»   » ಎರಡನೇ ವರ್ಷವೂ ಸ್ಯಾಂಡಲ್ ವುಡ್ ಸುಲ್ತಾನ್ ಯಶ್

ಎರಡನೇ ವರ್ಷವೂ ಸ್ಯಾಂಡಲ್ ವುಡ್ ಸುಲ್ತಾನ್ ಯಶ್

Posted By: ಜೀವನರಸಿಕ
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಂದ್ರೇ ಯಶಸ್ಸು ಅಂತಿದೆ ಗಾಂಧಿನಗರ. ಈಗ ಯಶ್ ಡೇಟ್ ಗಾಗಿ ಕಾದು ನಿಂತಿರೋರ ಸಂಖ್ಯೆ ದೊಡ್ಡದಿದೆ. ಸದ್ಯ ದರ್ಶನ್, ಸುದೀಪ್, ಪುನೀತ್ ಹಿಂದೆ ಬಿದ್ದಿದ್ದ ಹತ್ತಕ್ಕೂ ಹೆಚ್ಚು ನಿರ್ಮಾಪಕರು ಯಶ್ ಡೇಟ್ ಗಾಗಿ ಕಾದಿದ್ದಾರೆ.

2013ರಲ್ಲಿ 'ಗೂಗ್ಲಿ' ಮತ್ತು 'ರಾಜಾಹುಲಿ' ಮೂಲಕ ಎರಡು 100 ಡೇಸ್ ಸಿನಿಮಾಗಳನ್ನ ಕೊಟ್ಟಿದ್ದ ಯಶ್ 2013ರ ಸ್ಯಾಂಡಲ್ ವುಡ್ ನ ಸಕ್ಸಸ್ ಕಾ ಸುಲ್ತಾನ್ ಆಗಿದ್ರೆ ಈ ವರ್ಷವೂ ಯಶ್ ಬತ್ತಳಿಕೆಯಿಂದ ಮತ್ತೆರೆಡು ಹಿಟ್ ಸಿನಿಮಾಗಳು ಹೊರ ಬಂದಿವೆ. ಇದ್ರಿಂದಾಗಿ ಸೂಪರ್ ಗಳಿಗೆ ಐದಾರು ಕೋಟಿ ಕೊಡೋದಕ್ಕಿಂತ ಯಶ್ ಸೂಪರ್ ಅಂತಿದ್ದಾರೆ ನಿರ್ಮಾಪಕರು.

ರೀಮೇಕ್ ಸಿನಿಮಾಗಳ ಬೆನ್ನು ಹತ್ತಿರೋ ಸೂಪರ್ ಸ್ಟಾರ್ ಗಳು ಸ್ವಮೇಕ್ ಮಾಡಿದ್ರೂ ಗಿಮಿಕ್ ಮಾಡಿದ್ರೂ ಗೆಲ್ಲದ ಬಿಗ್ ಸ್ಟಾರ್ ಗಳಿಗಿಂತ ರಾಕಿಂಗ್ ಸ್ಟಾರ್ ರಂಗು ರಂಗಾಗಿ ಮಿಂಚ್ತಿದ್ದಾರೆ. ವೆರೈಟಿ ಪಾತ್ರಗಳಿಗೆ ಹೊಂದಿಕೊಳ್ಳೋ ಯಶ್ ತಾಕತ್ತಿಗೆ ಸಿನಿಪ್ರೇಮಿಗಳು ಸೈ ಅಂದಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Rocking Star Yash becomes new box office king

ಕಳ್ಳರ ಸಂತೆಯ ನಿರುದ್ಯೋಗಿಯಾಗಿ, ಕಿರಾತಕ ಚಿತ್ರದ ಹಳ್ಳಿ ಹೈದನಾಗಿ, ಗೂಗ್ಲಿಯ ಸ್ಟೈಲಿಷ್ ಲವರ್ ಬಾಯ್ ಆಗಿ ರಾಜಾಹುಲಿಯ ರಗಡ್ ಮಂಡ್ಯ ಹುಲಿಯಾಗಿ, ಗಜಕೇಸರಿಯ ಗಜ ಮತ್ತು ಕೇಸರಿಯಂತಹ ಎರಡೂ ವಿಭಿನ್ನ ಶೇಡ್ ಗಳಲ್ಲಿ ಯಶ್ ಯಶಸ್ವಿ ನಟ.

ಈಗ ಬಂದಿರೋ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿಯಲ್ಲೂ ಯಶ್ ಟಿಪಿಕಲ್ ನಾಗರಹಾವಿನ ರಾಮಾಚಾರಿಯಂತೆ ಕಂಗೊಳಿಸಿದ್ದಾರೆ. ಯಶ್ ಚಿತ್ರ ಕ್ರಿಸ್ಮಸ್ ದಿನದಿಂದ ಶುರುವಾಗಿ ಭಾನುವಾರದವರೆಗೆ ಕೇವಲ ನಾಲ್ಕು ದಿನದಲ್ಲಿ ಮಾಡಿರೋ ಗಳಿಕೆ ರು.12 ಕೋಟಿ ಮುಟ್ಟಿದೆ ಅಂತಿದೆ ವಿತರಕರ ಮೂಲಗಳಿಂದ ಬಂದ ಮಾಹಿತಿ.

ಈ ಲೆಕ್ಕಾಚಾರ ನೋಡಿದ್ರೆ ಯಶ್ ಸ್ಯಾಂಡಲ್ವುಡ್ ಹೊಸ ಬಾಕ್ಸಾಫೀಸ್ ಸುಲ್ತಾನ್ ಅಂತಿದೆ ಗಾಂಧಿನಗರ. ಬಾಕ್ಸಾಫೀಸ್ ಮಾಹಿತಿಯನ್ನ ಹೊರಗಿಟ್ಟು ಹೇಳೋದಾದ್ರೆ ಯಶ್ ಒಬ್ಬ ಅದ್ಭುತ ನಟ ಅಷ್ಟು ಸಾಕು ಅಣ್ತಮ್ಮ ಅಂತಿದ್ದಾರೆ ಕನ್ನಡ ಚಿತ್ರರಸಿಕರು.

English summary
Rocking Star Yash becomes new box office king in the year 2015 as well. The actor continuously makes a success in the second year as well. His latest movie 'Mr & Mrs Ramachari' succeed in box office. Many producers are now waiting for his call sheet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada