For Quick Alerts
  ALLOW NOTIFICATIONS  
  For Daily Alerts

  'ಮರಿ ಟೈಗರ್' ಚಿತ್ರಗಳಿಗೆ ದರ್ಶನ್ ಕ್ಲಾಪ್ ಮಾಡೋದರ ಗುಟ್ಟು ರಟ್ಟು

  By Bharath Kumar
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುತೇಕ ಚಿತ್ರಗಳ ಮೊದಲ ಶಾಟ್ ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿದ್ದಾರೆ. ಅದೇ ರೀತಿ ದರ್ಶನ್ ಅವರ ಹಲವು ಚಿತ್ರಗಳಿಗೂ ರವಿಚಂದ್ರನ್ ಕ್ಲಾಪ್ ಮಾಡಿರುವುದು ಉಂಟು.

  ಇನ್ನು ಡಾ ರಾಜ್ ಕುಮಾರ್ ಮಾಡುತ್ತಿದ್ದ ಚಿತ್ರಗಳಿಗೆ ವರದಣ್ಣ ಅವರ ಕಥೆಗಳನ್ನ ಕೇಳುತ್ತಿದ್ದರಂತೆ. ಹೀಗೆ, ಕೆಲವು ಸ್ಟಾರ್ ಗಳ ಚಿತ್ರಗಳಿಗೆ ಇಂತವರೇ ಕ್ಲಾಪ್ ಮಾಡುವುದು, ಕ್ಯಾಮೆರಾಗೆ ಚಾಲನೆ ಮಾಡುವುದು ಇಂಡಸ್ಟ್ರಿಯಲ್ಲಿ ಹೆಚ್ಚು ಹೆಚ್ಚು ಗಮನ ಸೆಳೆದಿದೆ.

  ಮತ್ತೆ ಸ್ನೇಹಿತನ ಪರವಾಗಿ ನಿಂತ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಮತ್ತೆ ಸ್ನೇಹಿತನ ಪರವಾಗಿ ನಿಂತ 'ಚಾಲೆಂಜಿಂಗ್ ಸ್ಟಾರ್' ದರ್ಶನ್

  ಇದನ್ನ ಒಂದು ಟ್ರೆಂಡ್ ಎನ್ನಬಹುದಾ, ನಂಬಿಕೆ ಎನ್ನಬಹುದಾ, ಸಂಪ್ರದಾಯ ಎನ್ನಬಹುದಾ ಅಥವಾ ಅದೃಷ್ಟ ಎನ್ನಬಹುದಾ ಗೊತ್ತಿಲ್ಲ. ಆದ್ರೆ, ಇದೊಂದು ರೀತಿಯಲ್ಲಿ ರೆಗ್ಯೂಲರ್ ಆಗಿ ನಡೆದುಕೊಂಡೇ ಬರುತ್ತಿದೆ. ಈಗ ಟೈಗರ್ ವಿನೋದ್ ಪ್ರಭಾಕರ್ ಅವರ ಬಹುತೇಕ ಚಿತ್ರಗಳಿಗೆ ದರ್ಶನ್ ಅವರೇ ಕ್ಲಾಪ್ ಮಾಡುತ್ತಿದ್ದಾರೆ. ಅದು ಯಾಕೆ ಎಂಬುದನ್ನ ಸ್ವತಃ ವಿನೋದ್ ಪ್ರಭಾಕರ್ ಅವರೇ ಹೇಳಿಕೊಂಡಿದ್ದಾರೆ. ಮುಂದೆ ಓದಿ.....

  ಹ್ಯಾಟ್ರಿಕ್ ಬಾರಿಸಿದ ದರ್ಶನ್-ಟೈಗರ್

  ಹ್ಯಾಟ್ರಿಕ್ ಬಾರಿಸಿದ ದರ್ಶನ್-ಟೈಗರ್

  ವಿನೋದ್ ಪ್ರಭಾಕರ್ ಅಭಿನಯದ ಸತತ ಮೂರು ಚಿತ್ರಗಳಿಗೆ ದರ್ಶನ್ ಕ್ಲಾಪ್ ಮಾಡಿದ್ದಾರೆ. 'ರಗಡ್', 'ಸಿಎಂ' (ಇನ್ನು ಟೈಟಲ್ ಫಿಕ್ಸ್ ಆಗಿಲ್ಲ), ಹಾಗೂ 'ಫೈಟರ್' ಚಿತ್ರಗಳಿಗೆ ಚಾಲೆಂಜಿಂಗ್ ಸ್ಟಾರ್ ಕ್ಲಾಪ್ ಮಾಡಿ ಶುಭಕೋರಿದ್ದಾರೆ.

  ಎಲ್ಲ ಚಿತ್ರಕ್ಕೂ ಅವರೇ

  ಎಲ್ಲ ಚಿತ್ರಕ್ಕೂ ಅವರೇ

  ''ಈ ಸಿನಿಮಾ ಮಾತ್ರವಲ್ಲ, ನನ್ನ ವೃತ್ತಿ ಜೀವನದಲ್ಲಿ ಎಷ್ಟು ಸಿನಿಮಾ ಮಾಡ್ತಿನೋ ಆ ಎಲ್ಲ ಚಿತ್ರಗಳಿಗೂ ದರ್ಶನ್ ಅವರೇ ಕ್ಲಾಪ್ ಮಾಡ್ತಾರೆ'' ಎನ್ನುತ್ತಾರೆ ವಿನೋದ್ ಪ್ರಭಾಕರ್.

