For Quick Alerts
  ALLOW NOTIFICATIONS  
  For Daily Alerts

  11ನೇ ದಿನವೂ 'ಕಾಂತಾರ' ಹೌಸ್‌ಫುಲ್: ಈಗ KGF ದಾಖಲೆಗಳ ಮೇಲೆ ಅಭಿಮಾನಿಗಳ ಕಣ್ಣು!

  |

  ಎರಡನೇ ವಾರವೂ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಕಾರುಬಾರು ಜೋರಾಗಿದೆ. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡ್ತಿದ್ದು, ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆಸಿದೆ. 11ನೇ ದಿನವೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದ್ದು, ವಿಶ್ವದಾದ್ಯಂತ 'ಕಾಂತಾರ' ಕಿಚ್ಚು ಹಬ್ಬಿದೆ. ಪರಭಾಷಿಕರು ಕೂಡ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

  ಎಂಥಹ ದೊಡ್ಡ ಸಿನಿಮಾವೇ ಆದರೂ 2ನೇ ವಾರಕ್ಕೆ ಕ್ರೇಜ್ ಕಮ್ಮಿ ಆಗಿಬಿಡುತ್ತೆ. ಆದರೆ 'ಕಾಂತಾರ' ಅದಕ್ಕೆ ತದ್ವಿರುದ್ಧ ಎನ್ನುವಂತಿದೆ. KGF - 2 ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಈ ಪಾಟಿ ಕ್ರೇಜ್ ಮತ್ಯಾವುದೇ ಕನ್ನಡ ಚಿತ್ರಕ್ಕೂ ಸಿಕ್ಕಿರಲಿಲ್ಲ. ದಿನದಿಂದ ದಿನಕ್ಕೆ ಸಿನಿಮಾ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಲೇ ಇದೆ. ಪ್ರೇಕ್ಷಕರು ಪದೇ ಪದೇ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಫ್ಯಾಮಿಲಿ ಸಮೇತ ಸಿನಿಮಾ ನೋಡಲು ಬರ್ತಿದ್ದಾರೆ. ಚಿತ್ರದ ಎಲ್ಲಾ ವಿಭಾಗಗಳ ಬಗ್ಗೆಯೂ ಮಾತನಾಡುತ್ತಿದ್ದಾರೆ. ರಿಷಬ್ ಶೆಟ್ಟಿ ನಟನೆಯ ಬಗ್ಗೆ ಒಂದು ಕೈ ಹೆಚ್ಚೇ ಚರ್ಚೆ ನಡೀತಿದೆ.

  ಹಿಂದಿ, ತೆಲುಗಿನಲ್ಲಿ 'ಕಾಂತಾರ' ಟ್ರೈಲರ್: ಹೇಗಿದೆ ವೀವ್ಸ್-ಟ್ರೆಂಡ್?ಹಿಂದಿ, ತೆಲುಗಿನಲ್ಲಿ 'ಕಾಂತಾರ' ಟ್ರೈಲರ್: ಹೇಗಿದೆ ವೀವ್ಸ್-ಟ್ರೆಂಡ್?

  ಕನ್ನಡ ಸಿನಿಮಾಗಳ ಬಗ್ಗೆ ಪರಭಾಷಿಕರು ಮಾತನಾಡುವಂತಾಗಿದೆ. ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರ್ತಿದೆ ಎಂದು ಇತ್ತ ತಿರುಗಿ ನೋಡುತ್ತಿದ್ದಾರೆ. 'KGF', '777 ಚಾರ್ಲಿ', 'ವಿಕ್ರಾಂತ್ ರೋಣ' ನಂತರ 'ಕಾಂತಾರ' ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. 'ಕಾಂತಾರ' ಸಿನಿಮಾ ಬಗ್ಗೆ ಹೊರರಾಜ್ಯಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ.

  11ನೇ ದಿನವೂ 'ಕಾಂತಾರ' ಹೌಸ್‌ಫುಲ್

  11ನೇ ದಿನವೂ 'ಕಾಂತಾರ' ಹೌಸ್‌ಫುಲ್

  ಬುಕ್‌ಮೈ ಶೋ ಗಮನಿಸಿದರೆ 'ಕಾಂತಾರ' ಹವಾ ಹೇಗಿದೆ ಎನ್ನುವುದರ ದರ್ಶನವಾಗುತ್ತದೆ. ವೀಕೆಂಡ್‌ನಲ್ಲಿ ಒಂದು ದಿನ ಮೊದಲೇ ಟಿಕೆಟ್ ಬುಕ್ಕಿಂಗ್‌ ಜೋರಾಗಿರುತ್ತದೆ. ಆದರೆ ಎರಡನೇ ಸೋಮವಾರವೂ ಅದೇ ರೀತಿಯ ಪ್ರತಿಕ್ರಿಯೆ ಸಿಕ್ತಿದೆ. ಒಂದು ದಿನ ಮೊದಲೇ ಪ್ರೇಕ್ಷಕರು ಟಿಕೆಟ್ ಬುಕ್ ಮಾಡಿಕೊಳ್ಳುವಂತಾಗಿದೆ. ಯಾರೇ ಇಬ್ಬರೂ ಎಲ್ಲೇ ಭೇಟಿ ಆದರೂ 'ಕಾಂತಾರ' ಸಿನಿಮಾ ನೋಡಿದ್ರಾ ? ನೀವ್ ನೋಡಿಲ್ವಾ? ಎನ್ನುವ ರೀತಿ ಚರ್ಚೆ ನಡೀತಿದೆ. ದಶಕಗಳಿಂದ ಸಿನಿಮಾ ನೋಡದೇ ಇರುವವರನ್ನು 'ಕಾಂತಾರ' ಥಿಯೇಟರ್‌ಗೆ ಕರ್ಕೊಂಡ್ ಬರ್ತಿದೆ.

