»   » ಯಶ್-ರಾಧಿಕಾ ಕುಟುಂಬಕ್ಕೆ ಹೊಸ ಅತಿಥಿ ಆಗಮನ

ಯಶ್-ರಾಧಿಕಾ ಕುಟುಂಬಕ್ಕೆ ಹೊಸ ಅತಿಥಿ ಆಗಮನ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಮದುವೆ ಆಗಿ ಒಂದು ವರ್ಷ ಕಳೆದಿದೆ. ಡಿಸೆಂಬರ್ 9ಕ್ಕೆ ರಾಕಿಂಗ್ ಜೋಡಿಯ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ.

ಈ ಖುಷಿಯಲ್ಲಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಸಿಹಿ ಸುದ್ದಿಯನ್ನ ನೀಡಿದ್ದಾರೆ. ಹೌದು, ಮೊದಲನೇ ವರ್ಷದ ಸಂಭ್ರಮದಲ್ಲಿರುವ ಯಶ್ ಕುಟುಂಬಕ್ಕೆ ಹೊಸ ಅತಿಥಿಯನ್ನ ಕರೆತರುವ ಮೂಲಕ ಈ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಿದ್ದಾರೆ.

ಸಿಹಿ ಸುದ್ದಿ ಎಂದಾಕ್ಷಣ ಬೇರೆ ಏನೋ ಊಹಿಸಿಕೊಳ್ಳಬೇಡಿ. ನೀವು ನಿರೀಕ್ಷೆ ಮಾಡುತ್ತಿರುವ ಹಾಗೆ ಏನು ಇಲ್ಲ. ