For Quick Alerts
  ALLOW NOTIFICATIONS  
  For Daily Alerts

  Kantara : ಇವತ್ತು ಕೂಡ ಹೌಸ್‌ಫುಲ್.. ಹೌಸ್‌ಫುಲ್.. ಹೌಸ್‌ಫುಲ್: ಮಂಗಳವಾರ, ಬುಧವಾರ ಶೋಗಳು ಫಾಸ್ಟ್ ಫಿಲ್ಲಿಂಗ್!

  |

  'ಕಾಂತಾರ' ಸಿನಿಮಾ ನಿಜಕ್ಕೂ ತೆರೆಮೇಲೆ ಚಮತ್ಕಾರ ಮಾಡಿದೆ. ಸಿನಿರಸಿಕರು ಸಿನಿಮಾ ನೋಡಲು ದೊಡ್ಡಮಟ್ಟದಲ್ಲಿ ಮುಗಿಬಿದ್ದಿದ್ದು, ನಾಲ್ಕನೇ ದಿನವಾದ ಇಂದು(ಅಕ್ಟೋಬರ್ 3) ಕೂಡ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರು ಫ್ಯಾಮಿಲಿ ಸಮೇತ ಸಿನಿಮಾ ನೋಡಲು ಟಿಕೆಟ್ ಬುಕ್‌ ಮಾಡಿಕೊಳ್ಳುತ್ತಿದ್ದಾರೆ. ಪರಿಣಾಮ ನಾಳೆ, ನಾಡಿದ್ದು ಶೋಗಳ ಟಿಕೆಟ್ಸ್ ಹಾಟ್‌ ಕೇಕ್ ತರ ಸೇಲ್ ಆಗ್ತಿದೆ.

  ಯಾವುದೇ ಚಿತ್ರದ ಭವಿಷ್ಯ ನಿರ್ಧಾರವಾಗುವುದು ಮೊದಲ ಸೋಮವಾರ, ಅಂದರೆ ಸಿನಿಮಾ ರಿಲೀಸ್ ವೀಕೆಂಡ್ ನಂತರದ ದಿನ. ಫಸ್ಟ್‌ ವೀಕೆಂಡ್‌ನಲ್ಲಿ ಸಹಜವಾಗಿಯೇ ದೊಡ್ಡ ಸಿನಿಮಾಗಳಿಗೆ ಅಭಿಮಾನಿಗಳಿಂದ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ. ಆದರೆ ವಾರದ ದಿನಗಳಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವ ಶಕ್ತಿ ಚಿತ್ರಕ್ಕೆ ಇರಬೇಕು. ಸೋಮವಾರವೂ ಸಿನಿಮಾ ನೋಡಲು ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಥಿಯೇಟರ್‌ಗೆ ಬಂದರೆ ಆ ಸಿನಿಮಾ ಸೂಪರ್ ಹಿಟ್ ಅಂತಲೇ ಅರ್ಥ. 'ಕಾಂತಾರ' ಸಿನಿಮಾ ವಿಚಾರದಲ್ಲಿ ಇದು ನಿಜವಾಗ್ತಿದೆ.

  ಕಳೆದ 3 ದಿನಗಳಿಂದ ಹಲವೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ನಾಲ್ಕನೇ ದಿನವೂ ಅಭೂತಪೂರ್ವ ಬೆಂಬಲ ವ್ಯಕ್ತವಾಗ್ತಿದೆ. ಒಮ್ಮೆ ಬುಕ್‌ಮೈ ಶೋ ವೆಬ್‌ಸೈಟ್ ಓಪನ್ ಮಾಡಿ ನೋಡಿದರೆ, 'ಕಾಂತಾರ' ಸಿನಿಮಾ ಹವಾ ಹೇಗಿದೆ ಎನ್ನುವುದು ಗೊತ್ತಾಗುತ್ತದೆ.

   ಕೆಲವೆಡೆ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್

  ಕೆಲವೆಡೆ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್

  'ಕಾಂತಾರ' ಅಪ್ಪಟ ಕನ್ನಡ ಮಣ್ಣಿನ ಸಿನಿಮಾ. ದೈವಿಕ ಚಿತ್ರ ಎಂದು ಎಲ್ಲರೂ ಕೊಂಡಾಡುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಜೊತೆಗೆ ನಟನೆಯಲ್ಲೂ ಸೈ ಅನ್ನಿಸಿಕೊಂಡಿದ್ದಾರೆ. ಕೆಲವರು ಈ ಬಾರಿ ರಿಷಬ್‌ಗೆ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಸಿಗುತ್ತದೆ ಎನ್ನುತ್ತಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಕರಾವಳಿ ಭಾಗಗಳಲ್ಲಿ ಸಿನಿಮಾ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಮಂಡ್ಯ, ಶಿವಮೊಗ್ಗದಲ್ಲೂ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. KGF- 2 ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಇಂತಹ ರೆಸ್ಪಾನ್ಸ್ ಪಡೆದುಕೊಳ್ತಿರೋ ಮತ್ತೊಂದು ಸಿನಿಮಾ 'ಕಾಂತಾರ' ಎನ್ನಬಹುದು.

   ನಾಳೆ, ನಾಡಿದ್ದು ಟಿಕೆಟ್ ಬುಕ್ಕಿಂಗ್ ಜೋರು

  ನಾಳೆ, ನಾಡಿದ್ದು ಟಿಕೆಟ್ ಬುಕ್ಕಿಂಗ್ ಜೋರು

  ಇಂದು ಮಾತ್ರವಲ್ಲ. ನಾಳೆ ಆಯುಧ ಪೂಜೆ, ನಾಡಿದ್ದು ವಿಜಯದಶಮಿ ರಜೆ ಇದೆ. ಹಾಗಾಗಿ ಪ್ರೇಕ್ಷಕರು ಫ್ಯಾಮಿಲಿ ಸಮೇತ 'ಕಾಂತಾರ' ಸಿನಿಮಾ ನೋಡಲು ನಿರ್ಧರಿಸಿದ್ದಾರೆ. ಪರಿಣಾಮ ಎರಡೂ ದಿನಗಳ ಶೋಗಳು ಫಾಸ್ಟ್‌ ಫಿಲ್ಲಿಂಗ್ ಆಗುತ್ತಿದೆ. ಈಗಾಗಲೇ ಕೆಲ ಶೋಗಳ 90ರಷ್ಟು ಟಿಕೆಟ್ಸ್ ಸೋಲ್ಡ್‌ಔಟ್ ಆಗಿದೆ. ಇನ್ನೆರಡು ದಿನವೂ ಸಿನಿಮಾ ಹೌಸ್‌ಫುಲ್ ಆಗುವುದರಲ್ಲಿ ಅನುಮಾನವಿಲ್ಲ.

   ಪ್ರೇಕ್ಷಕರಿಂದಲೇ 'ಕಾಂತಾರ' ಪ್ರಮೋಷನ್

  ಪ್ರೇಕ್ಷಕರಿಂದಲೇ 'ಕಾಂತಾರ' ಪ್ರಮೋಷನ್

  ಹೊಂಬಾಳೆ ಸಂಸ್ಥೆ ದೊಡ್ಡಮಟ್ಟದಲ್ಲಿ 'ಕಾಂತಾರ' ಸಿನಿಮಾ ಪ್ರಮೋಷನ್ ಮಾಡಲಿಲ್ಲ. ಕಾರಣ ಅವರಿಗೆ ಸಿನಿಮಾ ಮೇಲೆ ನಂಬಿಕೆ ಇತ್ತು. ಪ್ರೇಕ್ಷಕರೇ ಚಿತ್ರದ ಪ್ರಚಾರ ಮಾಡ್ತಾರೆ, ಗೆಲ್ಲಿಸ್ತಾರೆ ಎಂದು ನಂಬಿದ್ದರು. ಅದು ಈಗ ನಿಜವಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಉಳಿದವರಿಗೆ ಸಿನಿಮಾ ನೋಡಲು ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ರಿವ್ಯೂ ಬರೆದು ಪ್ರಚಾರ ಮಾಡುತ್ತಿದ್ದಾರೆ.

   ಕೋಟಿ ಕೋಟಿ ಬಾಚುತ್ತಿರುವ ಚಿತ್ರ

  ಕೋಟಿ ಕೋಟಿ ಬಾಚುತ್ತಿರುವ ಚಿತ್ರ

  ರಿಷಬ್ ಶೆಟ್ಟಿ ಕರಿಯರ್‌ನಲ್ಲಿ ಬಿಗ್ಗೆಸ್ಟ್ ಓಪನಿಂಗ್ ಪಡೆದುಕೊಂಡಿರುವ ಸಿನಿಮಾ 'ಕಾಂತಾರ'. ಇದು ಬರೀ ಅಂತೆ ಕಂತೆ ಸುದ್ದಿ ಅಲ್ಲ. ಸಿನಿಮಾ ಮೊದಲೆರಡು ದಿನಗಳಲ್ಲೇ 10 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಭಾನುವಾರವೂ 7ರಿಂದ 8 ಕೋಟಿ ಬಾಚಿರುವ ಅಂದಾಜಿದೆ. ಹಾಗಾಗಿ ಫಸ್ಟ್‌ ವೀಕೆಂಡ್‌ನಲ್ಲಿ ಸಿನಿಮಾ 16 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಮಂಗಳೂರಿನಲ್ಲಂತೂ ಎಲ್ಲಾ ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

  English summary
  Rishab Shetty Starrer Kantara Monday Advance Booking Report. Kantara Is Doing Really Great In Karnataka As Well As In Some Of The Main Cities Of India.
  Monday, October 3, 2022, 14:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X