For Quick Alerts
  ALLOW NOTIFICATIONS  
  For Daily Alerts

  ಟೀಸರ್ ಮೂಲಕ ಮಗನ ಹೆಸರನ್ನು ರಿವೀಲ್ ಮಾಡಿದ ರಿ‍ಷಭ್

  |
  ಟೀಸರ್ ಮೂಲಕ ಮಗನ ಹೆಸರನ್ನು ರಿವೀಲ್ ಮಾಡಿದ ರಿ‍ಷಭ್ | FILMIBEAT KANNADA

  ಸ್ಟಾರ್ ಗಳು, ಸ್ಟಾರ್‌ ನಿರ್ದೇಶಕರು ತಮ್ಮ ಮಕ್ಕಳಿಗೆ ಏನು ಹೆಸರಿಟ್ಟರು ಎನ್ನುವ ಕುತೂಹಲ ಅಭಿಮಾನಿಗಳಿಗೆ ಇರುತ್ತದೆ. ಹೀಗಾಗಿ ಬೇರೆ ಬೇರೆ ರೀತಿಯಲ್ಲಿ ತಮ್ಮ ಮಕ್ಕಳ ಹೆಸರನ್ನು ಸ್ಟಾರ್ ಗಳು ರಿವೀಲ್ ಮಾಡುತ್ತಾರೆ.

  ಇದೀಗ ನಿರ್ದೇಶಕ, ನಟ ರಿಷಭ್ ಶೆಟ್ಟಿ ತಮ್ಮ ಮಗನನ್ನು ಟೀಸರ್ ಮೂಲಕ ಪರಿಚಯ ಮಾಡಿದ್ದಾರೆ. ಇಷ್ಟು ಸಿನಿಮಾಗಾಗಿ ಟೀಸರ್ ಮಾಡುತ್ತಿದ್ದ ರಿಷಭ್ ಈಗ ತಮ್ಮ ಮನೆಯ ಹೀರೋನನ್ನು ವಿಡಿಯೋ ಮೂಲಕ ಪರಿಚಯಿಸಿದ್ದಾರೆ.

  ಗುಡ್ ನ್ಯೂಸ್ ಕೊಟ್ಟ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿಗುಡ್ ನ್ಯೂಸ್ ಕೊಟ್ಟ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ

  ರಿ‍ಷಬ್ ಶೆಟ್ಟಿ ತಮ್ಮ ಮಗನಿಗೆ ರಣ್ ವಿತ್ ಶೆಟ್ಟಿ ಎಂದು ನಾಮಕರಣ ಮಾಡಿದ್ದಾರೆ. ಟೀಸರ್ ಮೂಲಕ ಜೂನಿಯರ್ ಡಿಟೆಕ್ವಿವ್ ದಿವಾಕರ್ ಲಾಂಚ್ ಆಗಿದ್ದಾರೆ. ಈಗಲೇ ಸಿನಿಮಾ ಕ್ಲಾಪ್ ಬೋಡ್ಸ್ ಹಿಡಿದು, ರಾಜ್ ಕುಮಾರ್ ಫೋಟೋ ಮುಟ್ಟಿ, ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕ ನೋಡುತ್ತಾ, ಕ್ಯಾಮರಾಗಳ ಜೊತೆ ರಣ್ ವಿತ್ ಶೆಟ್ಟಿ ಬೆಳೆಯುತ್ತಿದ್ದಾರೆ.

  ರಿಷಬ್ - ಪ್ರಗತಿ ಕುಟುಂಬಕ್ಕೆ 'ಹೀರೋ' ಆಗಮನರಿಷಬ್ - ಪ್ರಗತಿ ಕುಟುಂಬಕ್ಕೆ 'ಹೀರೋ' ಆಗಮನ

  ರಣ್ ವಿತ್ ಶೆಟ್ಟಿ ಫೋಟೋ ಶೂಟ್ ಮಾಡಿಸಿದ್ದು, ಬೇರೆ ಬೇರೆ ಗೆಟಪ್ ನಲ್ಲಿ ಮಿಂಚಿದ್ದಾರೆ. ರಿ‍ಷಭ್ ಶೆಟ್ಟಿ ತಮ್ಮ ಯೂ ಟ್ಯೂಬ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ರಿ‍ಷಭ್ ಶೆಟ್ಟಿ ಪತ್ನಿ ಪ್ರಗತಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

  ಅಂದಹಾಗೆ, ರಿಷಬ್ ಶೆಟ್ಟಿ ಸದ್ಯ, 'ಕಥಾ ಸಂಗಮ' ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಒಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ಅದರ ಜೊತೆಗೆ 'ರುದ್ರಪ್ರಯೊಗ' ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

  English summary
  Kannada director Rishab Shetty named his son as Ranvit Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X