»   » 'ತುಕಾಲಿ ಸುದೀಪ್' ಎಂದ ಕಿಡಿಗೇಡಿಗೆ ಕಿಚ್ಚ ಕೊಟ್ಟ ಕೆಚ್ಚೆದೆಯ ಉತ್ತರ ಏನು.?

'ತುಕಾಲಿ ಸುದೀಪ್' ಎಂದ ಕಿಡಿಗೇಡಿಗೆ ಕಿಚ್ಚ ಕೊಟ್ಟ ಕೆಚ್ಚೆದೆಯ ಉತ್ತರ ಏನು.?

Posted By:
Subscribe to Filmibeat Kannada

ಇದಕ್ಕೆ ದುರಹಂಕಾರ ಅಂತ ಕಣ್ಣು ಕೆಂಪಗೆ ಮಾಡಿಕೊಳ್ಳುತ್ತೀರೋ... ಅತಿರೇಕದ ಅಭಿಮಾನ ಎಂದು ಮೂಗು ಮುರಿಯುತ್ತೀರೋ... ನಿಮಗೆ ಬಿಟ್ಟಿದ್ದು. ಯಾಕಂದ್ರೆ, ಸುದೀಪ್ ಬಗ್ಗೆ ಕಿಡಿಗೇಡಿ ಬಾಯಿಂದ ಬಂದಿರುವ ಮಾತು ಅಂಥದ್ದು.

ಟ್ವಿಟ್ಟರ್ ನಲ್ಲಿ ಮಾತ್ರವೇ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ಕಿಚ್ಚ ಸುದೀಪ್ ಅದರಾಚೆಗೂ ಲಕ್ಷಾಂತರ ಅಭಿಮಾನಿ ಬಳಗ ಹೊಂದಿದ್ದಾರೆ. ಇಂತಿಪ್ಪ ಕಿಚ್ಚ ಸುದೀಪ್ ರವರಿಗೆ 'ತುಕಾಲಿ' ಎಂದಿದ್ದಾನೆ ಓರ್ವ ಯುವಕ.!

ಟ್ವಿಟ್ಟರ್ ನಲ್ಲಿ ಸುದೀಪ್ ಗೆ 'ತುಕಾಲಿ' ಎಂದ ಯುವಕ

ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯರಾಗಿರುವ ಕಿಚ್ಚ ಸುದೀಪ್, ಅಭಿಮಾನಿ ವಲಯದಿಂದ ಇಂತಹ ಒಂದು ಟ್ವೀಟ್ ಬರುತ್ತೆ ಎಂದು ಬಹುಶಃ ಊಹಿಸಿರಲಿಲ್ಲವೇನೋ. ಅಂಥ ಟ್ವೀಟ್ ಸಂದೇಶವನ್ನ ಪ್ರತಾಪ್ ಎಂಬುವನು ಕಳುಹಿಸಿದ್ದಾನೆ.

ಪ್ರತಾಪ್ ಮಾಡಿದ ಟ್ವೀಟ್ ಏನು.?

''ಬಾಸ್ ಅಂದ್ರೆ ಬರೀ ಇಬ್ಬರೇ... ಡಿ ಬಾಸ್ ಮತ್ತು ಯಶ್ ಬಾಸ್.. ತುಕಾಲಿ ಸುದೀಪ್ ಬಾಸ್ ಆಗಲ್ಲ'' ಎಂದು ಪ್ರತಾಪ್ ಎಂಬುವರು ಟ್ವೀಟ್ ಮಾಡಿದ್ದರು.

ಸುದೀಪ್ ಕೊಟ್ಟ ಉತ್ತರವೇನು ಗೊತ್ತಾ.?

''ನೀವು ನನ್ನನ್ನ ದ್ವೇಷಿಸುವ ರೀತಿಯನ್ನು ನಾನು ಪ್ರೀತಿಸುತ್ತೇನೆ. ನಾನು ಇನ್ನೂ ಚೆನ್ನಾಗಿ ಮುಂದುವರೆಯಲು ಸ್ಫೂರ್ತಿ ನೀಡುತ್ತದೆ'' ಎಂದು 'ತುಕಾಲಿ' ಎಂದವನಿಗೆ ಸುದೀಪ್ ಉತ್ತರ ನೀಡಿದ್ದಾರೆ.

ಟ್ವೀಟ್ ವಾರ್

ಕಿಚ್ಚ ಸುದೀಪ್ ಗೆ 'ತುಕಾಲಿ' ಎಂದ ಕಿಡಿಗೇಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಹಾಮಂಗಳಾರತಿ ನಡೆಯುತ್ತಿದೆ. 'ಸುದೀಪ್ ಬರೀ ಬಾಸ್ ಅಲ್ಲ. ಬಿಗ್ ಬಾಸ್' ಎಂದು ಸುದೀಪ್ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ.

ಅಭಿಮಾನಿಗಳ ಕಿತ್ತಾಟ

ದರ್ಶನ್ ಹಾಗೂ ಯಶ್ ಮೇಲೆ ಅಭಿಮಾನದ ಪರಾಕಾಷ್ಟೆ ಮೆರೆಯಲು ಹೋದ ಯುವಕ ಇದೀಗ ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಅಭಿಮಾನವಿದ್ದರೆ ಆ ನಟನನ್ನ ಪೂಜಿಸಲಿ, ಅದು ಬಿಟ್ಟು ಇತರೆ ನಟನ ಬಗ್ಗೆ ಕೇವಲವಾಗಿ ಮಾತನಾಡುವುದು ತಪ್ಪು ಎಂಬುದು ಬಹುತೇಕರ ಅಭಿಪ್ರಾಯ. ಇದಕ್ಕೆ ನೀವೇನಂತೀರಾ.?

English summary
Read the Reply given by Kiccha Sudeep for a fan who called him 'Tukali' in Twitter.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada