For Quick Alerts
  ALLOW NOTIFICATIONS  
  For Daily Alerts

  ಯಶ್ ಜೊತೆ ಆಶಾ ಭಟ್: ದರ್ಶನ್ ಅಭಿಮಾನಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟಿ

  |

  'ರಾಬರ್ಟ್' ನಟಿ ಆಶಾ ಭಟ್ ನಟ ಯಶ್ ರನ್ನು ಮುಂಬೈನಲ್ಲಿ ಭೇಟಿ ಮಾಡಿದ್ದಾರೆ. ಅವರ ಜೊತೆಗೆ ಕ್ಲಿಕ್ಕಿಸಿದ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಯಶ್ ಜೊತೆಗೆ ದರ್ಶನ್ ಚಿತ್ರದ ನಾಯಕಿ ಇರುವುದನ್ನು ನೋಡಿ ಡಿ ಬಾಸ್ ಫ್ಯಾನ್ಸ್ ಕಾಮೆಂಟ್ಸ್ ಮಾಡಿದ್ದಾರೆ. ಯಶ್ ಭೇಟಿ ಮಾಡುವುದು ಗೌರವ ಎಂದು ಆಶಾ ಬರೆದುಕೊಂಡಿದ್ದರು. ಇದಕ್ಕೆ ದರ್ಶನ್ ಕಾಮೆಂಟ್ಸ್ ಮಾಡಿದ್ದಾರೆ.

  ರಾಕಿ ಭಾಯ್ ಭೇಟಿ ಮಾಡಿದ 'ರಾಬರ್ಟ್' ಕ್ವೀನ್ ಆಶಾ ಭಟ್ರಾಕಿ ಭಾಯ್ ಭೇಟಿ ಮಾಡಿದ 'ರಾಬರ್ಟ್' ಕ್ವೀನ್ ಆಶಾ ಭಟ್

  ''ನೀವು ದರ್ಶನ್ ಜೊತೆಗೆ ಇರುವ ಫೋಟೋವನ್ನು ಹಂಚಿಕೊಳ್ಳಿ'' ಎಂದು ದರ್ಶನ್ ಬಗ್ಗೆ ಸಾಕಷ್ಟು ಕಾಮೆಂಟ್ಸ್ ಬಂದಿವೆ. ಇದಕ್ಕೆ ಆಶಾ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ''ಡಿ ಬಾಸ್ ಫ್ಯಾನ್ಸ್... ಅತ್ಯುತ್ತಮವಾಗಿರುವುದನ್ನು ಕೊನೆಯದಾಗಿ ಉಳಿಸಿಕೊಂಡಿದ್ದೇನೆ. ಕಾಯಿರಿ. ಮತ್ತೊಂದು ಕಡೆ ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದ ಎಲ್ಲ ಕನ್ನಡಿಗರ ಬಗ್ಗೆ ಹೆಮ್ಮೆ ಇರಲಿ'' ಎಂದಿದ್ದಾರೆ.

  ದರ್ಶನ್ ಅಭಿಮಾನಿಗಳ ತಮಾಷೆಯ ಪ್ರಶ್ನೆಗೆ ಆಶಾ ಭಟ್ ತಮಾಷೆಯಾಗಿ ಉತ್ತರ ನೀಡಿದ್ದಾರೆ. ಚಿತ್ರೀಕರಣದಲ್ಲಿ ಭಾಗಿಯಾಗಿ, ದರ್ಶನ್ ಜೊತೆಗಿನ ಫೋಟೋವನ್ನು ಆದಷ್ಟು ಬೇಗ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

  Interview: ಮಾತೃ ಭಾಷೆಯಲ್ಲಿ ದರ್ಶನ್ ಜೊತೆ ನಟಿಸುವುದು ಬಂಪರ್ ಖುಷಿInterview: ಮಾತೃ ಭಾಷೆಯಲ್ಲಿ ದರ್ಶನ್ ಜೊತೆ ನಟಿಸುವುದು ಬಂಪರ್ ಖುಷಿ

  ಆಶಾ ಭಟ್ ಭದ್ರಾವತಿಯ ಹುಡುಗಿ ಆಗಿದ್ದು, 2014 ರಲ್ಲಿ ಮಿಸ್ ಸುಪ್ರ ಇಂಟರ್ ನ್ಯಾಶನಲ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಆ ಬಳಿಕ 'ಜಂಗಲ್' ಹಿಂದಿ ಸಿನಿಮಾದ ಮೂಲಕ ಲಾಂಚ್ ಆದರು. ಸದ್ಯ, 'ರಾಬರ್ಟ್' ಚಿತ್ರದ ಮೂಲಕ ಕನ್ನಡದ ಹುಡುಗಿ ಆಶಾ ಭಟ್ ಕನ್ನಡ ಸಿನಿಮಾ ಮಾಡುತ್ತಿದ್ದಾರೆ.

  English summary
  'Roberrt' kannada movie Asha Bhat reaction for Darshan fans comments. She met actor Yash in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X