»   » ಅಶ್ಲೀಲ ವಿಡಿಯೋ ವಿರುದ್ಧ ನಟಿ ರಿಷಿಕಾ ಮೊಕದ್ದಮೆ

ಅಶ್ಲೀಲ ವಿಡಿಯೋ ವಿರುದ್ಧ ನಟಿ ರಿಷಿಕಾ ಮೊಕದ್ದಮೆ

Posted By:
Subscribe to Filmibeat Kannada
ಇದೇ ಶುಕ್ರವಾರ (ಏ.26) ತೆರಕಂಡು ಪ್ರದರ್ಶನ ಕಾಣುತ್ತಿರುವ 'ಬೆಂಕಿ ಬಿರುಗಾಳಿ' ಚಿತ್ರದ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಎಸ್.ಕೆ.ಬಷೀರ್ ವಿರುದ್ಧ ಅದೇ ಚಿತ್ರದ ನಾಯಕನಟಿ ರಿಷಿಕಾ ಸಿಂಗ್ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಮ್ಮನ್ನು ಹೋಲುವ ಯುವತಿಯ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ ಎಂದು ರಿಷಿಕಾ ಆರೋಪಿಸಿದ್ದಾರೆ. ಈ ಮೂಲಕ ತಮ್ಮ ತೇಜೋವಧೆಗೆ ಯತ್ನಿಸಿದ್ದಾರೆ ಎಂದಿದ್ದಾರೆ.

ಈ ಹಿಂದೆ ತಾವು ಅಭಿನಯಿಸಿದ್ದ 'ಯಾರಾದ್ರೆ ನನಗೇನು' ಚಿತ್ರದ ಫೋಟೋ ಸೆಷನ್ ಚಿತ್ರಗಳನ್ನು ಬಳಸಿಕೊಂಡು ಅಶ್ಲೀಲ ವಿಡಿಯೋ ಸೃಷ್ಟಿಸಲಾಗಿದೆ. ಇದನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡುವ ಮೂಲಕ ತನ್ನ ಮಾನಹಾಕಿಗೆ ಯತ್ನಿಸಿದ್ದಾರೆ ಎಂದು ಬಷೀರ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ ರಿಷಿಕಾ.

ಅಶ್ಲೀಲ ವಿಡಿಯೋವನ್ನು ಅಂತರ್ಜಾಲಕ್ಕೆ ಹಾಕಿ ಅವರು ತಮಗೆ ಬೆದರಿಕೆಯನ್ನೂ ಒಡ್ಡಿದ್ದಾರೆ. ಅಶ್ಲೀಲ ವಿಡಿಯೋದಲ್ಲಿರುವುದು ತಾವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ರಿಷಿಕಾ. ಈ ಮೇರೆಗೆ ಬಷೀರ್ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಿಷಿಕಾ ದೂರಿನ ಅನ್ವಯ ಸಮಗ್ರ ತನಿಖೆ ಕೈಗೊಳ್ಳಲಾಗುವುದು. ರಿಷಿಕಾ ಮಾಡಿರುವ ಆರೋಪಗಳು ನಿಜವಾದರೆ ಬಷೀರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಉತ್ತರ ವಿಭಾಗದ ಡಿಸಿಪಿ ಎಸ್.ಎನ್.ಸಿದ್ಧರಾಮಪ್ಪ ತಿಳಿಸಿದ್ದಾರೆ. (ಏಜೆನ್ಸೀಸ್)

English summary
Kannada actress Rishika Singh lodged a complaint against 'Benki Birugali' director-producer S K Bashir on Sunday with Sanjaynagar police. The actress accusing that, Bashir uploading explicit scenes of her on the Internet.
Please Wait while comments are loading...