಬಹುದು. ಇದನ್ನ ಅಮ್ಮನೇ ನನಗೆ ಹೇಳಿದ್ದು. ಆಮೇಲೆ ಸಾಕಷ್ಟು ಬಾರಿ ನಾಗರಹಾವು ನೋಡಿದ್ದೀನಿ'' - ಉಪೇಂದ್ರ

  'ನಾಗರಹಾವು' ಸಿನಿಮಾ ನೋಡಿ ಪುಟ್ಟಣ್ಣ ಬಳಿ ಶಿವಣ್ಣ ಹೇಳಿದ್ದೇನು.?'ನಾಗರಹಾವು' ಸಿನಿಮಾ ನೋಡಿ ಪುಟ್ಟಣ್ಣ ಬಳಿ ಶಿವಣ್ಣ ಹೇಳಿದ್ದೇನು.?

  ಈಗಲೂ ಕಾಡುವ ದೃಶ್ಯ

  ಈಗಲೂ ಕಾಡುವ ದೃಶ್ಯ

  ''ರಾಮಾಚಾರಿ ಬೆಟ್ಟದಿಂದ ಮೇಷ್ಟ್ರನ್ನ ತಳ್ಳಿದಾಗ ಮೇಷ್ಟ್ರು ಅಲ್ಲಿಂದ ಉರುಳಿಕೊಂಡು ಬರುವುದು ಈಗಲೂ ಕಾಡುವ ದೃಶ್ಯ. ಇದೊಂದು ದೃಶ್ಯಕಾವ್ಯ. ಅಂಗ್ರಿ ಯಂಗ್ ಮ್ಯಾನ್ ಲುಕ್, ಆ ಲೋಕೆಶನ್ ಶೂಟ್ ಮಾಡಿರುವ ರೀತಿ. ಈಗಲೂ ಈ ಚಿತ್ರದ ನೋಡಿದ ಎಲ್ಲೆಲ್ಲಿ ಕ್ಯಾಮೆರಾ ಇಟ್ಟು ಚಿತ್ರೀಕರಣ ಮಾಡಿದ್ದರು ಎಂದು ಆಲೋಚಿಸುತ್ತೆ'' - ಉಪೇಂದ್ರ

  ಪುಟ್ಟಣ್ಣ ಕಲ್ಪನೆಗೆ ಹ್ಯಾಟ್ಸಾಪ್

  ಪುಟ್ಟಣ್ಣ ಕಲ್ಪನೆಗೆ ಹ್ಯಾಟ್ಸಾಪ್

  ಯಾವುದೇ ಕಾದಂಬರಿ ತಗೊಂಡರು, ಅದಕ್ಕೆ ಅವರದ್ದೇ ಆದ ಭಾವನೆಗಳನ್ನ ತುಂಬುವಲ್ಲಿ ಪುಟ್ಟಣ್ಣ ಮಾಡ್ತಿದ್ರು. ಹಾಡುಗಳು ಸಾಹಿತ್ಯ, ಮೇಕಿಂಗ್, ಪಾತ್ರಗಳ ಆಯ್ಕೆ ಇರಬಹುದು. ಈಗಲೂ ಆ ಮೇಷ್ಟ್ರು ಪಾತ್ರ ಮರೆಯೋಕೆ ಆಗಲ್ಲ. ಕಥೆ ಹೇಳುವೆ ಹಾಡು ಮತ್ತು ಚಿತ್ರದುರ್ಗದ ಕಥೆ ಹೇಳುವ ಹಾಡು, ಎರಡ್ಮೂರು ನಿಮಿಷ ಬರುವ ಜಯಂತಿ ಅವರು ಇಡೀ ಸಿನಿಮಾದ ಕ್ರೆಡಿಟ್ ತಗೊಳ್ತಾರೆ. ಚಂದ್ರನಲ್ಲದಾರೂ ಒಂದು ದೃಷ್ಟಿ ಚುಕ್ಕೆ ಇರುತ್ತೆ. ಆದ್ರೆ, ನಾಗರಹಾವು ಚಿತ್ರದಲ್ಲಿಲ್ಲ ಅನಿಸುತ್ತೆ.

