For Quick Alerts
  ALLOW NOTIFICATIONS  
  For Daily Alerts

  Yash Birthday: ರಾಕಿಂಗ್ ಸ್ಟಾರ್ ದುಬೈಗೆ ಹೋದ್ರೆ ಏನು? ನಮ್ಮ ಸೆಲೆಬ್ರೇಷನ್ ಬೇಡ ಅನ್ನೋರು ಯಾರು?

  |

  ರಾಕಿಂಗ್ ಸ್ಟಾರ್‌ ಯಶ್ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಯಶ್ ಫ್ಯಾಮಿಲಿ ಸಮೇತ ದುಬೈನಲ್ಲಿ ಈ ಬಾರಿ ಹುಟ್ಟುಹಬ್ಬ ಆಚರಿಸಿದ್ದಾರೆ. ಆದರೆ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ನೆಚ್ಚಿನ ನಟನ ವಿಶೇಷ ದಿನವನ್ನು ಸಂಭ್ರಮಿಸಿದ್ದಾರೆ.

  ಕಾರಣಾಂತರಗಳಿಂದ ಯಶ್ ಕಳೆದೆರಡು ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಈ ಬಾರಿ ಅದಕ್ಕೆಲ್ಲಾ ಅವಕಾಶ ಸಿಗುತ್ತೆ ಎಂದು ಕಾದಿದ್ದವರಿಗೆ ನಿರಾಸೆ ಕಾದಿತ್ತು. ಯಶ್ 2 ದಿನ ಮೊದಲೇ ಬಹಿರಂಗ ಪತ್ರ ಬರೆದು ಕ್ಷಮೆ ಕೇಳಿದ್ದರು. "ನಿಮಗಾಗಿ ವಿಭಿನ್ನವಾಗಿರೋದೆನನ್ನೂ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ . ಕ್ಷಮಿಸಿ..ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ" ಎಂದಿದ್ದರು.

  ನೆಚ್ಚಿನ ನಟ ಹುಟ್ಟುಹಬ್ಬದ ದಿನ ವಿದೇಶಕ್ಕೆ ಹೋದರೂ ಅಭಿಮಾನಿಗಳ ಸಂಭ್ರಮಾಚರಣೆಗೆ ಬರ ಇರಲಿಲ್ಲ. ಅಭಿಮಾನಿಗಳು ಈ ವಿಶೇಷ ದಿನವನ್ನು ತಮ್ಮದೇ ರೀತಿಯಲ್ಲಿ ಆಚರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ಥಿಯೇಟರ್‌ಗಳಲ್ಲಿ ರಾಮಾಚಾರಿ ಫ್ಯಾನ್ಸ್ ಹವಾ

  ಥಿಯೇಟರ್‌ಗಳಲ್ಲಿ ರಾಮಾಚಾರಿ ಫ್ಯಾನ್ಸ್ ಹವಾ

  ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಸೂಪರ್ ಹಿಟ್ 'ಮಿ & ಮಿ ರಾಮಾಚಾರಿ' ಸಿನಿಮಾ ರೀ ರಿಲೀಸ್ ಆಗಿತ್ತು. ನಗರದ ಸಂತೋಷ್ ಥಿಯೇಟರ್‌ ಸೇರಿದಂತೆ ಹಲವೆಡೆ ಸಿನಿಮಾ ಮತೊಮ್ಮೆ ಅಭಿಮಾನಿಗಳನ್ನು ರಂಜಿಸಿದೆ. ಅಭಿಮಾನಿಗಳು ಥಿಯೇಟರ್‌ ಸ್ಕ್ರೀನ್‌ ಮುಂದೆ ಹೋಗಿ ಕುಣಿದು ಕುಪ್ಪಳಿಸಿದ್ದಾರೆ. ಥಿಯೇಟರ್‌ಗಳಲ್ಲಿ ಸಂಭ್ರಮಾಚರಣೆ ಜೋರಾಗಿತ್ತು. ಮತ್ತೊಮ್ಮೆ ರಾಮಾಚಾರಿಯ ಖದರ್ ನೋಡಿ ಮೆಚ್ಚಿಕೊಂಡಾಡಿದ್ದಾರೆ. ಇನ್ನು KGF - 2 ಸಿನಿಮಾ ಕೂಡ ಕೆಲವೆಡೆ ಮತ್ತೆ ಬೆಳ್ಳಿ ಪರದೆಗೆ ಅಪ್ಪಳಿಸಿತ್ತು. ರಾಕಿಭಾಯ್ ಖದರ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

  ಆಂಧ್ರದಲ್ಲಿ ಬೈಕ್ ರ್ಯಾಲಿ

  ಆಂಧ್ರದಲ್ಲಿ ಬೈಕ್ ರ್ಯಾಲಿ


  KGF ರಾಕಿಭಾಯ್ ಆಗಿ ಯಶ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ರಾಕಿಂಗ್‌ ಸ್ಟಾರ್‌ಗೆ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಆಂಧ್ರದಲ್ಲಿ ಯಶ್ ಹುಟ್ಟುಹಬ್ಬ ವಿಶೇಷವಾಗಿ ಅಭಿಮಾನಿಗಳು ಬೈಕ್ ರ್ಯಾಲಿ ನಡೆಸಿ, ಪಟಾಕಿ ಸಿಡಿಸಿ ಕೈ ಹಾರ ಹಾಕಿ ಸಂಭ್ರಮಿಸಿದ್ದಾರೆ. KGF - 2 ಸ್ಪೆಷಲ್ ಶೋ ನೋಡಿ ಎಂಜಾಯ್ ಮಾಡಿದ್ದಾರೆ. ಒಬ್ಬ ತೆಲುಗು ನಟನ ಹುಟ್ಟುಹಬ್ಬವನ್ನು ಆಚರಿಸುವಂತೆ ತೆಲುಗು ಅಭಿಮಾನಿಗಳು ಯಶ್ ಹುಟ್ಟುಹಬ್ಬ ಆಚರಿಸಿದ್ದಾರೆ.

  ಕೇಕ್ ಕತ್ತರಿಸಿ ಸಂಭ್ರಮಿಸಿದ ಫ್ಯಾನ್ಸ್

  ಕೇಕ್ ಕತ್ತರಿಸಿ ಸಂಭ್ರಮಿಸಿದ ಫ್ಯಾನ್ಸ್

  ಯಶ್‌19 ಅಪ್‌ಡೇಟ್ ಸಿಕ್ಕಿಲ್ಲ ನಿಜ. ಹಾಗಂತ ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ದಿನ ಭೇಟಿ ಮಾಡದೇ ಇರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ನೆಚ್ಚಿನ ನಟ ಕೈಗೆ ಸಿಗದಿದ್ದರೂ ಅಭಿಮಾನಿಗಳು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ತೆಲುಗು ರಾಜ್ಯಗಳ ಅಭಿಮಾನಿಗಳು ಕೂಡ ಕೇಕ್ ಕತ್ತರಿಸಿ ಖುಷಿಪಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿದೆ. ಇನ್ನು ದೇವಸ್ಥಾನಗಳಲ್ಲಿ ನೆಚ್ಚಿನ ನಟನ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಇನ್ನು ಮೈಸೂರಿನ ಅರಮನೆ ಮುಂದೆ ರಂಗೋಲಿಯಲ್ಲಿ ಯಶ್ ಚಿತ್ರ ಬಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಯಶ್ ದೊಡ್ಡ ಅಪ್‌ಡೇಟ್‌ನ ಹೊತ್ತು ಬರ್ತಾರೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

  ಕೆವಿಎನ್ ಬ್ಯಾನರ್‌ನಲ್ಲಿ ಯಶ್‌19

  ಕೆವಿಎನ್ ಬ್ಯಾನರ್‌ನಲ್ಲಿ ಯಶ್‌19

  ಯಶ್ ಮುಂದಿನ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತದೆ ಎನ್ನಲಾಗ್ತಿದೆ. ನಿರ್ಮಾಪಕ ವೆಂಕಟ್ ಕೋನಂಕಿ ನಾರಾಯಣ ನಟ ಯಶ್‌ನ ಭೇಟಿ ಮಾಡಿರುವ ಫೋಟೊಗಳು ಸಖತ್ ವೈರಲ್ ಆಗುತ್ತಿದೆ. 400 ಕೋಟಿ ವೆಚ್ಚದಲ್ಲಿ ಅದ್ಧೂರಿ ಸಿನಿಮಾ ನಿರ್ಮಾಣ ಆಗುತ್ತದೆ ಎನ್ನಲಾಗುತ್ತಿದೆ. ತಮಿಳು ನಿರ್ದೇಶಕರು ಆಕ್ಷನ್ ಕಟ್ ಹೇಳುವ ಸಾಧ್ಯತೆಯಿದೆ. ಎಲ್ಲಾ ಅಂತೆ ಕಂತೆ ಸುದ್ದಿ ಆಗಿದ್ದು ಯಶ್ ಅಫೀಷಿಯಲ್ ಆಗಿ ಹೇಳುವವರೆಗೂ ಕಾದು ನೋಡಬೇಕು.

  English summary
  Rocking Star Yash Birthday Celebrations in Karnataka, AP, Telangana. Fans Screening special shows of his films in multiple cities and put out several cutouts for his birthday. know more.
  Sunday, January 8, 2023, 19:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X