  ಮುಂಬೈನಲ್ಲಿ 120 ಶೋ, ಚೆನ್ನೈನಲ್ಲಿ 25 ಶೋ

  ಮುಂಬೈನಲ್ಲಿ 120 ಶೋ, ಚೆನ್ನೈನಲ್ಲಿ 25 ಶೋ

  ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ 'ಕಾಂತಾರ' ಚಿತ್ರಕ್ಕೆ ಅದ್ಬೂತ ಪ್ರತಿಕ್ರಿಯೆ ಸಿಗುತ್ತಿದೆ. ಬಹುತೇಕ ಶೋಗಳು ಹೌಸ್‌ಫುಲ್ ಆಗ್ತಿರೋದು ಅಲ್ಲಿನ ಫಿಲ್ಮ್ ಮೇಕರ್ಸ್‌ಗೂ ಅಚ್ಚರಿ ತಂದಿದೆ. ಮುಂಬೈನಲ್ಲಿ 120ಕ್ಕೂ ಅಧಿಕ ಶೋಗಳು ಪ್ರದರ್ಶನವಾಗ್ತಿದ್ರೆ, ಚೆನ್ನೈನಲ್ಲಿ 25ಕ್ಕೂ ಅಧಿಕ ಶೋಗಳಲ್ಲಿ 'ಕಾಂತಾರ' ಆರ್ಭಟ ಜೋರಾಗಿದೆ. ಈ ಹಿಂದೆ KGF - 2 ಚಿತ್ರಕ್ಕೆ ಮಾತ್ರ ಹೊರ ರಾಜ್ಯಗಳಲ್ಲಿ ಇಂತಹ ರೆಸ್ಪಾನ್ಸ್ ಸಿಕ್ಕಿತ್ತು. ಇನ್ನು ಹೈದರಾಬಾದ್‌ನಲ್ಲೂ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

  100 ಕೋಟಿ ಕ್ಲಬ್‌ನತ್ತ 'ಕಾಂತಾರ'

  100 ಕೋಟಿ ಕ್ಲಬ್‌ನತ್ತ 'ಕಾಂತಾರ'

  ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಚಿತ್ರತಂಡ ಅಫೀಷಿಯಲ್ ಆಗಿ ಘೋಷಿಸದೇ ಇದ್ದರೂ 10 ದಿನಕ್ಕೆ ಸಿನಿಮಾ ಕಲೆಕ್ಷನ್ 50 ಕೋಟಿ ಗಡಿ ದಾಟಿರುವ ಸುಳಿವು ಸಿಕ್ತಿದೆ. ಸಿನಿಮಾ ಕ್ರೇಜ್ ನೋಡುತ್ತಿದ್ದರೆ ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ದೊಡ್ಡಮಟ್ಟದಲ್ಲಿ ಚಿತ್ರವನ್ನು ಪ್ರಪಂಚದ ಮೂಲೆ ಮೂಲೆಗೆ ತಲುಪಿಸುತ್ತಿದೆ.

  ಶುಕ್ರವಾರದಿಂದ 'ಕಾಂತಾರ' ಅಸಲಿ ಆಟ

  ಶುಕ್ರವಾರದಿಂದ 'ಕಾಂತಾರ' ಅಸಲಿ ಆಟ

  ಸದ್ಯ ಇಂಗ್ಲೀಷ್ ಸಬ್‌ಟೈಟಲ್ ಜೊತೆಗೆ 'ಕಾಂತಾರ' ಸಿನಿಮಾ ಕನ್ನಡದಲ್ಲಿ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಈಗಾಗಲೇ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಸಿನಿಮಾ ಡಬ್ ಆಗಿದ್ದು ಟ್ರೈಲರ್ ರಿಲೀಸ್ ಆಗಿದೆ. ಇದೇ ಶುಕ್ರವಾರದಿಂದ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮತ್ತೊಮ್ಮೆ 'ಕಾಂತಾರ' ಆರ್ಭಟ ಶುರುವಾಗಲಿದೆ. ಪರಭಾಷಿಕರು ಅವರದ್ದೇ ಭಾಷೆಯಲ್ಲಿ ಸಿನಿಮಾ ನೋಡುವ ಅವಕಾಶ ಸಿಗಲಿದೆ.

  English summary
  Rishab Shetty Starrer Kantara Continues Its Dream Run At Box Office. The film received rave reviews, which helped it emerge as a commercial success. The movie will soon be released in Hindi, Telugu, Tamil, and Malayalam. Know More.
  Monday, October 10, 2022, 17:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X