  'ನಾಗರಹಾವು' ಚಿತ್ರಕ್ಕಾಗಿ ಮತ್ತೆ ವಿಷ್ಣು ಫ್ಯಾನ್ ಆದ ರಾಕಿಂಗ್ ಸ್ಟಾರ್'ನಾಗರಹಾವು' ಚಿತ್ರಕ್ಕಾಗಿ ಮತ್ತೆ ವಿಷ್ಣು ಫ್ಯಾನ್ ಆದ ರಾಕಿಂಗ್ ಸ್ಟಾರ್

  ವಿಷ್ಣು ಸರ್ ಇಲ್ಲದೇ ನಾಗರಹಾವಿಲ್ಲ

  ವಿಷ್ಣು ಸರ್ ಇಲ್ಲದೇ ನಾಗರಹಾವಿಲ್ಲ

  ''ನಾಗರಹಾವು ಸಿನಿಮಾ ಆದ್ಮೇಲೆ ವಿಷ್ಣು ಸರ್ ಸೂಪರ್ ಸ್ಟಾರ್ ಆಗ್ಬಿಟ್ರು. ಅದಾದ ಮೇಲೆ ಎಷ್ಟೇ ಸಿನಿಮಾ ಮಾಡಿದ್ರು ನಮಗೆ ಅದೇ ರಾಮಾಚಾರಿಯಾಗಿಯೇ ಕಾಣಿಸ್ತಿದ್ರು. ಈ ಸಿನಿಮಾ ಬಗ್ಗೆ ಅನೇಕ ಸಲ ವಿಷ್ಣು ಸರ್ ಬಳಿ ಮಾತನಾಡಿದ್ದೆ. ''ನೀವಿಲ್ಲದೇ ನಾಗರಹಾವು ನೋಡಲು ಸಾಧ್ಯವಿಲ್ಲ ಅಂತ ವಿಷ್ಣು ಸರ್ ಬಳಿ'' ಹೇಳಿದ್ದೆ. ಆಗ ಅವರು. ಹಾಗೇನು ಇಲ್ಲ, ಪುಟ್ಟಣ್ಣ ಹೇಳಿದಾಗೆ ನಾನು ನಟಿಸುತ್ತಿದ್ದೆ. ಎಲ್ಲವೂ ಅವರಿಂದಲೇ. ನಾನು ಅದರ ಭಾಗವಾಗಿರುವುದು ನನ್ನ ಸಂತೋಷ'' ಎನ್ನುತ್ತಿದ್ದರು'' - ಉಪೇಂದ್ರ

  'ನಾಗರಹಾವು' ನೋಡೋಕೆ ಶಿವಣ್ಣ, ಸುದೀಪ್, ಯಶ್, ಉಪ್ಪಿ ರೆಡಿ 'ನಾಗರಹಾವು' ನೋಡೋಕೆ ಶಿವಣ್ಣ, ಸುದೀಪ್, ಯಶ್, ಉಪ್ಪಿ ರೆಡಿ

  ಆಗಲೂ-ಈಗಲೂ-ಮುಂದೆಯೂ ನೋಡಲೇಬೆಕಾದ ಚಿತ್ರ

  ಆಗಲೂ-ಈಗಲೂ-ಮುಂದೆಯೂ ನೋಡಲೇಬೆಕಾದ ಚಿತ್ರ

  ''ಕೆಲವು ಸಿನಿಮಾಗಳನ್ನ ಮಿಸ್ ಮಾಡಿಕೊಳ್ಳಬಾರದು ಅಂತಾರೆ. ಅದರಲ್ಲಿ ಈ ಸಿನಿಮಾನೂ ಅಷ್ಟೇ. ಈ ಸಿನಿಮಾ ನೋಡಲೇಬೇಕು. ಈಗಿನಿ ಜನರೇಷನ್ ಗೆ ಇದು ಅಪ್ ಡೇಟೆಡ್ ಸಿನಿಮಾ. ಮುಂದೆ ಸಿನಿಮಾ ಮಾಡ್ಬೇಕು ಅನ್ನೋರು ಈ ಚಿತ್ರವನ್ನ ನೋಡಬೇಕು'' - ಉಪೇಂದ್ರ

  English summary
  Kannada actor realstar upendra spoke about dr vishnuvardhan's first movie 'nagarahavu'. the movie re releasing on july 20th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X