For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ 'ಕಾಂತಾರ': 4 ದಿನಗಳಲ್ಲಿ ಸಿನಿಮಾ ಗಳಿಸಿದೆಷ್ಟು..?

  |

  ಸ್ಯಾಂಡಲ್‌ವುಡ್‌ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡುವ ನಿರ್ದೇಶಕ ರಿಷಬ್‌ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಚಿತ್ರ 'ಕಾಂತಾರ' ಸೆಪ್ಟೆಂಬರ್‌ 30 ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಎಲ್ಲಡೆ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿರುವ 'ಕಾಂತಾರ' ಚಿತ್ರದ ಟಿಕೆಟ್‌ಗಾಗಿ ಜನ ಮುಗಿ ಬೀಳುತ್ತಿದ್ದಾರೆ. ಸಣ್ಣ ಪುಟ್ಟ ಚಿತ್ರಮಂದಿರಗಳಿಂದ ಹಿಡಿದು ಮಲ್ಟಿಪ್ಲೆಕ್ಸ್‌ಗಳಲ್ಲೂ ಬಹುತೇಕ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿದ್ದು, ಅನೇಕರು ಟಿಕೆಟ್‌ಗಾಗಿ ಪರದಾಡುತ್ತಿದ್ದಾರೆ.

  ಹೊಂಬಾಳೆ ಫಿಲ್ಮ್ಸ್ ರಾಕಿಂಗ್ ಸ್ಟಾರ್ ಯಶ್‌ ಹಾಗೂ ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಅವರನ್ನುಹೊರತು ಪಡಿಸಿ ಇದೇ ಮೊದಲ ಬಾರಿಗೆ ಬೇರೆ ನಾಯಕನ ಚಿತ್ರಕ್ಕೆ ಬಂಡವಾಳ ಹಾಕಿದ್ದು, ರಿಷಬ್‌ ಶೆಟ್ಟಿ 'ಕಾಂತಾರ' ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಹೊಂಬಾಳೆ ಫಿಲ್ಮ್ಸ್ ಗೆಲುವಿನ ನಗೆ ಬೀರಿದೆ.

  ಅಂದು ಇದೇ ಥಿಯೇಟರ್‌ನಲ್ಲಿ ಒಂದು ಶೋಗಾಗಿ ಅವರಿವರ ಕೈಕಾಲು ಹಿಡಿದಿದ್ದ ರಿಷಬ್: ಇಂದು 10 ಶೋಗಳು ಹೌಸ್‌ಫುಲ್!ಅಂದು ಇದೇ ಥಿಯೇಟರ್‌ನಲ್ಲಿ ಒಂದು ಶೋಗಾಗಿ ಅವರಿವರ ಕೈಕಾಲು ಹಿಡಿದಿದ್ದ ರಿಷಬ್: ಇಂದು 10 ಶೋಗಳು ಹೌಸ್‌ಫುಲ್!

  ಈ ಹಿಂದೆ ತಮ್ಮ ಮೂರು ಚಿತ್ರಗಳ ನಿರ್ದೇಶನದಿಂದ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಿರ್ದೇಶಕ ಎನಿಸಿಕೊಂಡಿರುವ ರಿಷಬ್‌ ಶೆಟ್ಟಿ, ನಾಲ್ಕನೇ ಚಿತ್ರ ಕಾತಾರದಲ್ಲೂ ಈ ಭರವಸೆಯನ್ನು ಉಳಿಸಿಕೊಂಡಿದ್ದಾರೆ. 'ಕಾಂತಾರ'ದಲ್ಲಿ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನಕ್ಕೆ ಮನಸೋಲದವರಿಲ್ಲ. ಅಷ್ಟರ ಮಟ್ಟಿಗೆ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ರಿಷಬ್‌ ಶೆಟ್ಟಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದು, ತಮ್ಮ ಎರಡನೇ ಚಿತ್ರದಲ್ಲಿಯೇ ಸಪ್ತಮಿ ಗೌಡ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

  'ಕಾಂತಾರ'ದ ಗೆಲುವಿನ ನಾಗಾಲೋಟ

  'ಕಾಂತಾರ'ದ ಗೆಲುವಿನ ನಾಗಾಲೋಟ

  ಸೆಪ್ಟೆಂಬರ್ 30ರಂದು 'ಕಾಂತಾರ' ಚಿತ್ರ ಬಿಡುಗಡೆಯಾಗಿದ್ದು, ಅದಕ್ಕೂ ಮೊದಲು ಅನೇಕರು ಸಪ್ಟೆಂಬರ್ 29ರಂದೇ ಪ್ರೀಮಿಯರ್ ಶೋಗಳನ್ನು ವೀಕ್ಷಿಸಿದ್ದರು. ಚಿತ್ರ ಬಿಡುಗಡೆಯಾದ ದಿನದಿಂದ ಕಳೆದ ನಾಲ್ಕು ದಿನ 'ಕಾಂತಾರ'ದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ 'ಕಾಂತಾರ' ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದ್ದು, ಒಮ್ಮೆ ಕಾಂತಾರ ವೀಕ್ಷಿಸಿದ ಪ್ರೇಕ್ಷಕರು ಮತ್ತೊಮ್ಮೆ ಸಿನಿಮಾ ನೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

  Kantara : ಇವತ್ತು ಕೂಡ ಹೌಸ್‌ಫುಲ್.. ಹೌಸ್‌ಫುಲ್.. ಹೌಸ್‌ಫುಲ್: ಮಂಗಳವಾರ, ಬುಧವಾರ ಶೋಗಳು ಫಾಸ್ಟ್ ಫಿಲ್ಲಿಂಗ್!Kantara : ಇವತ್ತು ಕೂಡ ಹೌಸ್‌ಫುಲ್.. ಹೌಸ್‌ಫುಲ್.. ಹೌಸ್‌ಫುಲ್: ಮಂಗಳವಾರ, ಬುಧವಾರ ಶೋಗಳು ಫಾಸ್ಟ್ ಫಿಲ್ಲಿಂಗ್!

