»   » ರಿಷಿಕಾ ಸಿಂಗ್ ಮದುವೆ ಬಗ್ಗೆ ಮೌನ ಮುರಿದ ಆದಿತ್ಯಾ

ರಿಷಿಕಾ ಸಿಂಗ್ ಮದುವೆ ಬಗ್ಗೆ ಮೌನ ಮುರಿದ ಆದಿತ್ಯಾ

Posted By:
Subscribe to Filmibeat Kannada
Actor Aditya
ಕನ್ನಡ ಚಿತ್ರರಂಗದ ತಾರೆ ರಿಷಿಕಾ ಸಿಂಗ್ ಮದುವೆ ಕ್ಯಾನ್ಸಲ್ ಆಗಿದೆ. ಈ ಬಗ್ಗೆ ಅವರ ಅಣ್ಣ ಹಾಗೂ ನಟ ಆದಿತ್ಯಾ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಅವರು ಮಾತನಾಡುತ್ತಾ ಇದು ತಮ್ಮ ಕುಟುಂಬದ ವೈಯಕ್ತಿಕ ವಿಚಾರ. ಇದನ್ನು ಮಾಧ್ಯಮಗಳು ವೈಭವೀಕರಿಸುವುದು ಸರಿಯಲ್ಲ ಎಂದಿದ್ದಾರೆ.

ನನ್ನ ತಂಗಿ ರಿಷಿಕಾ ಸಿಂಗ್ ಅವರ ಮದುವೆ ಕ್ಯಾನ್ಸಲ್ ಆಗಿದೆ ಎಂಬುದು ನಿಜ. ಆದರೆ ಮದುವೆ ಯಾಕೆ ಕ್ಯಾನ್ಸಲ್ ಆಯಿತು ಎಂದು ಹೇಳಲು ನಾನು ಇಚ್ಛಿಸುವುದಿಲ್ಲ. ಮದುವೆ ಎಂಬುದು ಯಾವುದೇ ಹೆಣ್ಣುಮಕ್ಕಳ ವಿಚಾರದಲ್ಲಿ ಪ್ರಮುಖ ಘಟ್ಟ. ಅದು ಕ್ಯಾನ್ಸಲ್ ಆದರೆ ಯಾರಿಗೇ ಆದರೂ ನೋವಾಗುತ್ತದೆ. ಅದೇ ರೀತಿ ನನ್ನ ತಂಗಿಗೂ ಆಗಿದೆ.

ಆದರೆ ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂಬುದು ಮಾಧ್ಯಮಗಳ ಸೃಷ್ಟಿ. ಒಂದು ಹೆಣ್ಣುಮಗುವಿಗೆ ಅನ್ಯಾಯ ನಡೆಯುತ್ತಿದೆ ಎಂದರೆ ಅದನ್ನು ವೈಭವೀಕರಿಸುವುದು ಸರಿಯಲ್ಲ. ಈ ಘಟನೆಯಿಂದ ರಿಷಿಕಾ ಸ್ವಲ್ಪ ನೊಂದಿದ್ದಾರೆ ಅಷ್ಟೇ. ಸದ್ಯಕ್ಕೆ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದಿದ್ದಾರೆ ಆದಿತ್ಯಾ.

ಇದು ನಮ್ಮ ಕುಟುಂಬದ ವೈಯಕ್ತಿಕ ವಿಚಾರ. ಈ ಬಗ್ಗೆ ಅನಾವಶ್ಯಕವಾಗಿ ಮಾಧ್ಯಮಗಳು ಇಲ್ಲಸಲ್ಲದನ್ನು ಸೃಷ್ಟಿಸುವುದನ್ನು ಬಿಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ರಿಷಿಕಾ ಸಿಂಗ್ ಮದುವೆ ಮುರಿದು ಬಿದ್ದು ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ನಟಿ ರಿಷಿಕಾ ಸಿಂಗ್ ಅವರ ಮದುವೆ ಕೇರಳದ ಸಂದೀಪ್ ಎಂಬುವವರ ಜೊತೆ ನಿಶ್ಚಯವಾಗಿತ್ತು. ಡಿಸೆಂಬರ್ 21ರಂದು ನಿಶ್ಚಿತಾರ್ಥ ಕಾರ್ಯಕ್ರಮವೂ ಆಗಿತ್ತು. ಮದುವೆ ಏಪ್ರಿಲ್ 14ಕ್ಕೆ ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ರಿಷಿಕಾ ಸಿಂಗ್ ಮದುವೆ ಕ್ಯಾನ್ಸಲ್ ಆಗಿದೆ. (ಒನ್ಇಂಡಿಯಾ ಕನ್ನಡ)

English summary
Kannada actor Aditya breaks silence about her sister and actress Rishika Singh's marriage break up. He clarifies that her marrige cancels due to some personal reasons. But the actor rules out the reports of her sister Rishika is mentally sick.
Please Wait while comments are loading...