For Quick Alerts
  ALLOW NOTIFICATIONS  
  For Daily Alerts

  ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ ಬಾಲಿವುಡ್ ನಟ

  |

  ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೊರೊನಾ ಭೀತಿ ಹಿನ್ನೆಲೆ ಡಿಕೆಶಿ ಬರ್ತಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರು. ತಮ್ಮ ಅಭಿಮಾನಿ, ಕಾರ್ಯಕರ್ತರಲ್ಲೂ ಈ ಬಗ್ಗೆ ಮನವಿ ಮಾಡಿದ್ದರು.

  ನಿಮಗೆ ಆ ದೇವರು ಹೆಚ್ಚಿನ ಆರೋಗ್ಯ ಕೊಡಲಿ ಎಂದ ಬಾಲಿವುಡ್ ನಟ | Oneindia Kannada

  ''ನನ್ನೆಲ್ಲ ಹಿತೈಷಿಗಳು, ಅಭಿಮಾನಿಗಳಲ್ಲಿ ಮನವಿ, ಮೇ‌ 15 ರಂದು ನನ್ನ ಜನ್ಮದಿನ. ತಾವು ‌ಇರುವ ಸ್ಥಳದಿಂದಲೇ ನನಗೆ ಆಶೀರ್ವಾದ ಮಾಡಬೇಕು. ಯಾರೂ ನನ್ನನ್ನು ಭೇಟಿಯಾಗುವ ಪ್ರಯತ್ನ ಮಾಡಬೇಡಿ, ನನ್ನ ಹೆಸರಲ್ಲಿ ಯಾವುದೇ ಕಾರ್ಯಕ್ರಮ ಬೇಡ. ಇಡೀ ಪ್ರಪಂಚವೇ ಸಂಕಷ್ಟದಲ್ಲಿದೆ. ಇದು ಸಂಭ್ರಮಾಚರಣೆಯ ಸಮಯವಲ್ಲ'' ಎಂದು ವಿನಂತಿಸಿದ್ದರು.

  ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

  ಸಾಮಾಜಿಕ ಜಾಲತಾಣದ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

  ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ ಅವರು ಸಹ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರ ಜನುಮದಿನಕ್ಕೆ ವಿಶ್ ಮಾಡಿದ್ದಾರೆ. ಟ್ವಿಟ್ಟರ್ ಮೂಲಕ ಶುಭಕೋರಿರುವ ದೇಶ್‌ಮುಖ್ ''ಡಿಕೆ ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘ ಆಯಸ್ಸು ಕರುಣಿಸಲಿ' ಎಂದಿದ್ದಾರೆ.

  ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ ಕರ್ನಾಟಕದ ವಿಶೇಷ ನಂಟು ಹೊಂದಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳಿಗೂ ಪರಿಚಯಸ್ಥರು. ನಟ ಸುದೀಪ್ ಅವರ ಜೊತೆ ಹೆಚ್ಚು ಸ್ನೇಹ ಒಡನಾಟ ಹೊಂದಿದ್ದಾರೆ.

  English summary
  Bollywood Actor Riteish deshmukh Wishes To KPCC President DK Shivakumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X