»   » 'ಚಕ್ರವರ್ತಿ' ಆಗಲು ಲಾಂಗ್ ಹಿಡಿಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್

'ಚಕ್ರವರ್ತಿ' ಆಗಲು ಲಾಂಗ್ ಹಿಡಿಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆರೆ ಮೇಲೆ ಲಾಂಗು-ಮಚ್ಚು ಹಿಡಿದು ವೈರಿಗಳ ರುಂಡ ಚೆಂಡಾಡಿ ವರ್ಷಗಳೇ ಉರುಳಿದೆ.

'ಚಿಂಗಾರಿ', 'ಬುಲ್ ಬುಲ್', 'ಬೃಂದಾವನ', 'ಅಂಬರೀಶ', 'ಐರಾವತ', 'ವಿರಾಟ್', 'ಜಗ್ಗು ದಾದಾ' - ಹೀಗೆ ಇತ್ತೀಚಿಗೆ ತೆರೆಕಂಡ ಸಾಲು ಸಾಲು ಚಿತ್ರಗಳಲ್ಲಿ ನಟ ದರ್ಶನ್ ರೆಬೆಲ್ ಅವತಾರದಲ್ಲಿ ಕಾಣಿಸಿಕೊಂಡಿದ್ದರೂ, ಲಾಂಗ್ ಮಾತ್ರ ಹಿಡಿದಿರಲಿಲ್ಲ. ರೌಡಿ ಆಗಿ ಅಬ್ಬರಿಸಿರಲಿಲ್ಲ.! [ಫೋಟೋಶೂಟ್: 'ಚಕ್ರವರ್ತಿ' ದರ್ಶನ್ ಗೆ ಸರಿಸಾಟಿ ಯಾರೂ ಇಲ್ಲ ಬಿಡಿ.!]


ಈಗ 'ಚಕ್ರವರ್ತಿ' ಚಿತ್ರದಲ್ಲಿ ಲಾಂಗ್ ಹಿಡಿಯುವ ಮೂಲಕ 'ಕರಿಯ' ದಿನಗಳನ್ನ ನೆನಪಿಸುತ್ತಿದ್ದಾರೆ ನಿಮ್ಮ ಪ್ರೀತಿಯ 'ದಾಸ'. ಮುಂದೆ ಓದಿ....


'ಚಕ್ರವರ್ತಿ' ಚಿತ್ರದ ಹೊಸ ಫೋಟೋ ರಿಲೀಸ್

'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ಅಂಡರ್ ವರ್ಲ್ಡ್ ಡಾನ್ ಪಾತ್ರ ನಿಭಾಯಿಸುತ್ತಿದ್ದಾರೆ. ಈಗಾಗಲೇ 'ಡಾನ್' ಗೆಟಪ್ ನಲ್ಲಿ ದರ್ಶನ್ ಮಿಂಚಿರುವ ಚಿತ್ರಗಳನ್ನ ನಾವೇ ನಿಮಗೆ ತೋರಿಸಿದ್ವಿ. ಈಗ, ದರ್ಶನ್ ಲಾಂಗ್ ಹಿಡಿದಿರುವ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ಅದನ್ನ ನೋಡಲು ಮುಂದಿನ ಫೋಟೋ ಸ್ಲೈಡ್ ಕ್ಲಿಕ್ ಮಾಡಿ....


ಖಡಕ್ 'ದರ್ಶನ'

ರೆಟ್ರೋ ಶೈಲಿಯಲ್ಲಿ ಚೆಕ್ಸ್ ಶರ್ಟ್, ಬೆಲ್ ಬಾಟಂ ಪ್ಯಾಂಟ್ ತೊಟ್ಟಿರುವ ದರ್ಶನ್ 'ಚಕ್ರವರ್ತಿ' ಚಿತ್ರದಲ್ಲಿ ಲಾಂಗ್ ಹಿಡಿದು ರಗಡ್ ಆಗಿ ಕಾಣಿಸಿಕೊಳ್ಳುವುದು ಹೀಗೆ....


ಆಂಗ್ರಿ ಯಂಗ್ ಮ್ಯಾನ್

ಅಲ್ಲಿಗೆ, 'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ರದ್ದು ಆಂಗ್ರಿ ಯಂಗ್ ಮ್ಯಾನ್ ಪಾತ್ರ ಎಂಬುದು ಕನ್ ಫರ್ಮ್. ['ಚಕ್ರವರ್ತಿ' ದರ್ಶನ್ ದರ್ಬಾರ್ ನಲ್ಲಿ ಸಹೋದರ ದಿನಕರ್ ವಿಲನ್ ಗಿರಿ]


ಫ್ಯಾಮಿಲಿ ಡ್ರಾಮಾ ಇದೆ.!

ಅಂಡರ್ ವರ್ಲ್ಡ್, ರೌಡಿ ಅಂದ ಕೂಡಲೆ ಬರೀ ಕೊಲೆ, ದರೋಡೆ, ರಕ್ತ ಪಾತ ಮಾತ್ರ ಅಂತಲ್ಲ. 'ಚಕ್ರವರ್ತಿ' ಚಿತ್ರದಲ್ಲಿ ರೌಡಿಸಂ ಅಧ್ಯಾಯ ಒಂದು ತಿರುಳು ಅಷ್ಟೇ. ಉಳಿದಂತೆ ಫ್ಯಾಮಿಲಿ ಡ್ರಾಮಾಗೆ ಪ್ರಾಮುಖ್ಯತೆ ನೀಡಲಾಗಿದೆ ಎನ್ನುತ್ತಾರೆ ನಿರ್ದೇಶಕ ಚಿಂತನ್. [ಇಲ್ಲ್ ಕೇಳಿ, 'ಇದು' ದರ್ಶನ್ ಅವರ ಆಜ್ಞೆ ಯಾರೂ ಮೀರಬೇಡಿ]


ಮಾಸ್ ಅಭಿಮಾನಿಗಳಿಗೆ ಮಾತ್ರ ಅಲ್ಲ.!

'ಚಕ್ರವರ್ತಿ' ಸಿನಿಮಾ ಮಾಸ್ ಅಭಿಮಾನಿಗಳಿಗೆ ಮಾತ್ರ ಅಲ್ಲ. ಕ್ಲಾಸ್ ಪ್ರೇಕ್ಷಕರ ಮನಸ್ಸಿಗೂ ಹತ್ತಿರವಾಗುವ ಹಾಗೆ ಚಿತ್ರೀಕರಿಸಲಾಗುತ್ತಿದೆ. ['ಚಕ್ರವರ್ತಿ' ದರ್ಶನ್ ಜೊತೆ 'ಗುರಾಯಿಸುವ ಗುಮ್ಮ'ನಾದ ಸೃಜನ್.!]


ಎಲ್ಲಿ ಶೂಟಿಂಗ್.?

ದರ್ಶನ್, ದೀಪಾ ಸನ್ನಿಧಿ, ಸೃಜನ್ ಲೋಕೇಶ್, ದಿನಕರ್ ತೂಗುದೀಪ ಮುಖ್ಯಭೂಮಿಕೆಯಲ್ಲಿ ಇರುವ 'ಚಕ್ರವರ್ತಿ' ಚಿತ್ರದ ಶೂಟಿಂಗ್ ಸದ್ಯ ಮೈಸೂರಿನಲ್ಲಿ ಬಿರುಸಿನಿಂದ ಸಾಗುತ್ತಿದೆ.


English summary
Kannada Actor Darshan's Underworld (Rowdy) look in Kannada Movie 'Chakravarthi' (Chakravarthy) is out. The movie directed by Chintan, produced by Anaji Nagaraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada