Don't Miss!
- Finance
NRI PAN Card: ಎನ್ಆರ್ಐ ಪ್ಯಾನ್ ಕಾರ್ಡ್ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- News
ಹೆಣ್ಣು ಮಕ್ಕಳ ಹಸಿವು ನೀಗಿಸುವ 'ಸಂತೃಪ್ತಿ': ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ವಿನೂತನ ಕಾರ್ಯ
- Technology
2023ರಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- Automobiles
ಬಹುಬೇಡಿಕೆಯ ಹೋಂಡಾ ಆಕ್ಟಿವಾ ಸ್ಕೂಟರ್ ಮೇಲೆ ಭರ್ಜರಿ ಆಫರ್
- Sports
IND Vs NZ 2nd ODI: ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಕಿವೀಸ್ ಪಡೆ: 108 ರನ್ಗಳಿಗೆ ಆಲೌಟ್
- Lifestyle
ದೇಹದಲ್ಲಿ ಮೆಗ್ನೇಸಿಯಂ ಕಡಿಮೆಯಾದ್ರೆ ಹೃದ್ರೋಗ ಖಚಿತ..! ಈ ಹತ್ತು ಆಹಾರಗಳು ನಿಮ್ಮ ಡಯಟ್ನಲ್ಲಿರಲಿ..
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇದಪ್ಪಾ ಕಾಡುಬೆಟ್ಟು ಶಿವನ ಕ್ರೇಜ್ ಅಂದ್ರೆ: ನೇರವಾಗಿ ಹಾಲಿವುಡ್‌ಗೆ 'ಕಾಂತಾರ'?
ಓಟಿಟಿಗೆ ಬಂದರೂ ಥಿಯೇಟರ್‌ಗಳಲ್ಲಿ 'ಕಾಂತಾರ' ಅಬ್ಬರ ಮಾತ್ರ ಕಮ್ಮಿ ಆಗಿಲ್ಲ. 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಇದೀಗ ಮತ್ತೊಂದು ಕ್ರೇಜಿ ನ್ಯೂಸ್ ಹರಿದಾಡ್ತಿದ್ದು, ಕಾಡುಬೆಟ್ಟು ಶಿವನ ಕಥೆ ನೇರವಾಗಿ ಹಾಲಿವುಡ್‌ಗೆ ತಲುಪುವ ಸುಳಿವು ಸಿಗುತ್ತಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ವಿಶ್ವದಾದ್ಯಂತ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಸಿನಿಮಾ 50 ದಿನ ಪೂರೈಸಿ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ತುಳು ಭಾಷೆಗೂ ಸಿನಿಮಾ ಡಬ್ ಆಗಿದ್ದು ರಿಲೀಸ್‌ಗೆ ರೆಡಿಯಾಗಿದೆ. ಕರಾವಳಿಯ ಮಣ್ಣಿನ ಕಥೆಯ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದು ಸಂಚಲನ ಸೃಷ್ಟಿಸಿದೆ. ಬಾಕ್ಸಾಫೀಸ್ ಗಳಿಕೆಗಿಂತ ಹೆಚ್ಚಾಗಿ ಪ್ರೇಕ್ಷಕರ ಮನಸ್ಸಿಗೆ ಸಿನಿಮಾ ಬಹಳ ಹತ್ತಿರವಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಸಿನಿಮಾ ವಿಶಿಷ್ಟ ಅನುಭವ ನೀಡಿದೆ. ಅದೇ ಕಾರಣಕ್ಕೆ ಭಾಷೆಯ ಗಡಿ ಮೀರಿ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ.
ಕರ್ನಾಟಕದಲ್ಲಿ
'ಕಾಂತಾರ'
ರಾಕಿ
ಭಾಯ್ಯ
'ಕೆಜಿಎಫ್
2'
ಸಿನಿಮಾವನ್ನು
ಹಿಂದಿಕ್ಕಿದ್ದು
ಹೇಗೆ?
ಮೊದಲಿಗೆ ಇಂಗ್ಲೀಷ್ ಸಬ್ ಟೈಟಲ್ ಜೊತೆಗೆ ಕನ್ನಡದಲ್ಲಿ ಮಾತ್ರ 'ಕಾಂತಾರ' ಸಿನಿಮಾ ಡಬ್ ಆಗಿತ್ತು. ನಂತರ ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುವಂತೆ ಒತ್ತಡ ಬಂದ ಹಿನ್ನಲೆಯಲ್ಲಿ ಇತರೆ ಭಾಷೆಗಳಿಗೆ ಡಬ್ ಆಗಿ ಸೂಪರ್ ಹಿಟ್ ಆಯಿತು.

ಇಂಗ್ಲೀಷ್ ಭಾಷೆಗೆ 'ಕಾಂತಾರ' ಡಬ್?
ನಮ್ಮ ಕರಾವಳಿಯ ಕಥೆಯನ್ನು ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತ್ರ ಕಟ್ಟಿಕೊಟ್ಟಿದ್ದರು. ಬೇರೆ ಭಾಷೆಗಳಿಗೆ 'ಕಾಂತಾರ' ಸಿನಿಮಾ ತಾನಾಗಿಯೇ ಡಬ್ ಮಾಡಿಸಿಕೊಂಡಿತ್ತು. ಇದೀಗ ಇಂಗ್ಲೀಷ್ ಭಾಷೆಗೆ ಚಿತ್ರವನ್ನು ಡಬ್ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಇಂತಹ ಕಸರತ್ತು ನಡೆಸುತ್ತಿದೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಅದೇ ನಿಜವಾದರೇ ಮತ್ತೊಮ್ಮೆ 'ಕಾಂತಾರ' ಸದ್ದು ವಿಶ್ವದಾದ್ಯಂತ ಮಾರ್ದನಿಸುವುದು ಗ್ಯಾರೆಂಟಿ.
ಬಿಳಿ
ಪಂಚೆಯಲ್ಲಿ
ಅಡ್ಡಾಡುತ್ತಿದ್ದ
ರಿಷಬ್
ಶೆಟ್ಟಿ
ಸೂಟು
ಧರಿಸಿ
ಪ್ರತ್ಯಕ್ಷ:
ಡಿವೈನ್
ಸ್ಟಾರ್ಗೆ
ಡಿಮ್ಯಾಂಡ್!

ನೇರವಾಗಿ ಓಟಿಟಿಗೆ ಇಂಗ್ಲೀಷ್ ವರ್ಷನ್?
'ಕಾಂತಾರ' ಚಿತ್ರವನ್ನು ಇಂಗ್ಲೀಷ್ ಭಾಷೆಗೆ ಡಬ್ ಮಾಡಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ನಡೀತಿದೆ. ಆದರೆ ಇಂಗ್ಲೀಷ್ ವರ್ಷನ್ ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಾ? ಇಲ್ಲ ಬರೀ ಓಟಿಟಿಗೆ ಬರುತ್ತಾ ಎನ್ನುವುದನ್ನು ಕಾದು ನೋಡಬೇಕು. 'ಕಾಂತಾರ' ಹಿಂದಿ ವರ್ಷನ್ ನೆಟ್‌ಫ್ಲಿಕ್ಸ್‌ನಲ್ಲಿ ಬರುವ ಸಾಧ್ಯತೆಯಿದೆ. ಅದೇ ರೀತಿ ಇಂಗ್ಲೀಷ್ ವರ್ಷನ್ ಸಹ ನೆಟ್‌ಫ್ಲಿಕ್ಸ್‌ಗೆ ಬಂದರೆ ಅಚ್ಚರಿ ಪಡಬೇಕಿಲ್ಲ.

ಹಾಲಿವುಡ್‌ನಲ್ಲಿ ಸದ್ದು ಮಾಡಿದ್ದ 'RRR'
ರಾಜಮೌಳಿ ನಿರ್ದೇಶನದ 'RRR' ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿ ಹಾಲಿವುಡ್‌ನಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ರಾಮ್-ಭೀಮ್ ಬ್ರೊಮ್ಯಾನ್ಸ್ ನೋಡಿ ಬೆರಗಾಗಿದ್ದರು. ಚಿತ್ರತಂಡದ ಪ್ರಯತ್ನಕ್ಕೆ ಬಹುಪರಾಕ್ ಎಂದಿದ್ದರು. ಇವತ್ತಿಗೂ ಹಲವು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಂಡು ಧೂಳೆಬ್ಬಿಸುತ್ತಿದೆ. ಒಳ್ಳೆ ಕಂಟೆಂಟ್ ಇದ್ದರೆ ದಕ್ಷಿಣ ಭಾರತದ ಸಿನಿಮಾಗಳು ಹಾಲಿವುಡ್‌ನಲ್ಲೂ ಅಬ್ಬರಿಸುತ್ತವೆ ಎನ್ನುವುದು ಸಾಬೀತಾಗಿದೆ. 'ಕಾಂತಾರ' ಕೂಡ ಇದೇ ರೀತಿ ಹಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದರೆ ಅಚ್ಚರಿಪಡಬೇಕಿಲ್ಲ.
ಹಣ
ಮಾಡಿದ
ಮೇಲೆ
ದೈವಾರಾಧನೆ
ಮರೆತ
'ಕಾಂತಾರ'
ತಂಡ:
ದೈವಾರಾಧಕರ
ಆಕ್ರೋಶ

ತುಳು ವರ್ಷನ್ ರಿಲೀಸ್‌ಗೆ ಕೌಂಟ್‌ಡೌನ್
'ಕಾಂತಾರ' ಸಿನಿಮಾ ತುಳು ಭಾಷೆಗೆ ಡಬ್ ಆಗಿದ್ದು ನಾಳೆ(ಡಿಸೆಂಬರ್ 2) ತೆರೆಗಪ್ಪಳಿಸಲಿದೆ. ವಿದೇಶಗಳಲ್ಲೂ ಸಿನಿಮಾ ತುಳು ಭಾಷೆಯಲ್ಲಿ ಪ್ರದರ್ಶನ ಕಾಣುತಿದೆ. ತುಳುನಾಡಿದ ಕಥೆಯನ್ನು ಅಲ್ಲಿನ ಆಚಾರಣೆ, ಸಂಸ್ಕೃತಿಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಹಾಗಾಗಿ ತುಳು ಭಾಷೆಯಲ್ಲಿ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡಲೇಬೇಕು ಎಂದು ನಿರ್ಮಾಪಕರಾದ ವಿಜಯ್ ಕಿರಗಂದೂರ್ ಮುಂದಾಗಿದ್ದಾರೆ.