ಹುಡುಕಾಟದ ಹಾದಿಯಲಿ ಕಳೆದು ಹೋದವರ ಬದುಕಿನ ಚಿತ್ರಣ ಈ 'ರೇಖೆ'

ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಒಳಗಿಂದೊಳ ಜೀವನದ ಹುಡುಕಾಟದ ರೇಖೆಯ ತೆಕ್ಕೆಯಲ್ಲಿ ಸಿಲುಕಿದ ಬದುಕು ಏನೆಲ್ಲ ತಿರುವುಗಳಪಡೆದುಕೊಳ್ಳುತ್ತದೆ ಎನ್ನುವಂತಹ ಚಿತ್ರಣವನ್ನು ನೈಜವಾಗಿ ಕಟ್ಟಿಕೊಡಲು ಪ್ರಯತ್ನಿಸಿರುವ ಶಿವರಾಜ್ ಹಾಗೂ ಸಂಗಡಿಗರ ಈ ಪ್ರಯತನ್ನ ಪ್ರಶಂಸನೀಯ.

ಕಮರ್ಷಿಯಲ್ ಕಟ್ಟುಪಾಡುಗಳ ಆಚೆಗೆ ನಿಂತು ನೋಡಿದಾಗ ಈ ಕಿರುಚಿತ್ರ ನಿಜಕ್ಕೂ ಒಂದು ಒಳ್ಳೆಯ ಪ್ರಯತ್ನ ಎನ್ನಬಹುದು' ಕ್ರೈಮ್ ಸ್ಟೋರಿ, ಲವ್ ಸ್ಟೋರಿ ಸಸ್ಪೆನ್ಸ್ ಥ್ರಿಲ್ಲರ್ ಹೊರತಾಗಿ ಹೊಸತೇನೊ ಮಾಡಲು ಹೊರಟ್ಟಿದ್ದಾರೆ ತಪ್ಪುಗಳನ್ನ ತಿದ್ದಿಕೊಂಡರೆ ತಂಡದಿಂದ ಮುಂದೊಂದು ದಿನ ಒಳ್ಳೆ ಪ್ರಯೋಗ ಕಾಣಬಹುದು.

ನಮ್ಮನ್ನ ನಾವು ಗುರುತಿಸಿಕೊಂಡಾಗ ಮತ್ತ್ಯಾರೊ ನಮ್ಮನ್ನು ಗುರುತಿಸಬಲ್ಲರು ಎಂದುಕೊಂಡು ಯಾರ ಸಹಾಯವನ್ನೂ ಕೇಳದೆ ನಿಮಗೆ ನೀವೆ ಈ ಪ್ರಯೋಗಕ್ಕೆ ಮುಂದಾದ ತಮ್ಮ ಪ್ರಯತ್ನಕ್ಕೆ ಬೇಸ್ ಎನ್ನಲೇ ಬೇಕು.

rekhe kannada short movie released

ಕಳೆದು ಹೋದ ಅಕ್ಕನ ಹುಡುಕಿ ಸಿಟಿಗೆ ಬರುವ ಹಳ್ಳಿಯ ಮುಗ್ದ ಹುಡುಗ ಚಂದ್ರ ಅಕ್ಕನ ಗೆಳತಿಯನ್ನ ಬೇಟಿಯಾಗಿ ಸಿಟಿಯಲ್ಲಿ ಇರಲಾರದೆ ಮತ್ತೆ ಊರಿಗೆ ಹಿಂದಿರುಗಿರುತ್ತಾನೆ, ಕಾಡುವ ಅಕ್ಕನ ನೆನಪು ಕಂಗಾಲಾಗಿರು ಅಪ್ಪ ಅಮ್ಮನ ಪರಿಸ್ಥಿತಿ ನೋಡಿ ಹಳ್ಳಿಯಲ್ಲಿಯೂ ಇರಲಾರದೆ ಶಶಿ ಎನ್ನುವ ಸ್ನೇಹಿತನ ಸಹಾಯದಿಂದ ಮತ್ತೆ ಸಿಟಿಗೆ ಬಂದು ಬದುಕಲು ಏನೆನೊ ಸರ್ಕಸ್ ಮಾಡಿ ಊರಿಗೆ ಹಣ ಕಳುಹಿಸಲೇ ಬೇಕಾದ ಅನಿವಾರ್ಯತೆ ಎದುರಾಗಿ ಅತ್ತ ಅಕ್ಕನನ್ನೂ ಹುಡುಕಲಾರದ ಪರಿಸ್ಥಿತಿಗೆ ಬಂದಾಗ ಮತ್ತೊಬ್ಬ ಊರಿನ ಗೆಳೆಯನ್ನ ಬೇಟಿಯಾಗಿ ಹೊಸ ಬದುಕೊಂದನ್ನ ಕಟ್ಟಿಕೊಂಡು ಅಕ್ಕನನ್ನು ಹುಡುಕಲು ಬಂದು ಬದುಕಿನ ನೆನ್ನೆ ನಾಳೆಗಳ ಮಧ್ಯೆ ಕಳೆದು ಹೋಗುವ ಹುಡುಗನ ಕಥೆಯಾಗಿದೆ.

