For Quick Alerts
  ALLOW NOTIFICATIONS  
  For Daily Alerts

  ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ದಂಪತಿ

  |

  ನಿರ್ದೇಶಕ, ನಟ ರಿಷಬ್ ಶೆಟ್ಟಿ ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ನಿನ್ನೆ (ಫೆಬ್ರವರಿ 9) ರಿ‍ಷಭ್ ಹಾಗೂ ಪ್ರಗತಿ ಮದವೆಯಾದ ದಿನ.

  ವಿವಾಹ ವಾರ್ಷಿಕೋತ್ಸವದ ಸಂತಸವನ್ನು ನಿನ್ನೆ ರಾತ್ರಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ರಿಷಭ್ ಶೆಟ್ಟಿ ಹಂಚಿಕೊಂಡಿದ್ದಾರೆ. ಪತ್ನಿ ಬಗ್ಗೆ ಪ್ರೀತಿಯಿಂದ ನಾಲ್ಕು ಸಾಲು ಬರೆದಿದ್ದಾರೆ.

  ರಿಷಬ್ ಶೆಟ್ಟಿ ಮಗನನ್ನು ಎತ್ತಿಕೊಂಡು ಮುದ್ದಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  ''ಇಂದಿಗೆ ಸರಿಯಾಗಿ ಮೂರು ವರ್ಷದ ಹಿಂದೆ ಈ ಸುಂದರ ಹುಡುಗಿಯನ್ನು ನಾನು ಹೆಂಡತಿಯಾಗಿ ಪಡೆದುಕೊಂಡೆ. ಇಬ್ಬರು ಜೊತೆಗಿರುವ ಜೀವನ ಎಲ್ಲದಕ್ಕಿಂತ ಚೆನ್ನಾಗಿ ಸಾಗುತ್ತಿದೆ. ಅದು ನನ್ನ ಊಹೆಗೂ ಮೀರಿ. ಇಂತಹ ತಾಯಿ ರೂಪದ ಹೆಂಡತಿ ಪಡೆದಿರುವುದು ಖುಷಿ ಆಗುತ್ತಿದೆ. ನಿನ್ನ ತಾಳ್ಮೆ, ಪ್ರೋತ್ಸಾಹ, ಪ್ರೀತಿಗೆ ಧನ್ಯವಾದ.'' ಎಂದು ರಿಷಭ್ ಶೆಟ್ಟಿ ಬರೆದುಕೊಂಡಿದ್ದಾರೆ.

  ಪತ್ನಿ ಹಾಗೂ ಪುಟ್ಟ ಮಗನ ಜೊತೆಗಿನ ಮುದ್ದಾದ ಫೋಟೋ ಮೂಲಕ ವಿವಾಹ ವಾರ್ಷಿಕೋತ್ಸವದ ಖುಷಿಯನ್ನು ಹಂಚಿಕೊಂಡಿದ್ದಾರೆ.

  ಫೆಬ್ರವರಿ 9 2017 ರಿ‍ಷಭ್ ಶೆಟ್ಟಿ ಹಾಗೂ ಪ್ರಗತಿ ವಿವಾಹ ಆಗಿದ್ದರು. 'ರಿಕ್ಕಿ' ಸಿನಿಮಾದ ಸಮಯದಲ್ಲಿ ಇಬ್ಬರ ನಡುವೆ ಪರಿಚಯ ಆಗಿತ್ತು. ನಂತರ ಅದು ಪ್ರೀತಿಗೆ ತಿರುಗಿತು. ಪರಸ್ಪರ ಎರಡು ಕುಟುಂಬಗಳು ಒಪ್ಪಿದ ಮೇಲೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

  ಟೀಸರ್ ಮೂಲಕ ಮಗನ ಹೆಸರನ್ನು ರಿವೀಲ್ ಮಾಡಿದ ರಿ‍ಷಭ್

  ರಿ‍ಷಭ್ ಶೆಟ್ಟಿ ಹಾಗೂ ಪ್ರಗತಿ ಬಾಳಿಗೆ ಮುದ್ದಾದ ಮಗ ರಣ್ ವಿತ್ ಶೆಟ್ಟಿ ಆಗಮನ ಆಗಿದೆ. ಸದ್ಯ ರಿ‍ಷಭ್ 'ರುದ್ರಪ್ರಯಾಗ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

  English summary
  Kannada Director and actor Rishab Shetty and Pragathi celebrating their wedding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X