For Quick Alerts
  ALLOW NOTIFICATIONS  
  For Daily Alerts

  ಪುನೀತ್ ಜಾಹೀರಾತಿನ ವಿರುದ್ಧ ಆಕ್ರೋಶಗೊಂಡ ಕಾಳಿ ಸ್ವಾಮೀಜಿ

  By ಯಶಸ್ವಿನಿ
  |
  ತಮಿಳುನಾಡು ಪೋತಿಸ್ ಸಿಲ್ಕ್ಸ್ ವಿರುದ್ಧ ಋಷಿಕುಮಾರ ಸ್ವಾಮೀಜಿ ಗರಂ | Oneindia Kannada

  ಕಳೆದ ಕೆಲದಿನಗಳಿಂದ ಯಾವುದೇ ವಾಹಿನಿ ನೋಡಿದ್ರೂ ಒಂದೇ ಜಾಹೀರಾತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪೋತಿಸ್. ದಿನಕ್ಕೆ ನಲವತ್ತರಿಂದ ಐವತ್ತು ಬಾರಿ ಪ್ರಸಾರವಾಗುತ್ತಿದೆ.

  ''ನಾಡ ಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ನಾಲ್ಕೂ ದಿಕ್ಕಿಗೆ ಗಡಿ- ಗೋಪುರಗಳನ್ನು ಕಟ್ಟಿದರು. ಎಲ್ಲ ಕಡೆ ಕೆರೆ- ಕಟ್ಟೆಗಳನ್ನು ಕಟ್ಟಿಸಿದರು. ಆದರೆ ಒಂದೇ ಒಂದು ಕೊರತೆ ಎಂದರೆ ಅವರ ಪತ್ನಿಗೆ ಒಳ್ಳೆಯ ಸೀರೆ ಸಿಗುವ ಒಂದು ಮಳಿಗೆಯನ್ನು ಮಾತ್ರ ಕಟ್ಟಿಸಲಾಗಲಿಲ್ಲ. ಕೊನೆಗೆ ತಮಿಳು ನಾಡು ಮೂಲದ ಪೋತಿಸ್ ನವರು ಒಂದು ಮಳಿಗೆಯನ್ನು ಕಟ್ಟಿಸಿದರು. ಆಗ ಕೆಂಪೇಗೌಡರ ಪತ್ನಿ ಹಾಗೂ ಅವರ ಆಸ್ಥಾನದವರು ಸಂತೋಷಗೊಂಡರು'' ಇದು ಜಾಹೀರಾತಿನ ಸಾರಂಶ.

  ನಾಡಪ್ರಭು 'ಕೆಂಪೇಗೌಡ' ಆದ ಪುನೀತ್ ರಾಜ್ ಕುಮಾರ್ ನಾಡಪ್ರಭು 'ಕೆಂಪೇಗೌಡ' ಆದ ಪುನೀತ್ ರಾಜ್ ಕುಮಾರ್

  ಈ ಜಾಹೀರಾತಿನ ವಿರುದ್ಧ ಈಗ ಕಾಳಿ ಮಠದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡಿರುವ ಸ್ವಾಮೀಜಿ ಪೋತಿಸ್ ಸಂಸ್ಥೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಆ ಜಾಹೀರಾತಿನಲ್ಲಿ ಏನಿದೆ? ಕೋರ್ಟ್ ಮೆಟ್ಟಿಲೇರಿದ್ದೇಕೆ? ಈ ಪ್ರಶ್ನೆಗಳಿಗೆ ಖುದ್ದು ಋಷಿಕುಮಾರ ಶ್ರೀಗಳು ಉತ್ತರಿಸಿದ್ದಾರೆ. ಮುಂದೆ ಓದಿ.....

  ಕೆಂಪೇಗೌಡರ ಹೆಸರು ಬಳಸಬಾರದಿತ್ತು

  ಕೆಂಪೇಗೌಡರ ಹೆಸರು ಬಳಸಬಾರದಿತ್ತು

  ಆ ಜಾಹೀರಾತಿನಲ್ಲಿ ಕೇವಲ ಯಾರೋ ಒಬ್ಬ ರಾಜನ ಆಸ್ಥಾನವನ್ನು ತೋರಿಸಬಹುದಾಗಿತ್ತು. ಆದರೆ ಕೆಂಪೇಗೌಡರ ಹೆಸರು ಬಳಸಿಕೊಳ್ಳುವ ಮೂಲಕ ಬೆಂಗಳೂರಿನೊಂದಿಗೆ ನಮ್ಮದು ಐತಿಹಾಸಿಕ ಸಂಬಂಧ ಎನ್ನುವುದನ್ನು ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಪೋತಿಸ್ ನವರು ಮಾಡಿದ್ದಾರೆ ಎಂಬುದು ಸ್ವಾಮೀಜಿ ವಾದ.

