»   » ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ವಿಶೇಷ ಸಂದರ್ಶನ

ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ವಿಶೇಷ ಸಂದರ್ಶನ

By: ರಾಜೇಂದ್ರಚಿಂತಾಮಣಿ
Subscribe to Filmibeat Kannada
<ul id="pagination-digg"><li class="next"><a href="/news/p-sheshadri-insight-on-electronic-media-083793.html">Next »</a></li></ul>

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ.ಶೇಷಾದ್ರಿ ಅವರು ಈ ರೀತಿಯ ಆರೋಪಗಳನ್ನು ಎಂದೂ ಎದುರಿಸಿದಂತಹವರಲ್ಲ. ಅವರ ಮಟ್ಟಿಗೆ ಈ ಬೆಳವಣಿಗೆಗಳು ಹೊಸದು. ತಮ್ಮ 'ಡಿಸೆಂಬರ್ 1' ಚಿತ್ರ ಇಷ್ಟೆಲ್ಲಾ ವಿವಾದಕ್ಕೆ ಗುರಿಯಾಗುತ್ತದೆ ಎಂದು ಅವರು ಊಹಿಸಿರಲಿಲ್ಲ. ಈ ಬಗ್ಗೆ ಮಾತಿಗೆ ಎಳೆದಾಗ ಅವರು ತಮಗೆ ಅನಿಸಿದ್ದನ್ನು ನೇರವಾಗಿ ಒನ್ಇಂಡಿಯಾ ಕನ್ನಡ ಜೊತೆ ಹಂಚಿಕೊಂಡರು.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಗ್ರಾಮವಾಸ್ತವ್ಯ ಪರಿಕಲ್ಪನೆಗೆ ಧಕ್ಕೆ ಬರುವಂತೆ ಚಿತ್ರವನ್ನು ತೆರೆಗೆ ತಂದಿದ್ದಾರೆ ಎಂದು ಆರೋಪಿಸಿದರು. ಇನ್ನೊಬ್ಬ ನಿರ್ದೇಶಕ ಓಂ ಪ್ರಕಾಶ್ ನಾಯಕ್ ಅವರು ತಮ್ಮ ಕಥೆಯನ್ನು ಕದ್ದಿದ್ದಾರೆ ಎಂದು ಆರೋಪಿಸಿದರು. ಈ ಎಲ್ಲಾ ಪ್ರಶ್ನೆಗಳಿಗೆ ಅವರು ಕೊಟ್ಟ ಉತ್ತರ ಅಕ್ಷರ ರೂಪದಲ್ಲಿ.

1. ತಮ್ಮ 'ಡಿಸೆಂಬರ್ 1' ಚಿತ್ರ ಯಾಕಿಷ್ಟು ವಿವಾದಕ್ಕೆ ಗುರಿಯಾಗುತ್ತಿದೆ?
ಅದು ನನಗೂ ಗೊತ್ತಿಲ್ಲ. ಬಹುಶಃ ನನಗನ್ನಿಸುತ್ತದೆ ಎಲ್ಲದಕ್ಕೂ ಮಾಧ್ಯಮಗಳೇ ಕೆಲವು ಬಾರಿ ಕಾರಣವಾಗುತ್ತವಾ? ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಭರಾಟೆ ಇದೆಯಲ್ಲಾ ಅದು ಹಿಂದಿಗಿಂತಲೂ ತುಂಬ ದೊಡ್ಡದಾಗಿದೆ. ಈಗ ಎಲ್ಲರಿಗೂ ಸುದ್ದಿಯ ಹಸಿವು ಹುಟ್ಟಿದೆ. ಆ ಹಸಿವನ್ನು ಇಂಗಿಸಲು ಎಲ್ಲೋ ಪ್ರಾರಂಭವಾದ ಒಂದು ಸಣ್ಣ ಕಿಡಿಯನ್ನು ದೊಡ್ಡ ಬೆಂಕಿಯನ್ನಾಗಿ ಮಾಡಲಾಗುತ್ತಿದೆ.

ಈ ಸಣ್ಣ ಕಿಡಿ ಮುಂಚೆಯೂ ಬೇರೆ ಬೇರೆ ಸಂದರ್ಭಗಳಲ್ಲಿ ಇರುತ್ತಿತ್ತು. ಅದರೆ ಆಗೆಲ್ಲಾ ಸಣ್ಣ ಪ್ರಮಾಣದಲ್ಲಿ ಆಗುತ್ತಿತ್ತು. ಈಗ ಅದು ವಿರಾಟ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ ಅನ್ನಿಸುತ್ತಿದೆ. ನನ್ನ ಸಿನಿಮಾ ವಿಚಾರಕ್ಕೆ ಬರುವುದಾದರೆ ನನ್ನ ಕಥೆಯನ್ನು ಕದ್ದಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ (ಓಂ ಪ್ರಕಾಶ್ ನಾಯಕ್).

ನನ್ನ ಜಾಗದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ. ಫಿಲಂ ಚೇಂಬರ್ ಗೆ ಹೋಗ್ತಾ ಇದ್ರಾ, ನನ್ನ ಬಳಿಗೆ ನೇರವಾಗಿ ಬರುತ್ತಿದ್ರಾ ಅಥವಾ ಮಾಧ್ಯಮಗಳ ಮೊರೆ ಹೋಗುತ್ತಿದ್ರಾ? ಆದರೆ ಅವರೇನು ಮಾಡಿದರು, ನೇರವಾಗಿ ಮಾಧ್ಯಮದ ಮುಂದೆ ಹೋದರು. ಮಾಧ್ಯಮಗಳೂ ಹಿಂದೆಮುಂದೆ ಪರಿಶೀಲಿಸುವುದಿಲ್ಲ. ಆ ಪುಸ್ತಕವನ್ನೂ ಓದಿರಲ್ಲ. ನನ್ನ ಸಿನಿಮಾವನ್ನು ಆ ಹೊತ್ತಿಗೆ ಕೆಲವು ಪತ್ರಕರ್ತರು ನೋಡಿರುತ್ತಾರೆ ಕೆಲವರು ನೋಡಿರಲ್ಲ. ಆಗ ಮಾಧ್ಯಮ ಅವರೇನು ಹೇಳ್ತಾರೋ ಅದನ್ನ ಧಿಕ್ಕರಿಸುತ್ತದೆ. ಇಲ್ಲಿ ಒನ್ ವೇ ಆಗುತ್ತದೆ.

Renowned Ddirector P Sheshadri Interview

ಆಗ ಇವೆಲ್ಲಕ್ಕೂ ನಾನು ಸ್ಪಷ್ಟೀಕರಣ ನೀಡಬೇಕಾಗುತ್ತದೆ. ಇದು ಬೆಳೆದುಕೊಂಡು ಹೋಗುತ್ತದೆ. ಅವರ ಜಾಗದಲ್ಲಿ ನಾನಿದ್ದಿದ್ದರೆ ಚೇಂಬರ್ ಗೂ ಹೋಗುವ ಮುನ್ನ ಆ ಚಿತ್ರಕ್ಕೆ ಸಂಬಂಧಿಸಿದ ನಿರ್ದೇಶಕ, ನಿರ್ಮಾಪಕರನ್ನು ಭೇಟಿಯಾಗುತ್ತಿದ್ದೆ. ಅವರು ಪರಿಚಿತರೇ ಆಗಿರಲಿ ಅಪರಿಚಿತರೇ ಆಗಿರಲಿ. ನನಗೆ ಈ ರೀತಿ ಅನ್ಯಾಯವಾಗಿದೆ ನ್ಯಾಯ ಬೇಕು ಎಂದು ಕೇಳುತ್ತಿದ್ದೆ. ಅವರು ಏನು ಉತ್ತರ ಕೊಡುತ್ತಾರೋ ಆ ಬಳಿಕ ನಾನು ಚೇಂಬರ್, ನಿರ್ದೇಶಕರ ಸಂಘಕ್ಕೆ ಮೊರೆ ಹೋಗುತ್ತಿದ್ದೆ. ಅಲ್ಲಿ ಏನು ತೀರ್ಮಾನವಾಗುತ್ತದೋ ನೋಡಿಕೊಂಡು ಬಳಿಕ ನ್ಯಾಯಾಲಯದ ಮೊರೆ ಹೋಗಬಹುದು. ಮಾಧ್ಯಮಗಳೇನಾದರೂ ಕೋರ್ಟ್ ಗಳೇ, ಹಾಗಿದ್ದರೆ ಕೋರ್ಟ್ ಎಂಬುದು ಯಾಕೆ ಬೇಕು. ಸುದ್ದಿಯ ಹಸಿವನ್ನು ಒಂದು ವರ್ಗದ ಜನಕ್ಕೆ ಕೊಟ್ಟವು. ಅದು ಸದ್ಭಳಕೆನೋ ದುರ್ಬಳಕೆನೋ ಏನೋ ಒಂದು ಆಯಿತು.

<ul id="pagination-digg"><li class="next"><a href="/news/p-sheshadri-insight-on-electronic-media-083793.html">Next »</a></li></ul>
English summary
National films award winning director P Sheshadri interview. The director rejects all allegations on his latest film December 1. Former chief minister HD Kumaraswamy, who popularised the village stay (grama vastavya) during his tenure, is upset with the film 'December 1'. Actor-director Omprakash Naik accused National award winner director P Sheshadri of plagiarism. Here is the P Sheshadri answers to all allegations.
Please Wait while comments are loading...