  ಮರಿ ಟೈಗರ್ ಗೆ ಸಾಥ್ ನೀಡಿದ ಚಾಲೆಂಜಿಂಗ್ ಸ್ಟಾರ್ಮರಿ ಟೈಗರ್ ಗೆ ಸಾಥ್ ನೀಡಿದ ಚಾಲೆಂಜಿಂಗ್ ಸ್ಟಾರ್

  ದರ್ಶನ್ ಕೂಡ ಅದೇ ಹೇಳಿದ್ದಾರೆ

  ದರ್ಶನ್ ಕೂಡ ಅದೇ ಹೇಳಿದ್ದಾರೆ

  ಅಂದ್ರೆ, ಹೀಗಂತಾ ಕೇವಲ ವಿನೋದ್ ಪ್ರಭಾಕರ್ ಮಾತ್ರ ಹೇಳಿಕೊಂಡಿದ್ದಲ್ಲ. ಇದನ್ನ ಸ್ವತಃ ದರ್ಶನ್ ಅವರೇ ಮರಿ ಟೈಗರ್ ಗೆ ಹೇಳಿದ್ದಾರಂತೆ. ಇದೊಂದು ರೀತಿ ಅದೃಷ್ಟ ಎಂದೇ ವಿನೋದ್ ಸಂತಸ ವ್ಯಕ್ತಪಡಿಸಿದ್ದಾರೆ.

  'ಜಗ್ಗುದಾದ'ನ ಸ್ನೇಹದ ಬಗ್ಗೆ ಭಾವುಕರಾದ 'ಮರಿ ಟೈಗರ್' 'ಜಗ್ಗುದಾದ'ನ ಸ್ನೇಹದ ಬಗ್ಗೆ ಭಾವುಕರಾದ 'ಮರಿ ಟೈಗರ್'

  'ಮರಿ ಟೈಗರ್'ಗೆ ಫುಲ್ ಸಾಥ್

  'ಮರಿ ಟೈಗರ್'ಗೆ ಫುಲ್ ಸಾಥ್

  ಅಂದ್ಹಾಗೆ, ದರ್ಶನ್ ಹಾಗೂ ವಿನೋದ್ ಪ್ರಭಾಕರ್ ಅವರ ಸ್ನೇಹ ನಿನ್ನೆ ಮೊನ್ನೆಯದಲ್ಲ. ತುಂಬಾ ವರ್ಷಗಳ ಸ್ನೇಹ. ಇಬ್ಬರು ಖ್ಯಾತ ಖಳನಾಯಕರ ಮಕ್ಕಳು. ಹೀಗಾಗಿ, ಆತ್ಮೀಯತೆ ಹೆಚ್ಚು. ಕೇವಲ ಸಿನಿಮಾಗೆ ಕ್ಲಾಪ್ ಮಾಡುವುದು ಮಾತ್ರವಲ್ಲ, ಚಿತ್ರದ ಉದ್ದಕ್ಕೂ ದರ್ಶನ್ ಸಾಥ್ ನೀಡುತ್ತಾರೆ, ನೀಡಿದ್ದಾರೆ ಕೂಡ ಹೌದು.

  'ಯಜಮಾನ' ಸೆಟ್ ನಲ್ಲಿ ಟೈಗರ್

  'ಯಜಮಾನ' ಸೆಟ್ ನಲ್ಲಿ ಟೈಗರ್

  'ಯಜಮಾನ' ಸಿನಿಮಾದ ಶೂಟಿಂಗ್ ಸೆಟ್ ಗೆ ವಿನೋದ್ ಪ್ರಭಾಕರ್ ಭೇಟಿ ನೀಡಿದ್ದರು. ಗೆಳೆಯ ದರ್ಶನ್ ಅವರ ಚಿತ್ರೀಕರಣವನ್ನು ನೋಡಿ ಕೆಲಕಾಲ ಅವರ ಜೊತೆಗೆ ಮಾತನಾಡಿದರು. ವಿಶೇಷ ಅಂದರೆ ಈ ಚಿತ್ರದ ಒಂದು ಹಾಡಿನಲ್ಲಿ ವಿನೋದ್ ಪ್ರಭಾಕರ್ ಕೂಡ ಇದ್ದಾರೆ.

  'ಯಜಮಾನ' ದರ್ಶನ್ ಜೊತೆ ಕಾಣಿಸಿದ ಗೆಳೆಯ ವಿನೋದ್ ಪ್ರಭಾಕರ್'ಯಜಮಾನ' ದರ್ಶನ್ ಜೊತೆ ಕಾಣಿಸಿದ ಗೆಳೆಯ ವಿನೋದ್ ಪ್ರಭಾಕರ್

  English summary
  Relation between Challenging Star Darshan and Vinod Prabhakar. recently Vinod Prabhakar visited Darshan's 'Yajamana' movie shooting set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X