  ಪುನೀತ್ ರಾಜಕುಮಾರ್ ಅಭಿನಯಿಸಬಾರದಿತ್ತು

  ಪುನೀತ್ ರಾಜಕುಮಾರ್ ಅಭಿನಯಿಸಬಾರದಿತ್ತು

  ಈ ಜಾಹೀರಾತಿಗೆ ಕನ್ನಡಿಗರ ವಿರೋಧ ಎದುರಾಗದಂತೆ ಪುನೀತ್ ರಾಜಕುಮಾರ್ ಅವರನ್ನು ಗುರಾಣಿಯಾಗಿ ಬಳಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಇಂತಹದ್ದೊಂದು ಸೂಕ್ಷ್ಮ ಅರ್ಥವಾಗದೆ ಹೋದದ್ದು ದುಃಖದ ಸಂಗತಿ ಎನ್ನುತ್ತಾರೆ ಶ್ರೀಗಳು.

  ಬೇರೆಯವರು ಮಾಡಬಹುದು.?

  ಬೇರೆಯವರು ಮಾಡಬಹುದು.?

  ಆ ಜಾಹೀರಾತಿನಲ್ಲಿ ನಾಡಪ್ರಭು ಕೆಂಪೇಗೌಡರಾಗಿ ಕಾಣಿಸಿಕೊಂಡಿರುವವರು ಪುನೀತ್ ರಾಜಕುಮಾರ್. ಅವರ ಬಗ್ಗೆ ಕನ್ನಡಿಗರಿಗೆ ಬಹಳ ಪ್ರೀತಿ ಇದೆ. ಪರಿಸ್ಥಿತಿ ಹೀಗೇ ಮುಂದುವರೆದು, ಮುಂದೊಂದು ದಿನ ನಮ್ಮ ಕಂಪೆನಿಯ ಪೈಪುಗಳಿಂದಲೇ ಕೆಂಪೇಗೌಡರು ಕೆರೆ ತುಂಬಿಸಿದರು, ನಮ್ಮ ಕಂಪೆನಿಯ ಸಿಮೆಂಟ್ ಬಳಸಿದ್ದರೆ ಕೆಂಪೇಗೌಡರು ಕಟ್ಟಿಸಿದ್ದ ಕಟ್ಟಡ ಇನ್ನಷ್ಟು ಬಾಳಿಕೆ ಬರುತ್ತಿತ್ತು ಎನ್ನುವಂತಹ ಜಾಹೀರಾತುಗಳು ಬಂದರೂ ಆಶ್ಚರ್ಯವಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

  ಪುನೀತ್ ಜೊತೆಯಾದ ಸೌತ್ ಸುಂದರಿ ತಮನ್ನಾ ಪುನೀತ್ ಜೊತೆಯಾದ ಸೌತ್ ಸುಂದರಿ ತಮನ್ನಾ

  ಜಾಹೀರಾತು ಹಿಂಪಡೆಯಬೇಕು

  ಜಾಹೀರಾತು ಹಿಂಪಡೆಯಬೇಕು

  ತಕ್ಷಣವೇ ಈ ದೂರನ್ನು ಪರಿಗಣಿಸಿ ಪೋತಿಸ್ ನವರು ಈ ಜಾಹೀರಾತನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಕೆಂಪೇಗೌಡರಿಗೆ ಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಅಪಚಾರ ಎಸಗುವ ಜಾಹೀರಾತುದಾರರು ಯೋಚಿಸಬೇಕು ಎನ್ನುವುದು ಋಷಿಕುಮಾರ ಸ್ವಾಮೀಜಿ ವಾದ.

  English summary
  Rishikumar swamiji filed case against Tamil Nadu Pothi's. He expressed anger against advertisement about pothys, Punith Rajkumar acted in that. Bengaluru founder Kempe Gowda insulted in the advertisement, this is the allegation by Rishikumara swamiji.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X