  'ಕಾಂತಾರ' ಚಿತ್ರಕ್ಕೆ ಉತ್ತಮ ವಿಮರ್ಶೆ

  'ಕಾಂತಾರ' ಚಿತ್ರಕ್ಕೆ ಉತ್ತಮ ವಿಮರ್ಶೆ

  ದಸರಾ ರಜೆ ಸಮಯದಲ್ಲಿ 'ಕಾಂತಾರ' ಬಿಡುಗಡೆಯಾಗಿರುವುದರಿಂದ ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌ ಆಗಿದ್ದು, ಸಿನಿಮಾ ಪ್ರಿಯರು ಕುಟುಂಬ ಸಮೇತರಾಗಿ ಹೋಗಿ ಚಿತ್ರ ವೀಕ್ಷಿಸಿಸುತ್ತಿದ್ದಾರೆ. ಇನ್ನು 'ಕಾಂತಾರ' ಚಿತ್ರಕ್ಕೆ ಉತ್ತಮ ವಿಮರ್ಶೆ ವ್ಯಕ್ತವಾಗಿದ್ದು, ಸೋಶಿಯಲ್‌ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ 'ಕಾಂತಾರ' ಸಿನಿಮಾವನ್ನು ವೀಕ್ಷಿಸುವ ಕಾತುರ ಎಲ್ಲರಲ್ಲೂ ಹೆಚ್ಚಾಗಿದ್ದು, ಚಿತ್ರದ ಟಿಕೆಟ್‌ಗಾಗಿ ಮುಗಿ ಬೀಳುತ್ತಿದ್ದಾರೆ.

  ನಾಲ್ಕು ದಿನಗಳಲ್ಲಿ 'ಕಾಂತಾರ' ಒಟ್ಟು ಗಳಿಸಿದೆಷ್ಟು..?

  ನಾಲ್ಕು ದಿನಗಳಲ್ಲಿ 'ಕಾಂತಾರ' ಒಟ್ಟು ಗಳಿಸಿದೆಷ್ಟು..?

  ಕಳೆದ ನಾಲ್ಕು ದಿನಗಳಿಂದ ವಿಶ್ವದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ 'ಕಾಂತಾರ' ಚಿತ್ರ ಭಾರತದಲ್ಲಿ ಈವರೆಗೆ 22 ರೂಪಾಯಿ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಮೊದಲೆರಡು ದಿನ ಕಾಂತಾರ ಶೋಗಳ ಸಂಖ್ಯೆ ಕಮ್ಮಿ ಇತ್ತು. ಆದರೆ ಬೇಡಿಕೆಗೆ ತಕ್ಕಂತೆ 100 ಶೋಗಳನ್ನು ಹೆಚ್ಚಿಸಲಾಗಿತ್ತು. ಹೀಗಾಗಿ ಕಲೆಕ್ಷನ್ ಹೆಚ್ಚಾಗುತ್ತಾ ಸಾಗಿದೆ. ಎರಡನೇ ದಿನ 6.50 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

  ನಾಲ್ಕನೇ ದಿನವೂ 'ಕಾಂತಾರ' ಹೌಸ್‌ ಫುಲ್‌ ಪ್ರದರ್ಶನ

  ನಾಲ್ಕನೇ ದಿನವೂ 'ಕಾಂತಾರ' ಹೌಸ್‌ ಫುಲ್‌ ಪ್ರದರ್ಶನ

  'ಕಾಂತಾರ' ಚಿತ್ರ ಮೊದಲ ವಾರಾಂತ್ಯದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಸಖತ್‌ ಸದ್ದು ಮಾಡಿತ್ತು. ಭಾನುವಾರ 'ಕಾಂತಾರ' ಹೌಸ್‌ಫುಲ್‌ ಪ್ರದರ್ಶನ ಕಂಡಿದ್ದು, ಬಾಕ್ಸ್‌ ಆಫೀಸ್‌ನಲ್ಲಿ 8 ಕೋಟಿ ರೂಪಾಯಿ ಗಳಿಕೆ ಮಾಡಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರಿಗೆ 'ಕಾಂತಾರ' ಮೇಲಿನ ಕ್ರೇಜ್‌ ಹೆಚ್ಚಾಗುತ್ತಿದ್ದು, ನಿನ್ನೆ (ಅಕ್ಟೋಬರ್‌ 3) ವಾರದ ಮೊದಲ ದಿನವಾದರೂ ಸಹ ಕಾಂತಾರ ಹೌಸ್‌ ಫುಲ್‌ ಪದ್ರರ್ಶನ ಕಂಡಿದೆ. ಈ ಮೂಲಕ ಚಿತ್ರ ಬಿಡುಗಡೆಯಾಗಿ ನಾಲ್ಕನೇ ದಿನ 'ಕಾಂತಾರ' 4 ಕೋಟಿಗೂ ಅಧಿಕ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ 'ಕಾಂತಾರ' ಪ್ರದರ್ಶನ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

  English summary
  Rishab Shetty Starrer kantara Box Office Collection Day 4.
  Tuesday, October 4, 2022, 11:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X