»   » ಟೈಟಲ್ ಟ್ರಬಲ್ ನಲ್ಲಿ ಮತ್ತೆ 'ರಿಂಗ್ ರೋಡ್' ಸುಮ

ಟೈಟಲ್ ಟ್ರಬಲ್ ನಲ್ಲಿ ಮತ್ತೆ 'ರಿಂಗ್ ರೋಡ್' ಸುಮ

Posted By:
Subscribe to Filmibeat Kannada

ಎಲ್ಲವೂ ಸರಿಹೋಯ್ತು...ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಶುರುವಾಯ್ತು ಅನ್ನೋಷ್ಟರಲ್ಲಿ 'ರಿಂಗ್ ರೋಡ್ ಸುಮ' ಚಿತ್ರಕ್ಕೆ ಹೊಸ ತಲೆನೋವು ಶುರುವಾಗಿದೆ.

ಸೆನ್ಸಾರ್ ಅಂಗಳಕ್ಕೆ ಕಾಲಿಟ್ಟಾಗಿನಿಂದಲೂ 'ರಿಂಗ್ ರೋಡ್ ಸುಮ' ಚಿತ್ರ ಶೀರ್ಷಿಕೆ ಸಮಸ್ಯೆ ಎದುರಿಸುತ್ತಿದೆ. 'ರಿಂಗ್ ರೋಡ್ ಶುಭ' ಅಂತಿದ್ದ ಟೈಟಲ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗ್ರೀನ್ ಸಿಗ್ನಲ್ ಕೊಡ್ಲಿಲ್ಲ. ['ರಿಂಗ್ ರೋಡ್ ಸುಮ' ಆದ ರಿಂಗ್ ರೋಡ್ ಶುಭ]


'Ring Road Suma' in title controversy again

ಹಂತಕಿ ಶುಭಗೂ ಮತ್ತು ಚಿತ್ರಕಥೆಗೂ ಸಂಬಂಧವಿರಬಹುದು ಅನ್ನುವ ಕಾರಣಕ್ಕೆ ಸಿನಿಮಾ ವಿವಾದಕ್ಕೀಡಾಗಬಾರದು ಅಂತ ಫಿಲ್ಮ್ ಚೇಂಬರ್ 'ರಿಂಗ್ ರೋಡ್' ಅಂತ ಶೀರ್ಷಿಕೆ ಮಾತ್ರ ಇಟ್ಟುಕೊಳ್ಳುವಂತೆ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪಗೆ ಸೂಚಸಿತ್ತು.


ಅದರಂತೆ 'ರಿಂಗ್ ರೋಡ್' ಅಂತಲೇ ಟೈಟಲ್ ಇಟ್ಟು ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಕೂಡ ಚಿತ್ರತಂಡ ಪಡೆದುಕೊಂಡಿದೆ. ಅಲ್ಲಿಗೆ, ಎಲ್ಲವೂ ಸರಿ ಆಯ್ತಲ್ಲ ಅನ್ನೋಷ್ಟರಲ್ಲಿ ಈಗ ಬಿಡುಗಡೆ ಆಗಿರುವ ಹೊಸ ಪೋಸ್ಟರ್ ಗಳು ವಿವಾದ ಉಂಟುಮಾಡುತ್ತಿವೆ.


'Ring Road Suma' in title controversy again

ಈಗ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ 'ರಿಂಗ್ ರೋಡ್' ಅನ್ನುವ ಟೈಟಲ್ ಕೆಳಗೆ 'ಸುಮಳ ಕಥೆ' ಅನ್ನುವ ಟ್ಯಾಗ್ ಲೈನ್ ಇದೆ. ಇದು ವಾಣಿಜ್ಯ ಮಂಡಳಿ ಮತ್ತು ಸೆನ್ಸಾರ್ ಮಂಡಳಿಯ ಕಣ್ಣು ಕೆಂಪಾಗುವಂತೆ ಮಾಡಿದೆ. [ಜುಲೈ 10ಕ್ಕೆ 'ರಿಂಗ್ ರೋಡ್' ಲೋಕಾರ್ಪಣೆ..! ]


''ರಿಂಗ್ ರೋಡ್' ಅಂತ ಟೈಟಲ್ ಇಟ್ಟುಕೊಳ್ಳುವುದಕ್ಕೆ ಮಾತ್ರ ಅನುಮತಿ ಕೊಟ್ಟಿದ್ವಿ. ಟ್ಯಾಗ್ ಲೈನ್ ಕೂಡ ಇಡಬಾರದು ಅಂತ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಅವರಿಗೆ ಹೇಳಿದ್ವಿ. ಆದರೂ, ಈಗ ಸುಮ ಅಂತ ಇಟ್ಟಿದ್ದಾರೆ. ಸೆನ್ಸಾರ್ ನಿಂದ 'ರಿಂಗ್ ರೋಡ್' ಟೈಟಲ್ ನಡಿಯಲ್ಲಿ ಸರ್ಟಿಫಿಕೇಟ್ ತೆಗೆದುಕೊಂಡು ಈಗ ಯಾಕೆ ಸುಮ ಅಂತ ಸೇರಿಸಿದರು'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಬಾಮಾ ಗಿರೀಶ್ ಪ್ರಶ್ನಿಸುತ್ತಾರೆ.


'Ring Road Suma' in title controversy again

ಈ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಪ್ರಿಯಾ ಬೆಳ್ಳಿಯಪ್ಪ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂದ್ವೇಳೆ ಸೆನ್ಸಾರ್ ಮಂಡಳಿ ಕೆಂಗಣ್ಣಿಗೆ ಗುರಿಯಾದರೆ, ಜುಲೈ 10 ರಂದು ದುನಿಯಾ ವಿಜಯ್, ನಿಖಿತಾ ತುಕ್ರಾಲ್, ಖುಷಿ ಮುಖ್ಯಭೂಮಿಕೆಯಲ್ಲಿರುವ ಮಹಿಳೆಯರೇ ಕೂಡಿ ಮಾಡಿರುವ ಈ ಚಿತ್ರ ಬಿಡುಗಡೆ ಕಷ್ಟಕಷ್ಟ. (ಫಿಲ್ಮಿಬೀಟ್ ಕನ್ನಡ)

English summary
Kannada Movie 'Ring Road Suma' is in title trouble again by using name 'Suma' in the title, which violates the clause posed by both Censor board and KFCC.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada