»   » ಟಿವಿ ರೈಟ್ಸ್ ನಲ್ಲಿ 'ಅಂಬರೀಶ'ನಿಗೆ ಭರ್ಜರಿ ಬೆಲೆ

ಟಿವಿ ರೈಟ್ಸ್ ನಲ್ಲಿ 'ಅಂಬರೀಶ'ನಿಗೆ ಭರ್ಜರಿ ಬೆಲೆ

By: ಉದಯರವಿ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಗಳಿಗೆ ಭರ್ಜರಿ ಮಾರುಕಟ್ಟೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅವರ ಲೇಟೆಸ್ಟ್ 'ಅಂಬರೀಶ' ಚಿತ್ರದ ಟಿವಿ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿವೆ. ಮೂಲಗಳ ಪ್ರಕಾರ ಸರಿಸುಮಾರು ರು.5.5 ಕೋಟಿ ಬೆಲೆಗೆ ಬಿಕರಿಯಾಗಿದೆ ಎನ್ನಲಾಗಿದೆ.

ದರ್ಶನ್ ಅಭಿನಯದ ಈ ಹಿಂದಿನ ಚಿತ್ರ 'ಬೃಂದಾವನ' ಸ್ಯಾಟಲೈಟ್ ರೈಟ್ಸ್ ರು.5.4 ಕೋಟಿಗೆ ಮಾರಾಟವಾಗಿತ್ತು. ಸ್ಯಾಟಲೈಟ್ ರೈಟ್ಸ್ ನಲ್ಲಿ ಇದುವರೆಗೂ ರು.5 ಕೋಟಿ ತಲುಪಿರುವ ಸ್ಯಾಂಡಲ್ ವುಡ್ ಸ್ಟಾರ್ ಗಳು ಮೂರೇ ಮೂರು ಮಂದಿ. ಪುನೀತ್, ಸುದೀಪ್ ಹಾಗೂ ದರ್ಶನ್. [ಸಾರ್ವಕಾಲಿಕ ದಾಖಲೆ ಸೃಷ್ಟಿಸಲಿದೆಯಾ 'ಅಂಬರೀಶ'?]

A still from Ambareesha

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ನಿನ್ನಿಂದಲೇ' ಚಿತ್ರ ಬಾಕ್ಸ್ ಆಫೀಸಲ್ಲಿ ಸೋತರೂ ರು.5.6 ಕೋಟಿಗೆ ಸ್ಯಾಟಲೈಟ್ ರೈಟ್ಸ್ ನಲ್ಲಿ ಹೊಸ ದಾಖಲೆ ನಿರ್ಮಿಸಿತು. ಸುದೀಪ್ ಅಭಿನಯದ 'ಮಾಣಿಕ್ಯ' ಚಿತ್ರ ರು.5.5 ಕೋಟಿಗೆ ಮಾರಾಟವಾಗಿದೆ. ಪುನೀತ್ ಅವರ 'ಪವರ್ ***' ಚಿತ್ರ ರು.5.4 ಕೋಟಿಗೆ ಟಿವಿ ಹಕ್ಕುಗಳನ್ನು ಪಡೆದುಕೊಂಡಿದೆ.

ಚಾಲೆಂಜಿಂಗ್ ಸ್ಟಾರ್ ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ಹುಚ್ಚು. ಜನ ದರ್ಶನ್ ರನ್ನ ನೋಡೋಕೆ ಥಿಯೇಟರ್ ಗೆ ಬರ್ತಾರೆ. ಆಕ್ಟ್ ಮಾಡದಿದ್ರೂ ಪರ್ವಾಗಿಲ್ಲ. ದರ್ಶನ್ ನಿಂತ್ರೂ ಚಪ್ಪಾಳೆ ಕುಂತ್ರೂ ಚಪ್ಪಾಳೆ. ಹಾಗಾಗೀನೇ ದರ್ಶನ್ ಬಾಕ್ಸಾಫೀಸ್ ಕಾ ಸುಲ್ತಾನ್ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ದರ್ಶನ್ ಸ್ವಮೇಕ್ ಸಿನಿಮಾ ಮಾಡಿ ಎರಡು ವರ್ಷಗಳಾಗಿತ್ತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಂತರ ದರ್ಶನ್ ರ ಸ್ವಮೇಕ್ ಸಿನಿಮಾ ಇದಾಗಿದ್ದು ನಮ್ಮ ಮಣ್ಣಿನ ಸೊಗಡಿನ ಪಾತ್ರದಲ್ಲಿ ಗೆದ್ದಿದ್ದ ಸಂಗೊಳ್ಳಿ ರಾಯಣ್ಣ ಸಿನಿಮಾದಂತೆ ಇಲ್ಲಿಯೂ ದರ್ಶನ್ ರನ್ನ ತೆರೆಮೇಲೆ ನೋಡೋಕೆ ಚಿತ್ರಪ್ರೇಮಿಗಳು ಕಾತುರರಾಗಿದ್ದಾರೆ.

English summary
Challenging star Darshan's upcoming movie Ambareesha is few weeks away from a grand release and the movie has already set a record for the satellite rights. The grapevine is that the satellite rights were brought for a record price of 5.5 crores by Udaya TV.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada