For Quick Alerts
  ALLOW NOTIFICATIONS  
  For Daily Alerts

  ತಮಿಳು ಪತ್ರಿಕೆಯಲ್ಲಿ ರಾಬರ್ಟ್ ಪೋಸ್ಟರ್ ವರದಿ

  |
  Robert Kannada Movie: ದರ್ಶನ್ ನಟನೆಯ ರಾಬರ್ಟ್ ಹಿಂದೆ ಬಿದ್ದ ತಮಿಳರು | FILMIBEAT KANNADA

  ಕನ್ನಡ ಚಿತ್ರರಂಗ ಬೆಳೆದಿದೆ. ಕನ್ನಡ ಸಿನಿಮಾಗಳ ಮಾರುಕಟ್ಟೆ ವಿಸ್ತರಿಸಿದೆ. ಕನ್ನಡ ಸಿನಿಮಾವೊಂದು ಬರ್ತಿದೆ ಅಂದ್ರೆ ಈಗ ದೇಶ ಮಾತ್ರವಲ್ಲ ವಿಶ್ವದಲ್ಲಿರುವ ಸಿನಿ ಅಭಿಮಾನಿಗಳು ಕಾಯುವಂತಾಗಿದೆ. ಅದರಲ್ಲೂ ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ಕನ್ನಡ ಸಿನಿಮಾಗಳ ಮೇಲೆ ಪರಭಾಷಿಗರ ಕಣ್ಣು ಬಿದ್ದಿದೆ.

  ಕನ್ನಡ ಜೊತೆಗೆ ತೆಲುಗು, ತಮಿಳು ಅಥವಾ ಹಿಂದಿ ಸೇರಿದಂತೆ ಇತರೆ ಭಾಷೆಯಲ್ಲಿ ಬಿಡುಗಡೆಯಾದರೇ ಓಕೆ. ಅಲ್ಲಿನ ಸುದ್ದಿ ಪತ್ರಿಕೆಗಳು ವರದಿ ಮಾಡುತ್ತೆ. ಆದರೆ ಕನ್ನಡದಲ್ಲೇ ತಯಾರಾಗಿ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗುವಂತಹ ಸಿನಿಮಾ ಬಗ್ಗೆಯೂ ಪರಭಾಷಿಗರು ಆಸಕ್ತಿ ಹೊಂದಿದ್ದಾರೆ ಅಂದ್ರೆ ನಿಜಕ್ಕೂ ವಿಶೇಷ.

  'ರಾಬರ್ಟ್'ಗೆ ಅರ್ಜುನ್ ಜನ್ಯ ಫಿಕ್ಸ್ : ದರ್ಶನ್ ಜೊತೆ ಹ್ಯಾಟ್ರಿಕ್ ಸಿನಿಮಾ

  ಇತ್ತೀಚಿಗಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಥೀಮ್ ಪೋಸ್ಟರ್ ಬಂದಿತ್ತು. ಇಡೀ ಸ್ಯಾಂಡಲ್ ವುಡ್ ಈ ಪೋಸ್ಟರ್ ನೋಡಿ ಮೆಚ್ಚಿಕೊಂಡಿತ್ತು. ಇದೀಗ, ರಾಬರ್ಟ್ ಪೋಸ್ಟರ್ ತಮಿಳು ಅಭಿಮಾನಿಗಳ ಗಮನಕ್ಕೂ ತಲುಪಿದೆ.

  ಹೌದು, ತಮಿಳು ಪತ್ರಿಕೆಯೊಂದರಲ್ಲಿ ರಾಬರ್ಟ್ ಸಿನಿಮಾದ ಪೋಸ್ಟರ್ ಬಗ್ಗೆ ಸುದ್ದಿ ಪ್ರಕಟವಾಗಿದೆ. ಇದು ಬಹುಭಾಷೆಯ ಚಿತ್ರವಾಗಿದ್ದರೆ ವಿಶೇಷವೇನು ಇರುತ್ತಿರಲಿಲ್ಲ. ಆದರೆ ಕನ್ನಡ ಭಾಷೆಯಲ್ಲಿ ಮಾತ್ರ ಬರುತ್ತಿದ್ದು, ಹಾಗಾಗಿದ್ದರೂ ಪರಭಾಷಿಗರ ಕುತೂಹಲಕ್ಕೆ ಕಾರಣವಾಗಿದೆ ಎನ್ನುವುದು ಖುಷಿಯ ಸಂಗತಿ.

  'ರಾಬರ್ಟ್' ಬೈಕ್ ಹಿಂದಿನ ರೂವಾರಿ ಯಾರು, ಎಲ್ಲಿ ತಯಾರಾಯ್ತು

  ಅಂದ್ಹಾಗೆ, ಕೇವಲ ರಾಬರ್ಟ್ ಚಿತ್ರದ ಕುರಿತು ಮಾತ್ರ ಈ ರೀತಿ ಪರಭಾಷೆಯ ಮಾಧ್ಯಮಗಳು ಸುದ್ದಿ ಮಾಡಿದ್ದಾರೆ ಅಂತಲ್ಲ. ಇದಕ್ಕೂ ಮುಂಚೆ ಕೂಡ ಕೆಲವು ಕನ್ನಡ ಸಿನಿಮಾಗಳ ಬಗ್ಗೆ ಸುದ್ದಿ ಮಾಡಿದ್ದಾರೆ.

  ''ರಾಬರ್ಟ್ ಪೋಸ್ಟರ್ ನಕಲಿ ಅಲ್ಲ'' - ತರುಣ್ ಸುಧೀರ್ ಸ್ಪಷ್ಟನೆ

  ಇನ್ನುಳಿದಂತೆ ತರುಣ್ ಸುಧೀರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈಗಾಗಲೇ ಶೂಟಿಂಗ್ ಮಾಡುತ್ತಿರುವ ರಾಬರ್ಟ್ ಮುಂದಿನ ವರ್ಷ ಬೇಸಿಗೆಯಲ್ಲಿ ಸಿನಿಮಾ ತೆರೆಕಾಣಲಿದೆ.

  English summary
  One of the tamil news paper has write a article about challenging star darshan starrer robert movie theme poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X