For Quick Alerts
  ALLOW NOTIFICATIONS  
  For Daily Alerts

  ಪ್ರಕಾಶ್ ರಾಜ್ ಬಳಿಕ 'ಕೆಜಿಎಫ್' ಸೆಟ್‌ಗೆ ಮತ್ತೊಬ್ಬ ನಟನ ಎಂಟ್ರಿ!

  |

  ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಆರಂಭಿಸಿದ್ದು ಕಲಾವಿದರ ಬದಲಾವಣೆ ವಿಚಾರದಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಚಾಪ್ಟರ್ 1ರಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಅನಂತ್ ನಾಗ್ ಪಾತ್ರಕ್ಕೆ ಚಾಪ್ಟರ್ 2ರಲ್ಲಿ ಬ್ರೇಕ್ ಹಾಕಲಾಗಿದೆ ಎಂಬ ಚರ್ಚೆ ನಡೆದಿದೆ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಅನಂತ್ ನಾಗ್ ಮಾಡಿದ್ದ ಪಾತ್ರವನ್ನು ಮುಂದುವರಿಸಲು ಪ್ರಕಾಶ್ ರಾಜ್ ಅವರನ್ನು ಕರೆತರಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಪ್ರಶಾಂತ್ ನೀಲ್ ಸಹ ಪ್ರತಿಕ್ರಿಯಿಸಿದ್ದು, 'ಇದು ಅನಂತ್ ನಾಗ್ ಅವರನ್ನು ಬದಲಿಸುವ ಪಾತ್ರವಲ್ಲ, ಇದು ಮತ್ತೊಂದು ಪ್ರಮುಖ ಪಾತ್ರ' ಎಂದಿದ್ದಾರೆ. ಈ ನಡುವೆ ಕೆಜಿಎಫ್ ಸೆಟ್‌ನಲ್ಲಿ ಮತ್ತೊಬ್ಬ ಯುವ ನಟ ಪ್ರತ್ಯಕ್ಷವಾಗಿದ್ದಾರೆ. ಮುಂದೆ ಓದಿ...

  RJ ರೋಹಿತ್ ಎಂಟ್ರಿ!

  RJ ರೋಹಿತ್ ಎಂಟ್ರಿ!

  ಬೆಂಗಳೂರಿನಲ್ಲಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ನಡೆಯುತ್ತಿದ್ದು, ಮಿನರ್ವ್ ಮಿಲ್‌ನಲ್ಲಿ ಸೆಟ್ ಹಾಕಲಾಗಿದೆ. ಮಾಳವಿಕಾ ಮತ್ತು ಪ್ರಕಾಶ್ ರಾಜ್ ನಡುವಿನ ದೃಶ್ಯವನ್ನು ಸೆರೆಹಿಡಿಯಲಾಗುತ್ತಿದೆ. ಸರ್ಪ್ರೈಸ್ ಎಂಬಂತೆ ಆರ್ ಜೆ ರೋಹಿತ್ ಸಹ ಕಾಣಿಸಿಕೊಂಡಿದ್ದಾರೆ.

  ಕೆಜಿಎಫ್‌ 2: ಅನಂತ್‌ನಾಗ್ ಪಾತ್ರಕ್ಕೆ ಪ್ರಕಾಶ್ ರೈ! ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು?

  ಪಾತ್ರದ ಬಗ್ಗೆ ಮಾಹಿತಿ ಇಲ್ಲ

  ಪಾತ್ರದ ಬಗ್ಗೆ ಮಾಹಿತಿ ಇಲ್ಲ

  ಕೆಜಿಎಫ್ ಚಿತ್ರದಲ್ಲಿ ಆರ್ ಜೆ ರೋಹಿತ್ ನಟಿಸುತ್ತಿರುವ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಆದರೆ, ಶೂಟಿಂಗ್ ಸೆಟ್‌ನಿಂದ ಬಿಡುಗಡೆಯಾದ ಫೋಟೋವೊಂದರಲ್ಲಿ ರೋಹಿತ್ ಕಾಣಿಸಿಕೊಂಡಿದ್ದಾರೆ. ಇದು ಸಹಜವಾಗಿ ಕುತೂಹಲ ಮೂಡಿಸಿದೆ. ರೋಹಿತ್ ಅವರ ಪಾತ್ರದ ಬಗ್ಗೆಯೂ ಮಾಹಿತಿ ಇಲ್ಲ.

  ಚಾಪ್ಟರ್ 2ರಲ್ಲಿ ಹೊಸ ಮುಖಗಳು!

  ಚಾಪ್ಟರ್ 2ರಲ್ಲಿ ಹೊಸ ಮುಖಗಳು!

  ಕೆಜಿಎಫ್ ಚಾಪ್ಟರ್ 2ರಲ್ಲಿ ಹಲವು ಹೊಸ ಮುಖಗಳು ಕಾಣಿಸಿಕೊಳ್ಳುತ್ತಿದೆ. ಅಧೀರನ ಪಾತ್ರದಲ್ಲಿ ಸಂಜಯ್ ದತ್, ಪ್ರಧಾನಿ ರಿಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್, ಪ್ರಕಾಶ್ ರಾಜ್ ಹಾಗೂ ಆರ್ ಜೆ ರೋಹಿತ್ ಇರಲಿದ್ದಾರೆ. ಇನ್ನು ಕೆಲವು ಸರ್ಪ್ರೈಸ್ ಪಾತ್ರಗಳು ಬಂದರೂ ಅಚ್ಚರಿ ಇಲ್ಲ.

  ಕೆಜಿಎಫ್ ಚಾಪ್ಟರ್-2 ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರಾಜ್ ಎಂಟ್ರಿ! ಏನಿದು ಸರ್ಪ್ರೈಸ್?

  ಸಂಕ್ರಾಂತಿ ಹಬ್ಬಕ್ಕೆ ಕೆಜಿಎಫ್ ಬಿಡುಗಡೆ!

  ಸಂಕ್ರಾಂತಿ ಹಬ್ಬಕ್ಕೆ ಕೆಜಿಎಫ್ ಬಿಡುಗಡೆ!

  ಕೊರೊನಾ ವೈರಸ್ ಬ್ರೇಕ್, ಸಂಜಯ್ ದತ್ ಅವರ ಅನಾರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೇ ಈ ವರ್ಷ ಕೆಜಿಎಫ್ ತೆರೆಕಾಣುವುದು ಬಹುತೇಕ ಅನುಮಾನ. ಸದ್ಯದ ಮಾಹಿತಿ ಮುಂದಿನ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಕೆಜಿಎಫ್ ಚಾಪ್ಟರ್ 2 ಪ್ರೇಕ್ಷಕರ ಮುಂದೆ ಬರಲಿದೆ ಎನ್ನಲಾಗುತ್ತಿದೆ.

  English summary
  After Prakash Raj, RJ Rohit has enter to KGF Chapter 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X