ಅಪ್ಪ ಅಮ್ಮನಿಗೆ ಇತ್ತ ಬೇಕಾಗದ ಅತ್ತ ಬೇಡವಾಗದ ಪಿ ಜಿ ಹುಡುಗಿ ಪೂಜ, ಚಿತ್ರ ಕಲೆಯಲ್ಲಿ ಮುಂದೆ ಬರಬೇಕು ಕಲಾವಿದನಾಗಬೇಕು ಎನ್ನುವ ಆಸೆ ಹೊತ್ತು ಮನೆಯಿಂದ ಹೊರಗೆ ಬಂದು ಬಂದಹಾಗೆ ಬದುಕು ದೂಡುತಿರೊ ಏಕಾಂತ್, ತಂದೆ ತಾಯಿ ಕಳೆದುಕೊಂಡು ಬದುಕನ್ನ ವಿಚಿತ್ರವಾಗಿ ಕಾಣುವ ಅನಿಮಲ್ ಎನ್ನುವ ಪಾತ್ರ, ಸಿಕ್ಕವರನೆಲ್ಲಾ ಇನ್ಸ್ಯೂರೆನ್ಸ್ ಮಾಡ್ಸ್ಕೊಳಿ ಜೀವ್ನ ಸೆಕ್ಯೂರ್ ಮಾಡ್ಕೊಳಿ ಅಂತ ತನ್ನ ಜೀವನವನ್ನೆ ಮರೆತಂತ ಸುನೀಲ್ ಎನ್ನುವ ಪಾತ್ರ.

ಈ ಎಲ್ಲರೂ ಬದುಕಿನ ರೇಖೆಯಲ್ಲಿ ಹೇಗೆ ಸಂದಿಸುತ್ತಾರೆ ಅನ್ನೋದೆ ಚಿತ್ರ ಕಥೆ, ತಾರಾಗಣ ಎಲ್ಲರೂ ಹೊಸಬರಾದರೂ ರಂಗಭೂಮಿ ಕಲಾವಿದರಾಗಿರುವುದರಿಂದ ಅಭಿನಯ ಅಚ್ಚುಕಟ್ಟಾಗಿ ಮೂಡಿಬಂದಿದೆ. ಉತ್ತಮ ಸಂಗೀತ, ಅತ್ಯುತ್ತಮ ಸಾಹಿತ್ಯವನ್ನ ಒಳಗೊಂಡಿರುವ ಹಾಡು ಚೆನ್ನಾಗಿದೆ. ಕಿರುಚಿತ್ರದ ಅವಧಿ ಸ್ವಲ್ಪ ಹೆಚ್ಚಾಯ್ತು ಹಾಗೂ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಬಿಟ್ಟರೆ 'ರೇಖೆ' ಒಂದೊಳ್ಳೆ ಕಿರುಚಿತ್ರವಾಗಿ ನಿಲ್ಲುತ್ತದೆ. ಇಂತಹ ಕಿರುಚಿತ್ರ ನಿಮಗೂ ಇಷ್ಟವಾಗಬಹುದು ಒಮ್ಮೆ ನೋಡಿ.

'ರೇಖೆ' ಕಿರುಚಿತ್ರ ನೋಡಲು ಇಲ್ಲಿ ಕ್ಲಿಕ್ ಮಾಡಿ

More from Filmibeat

English summary
Rekhe kannada short movie released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X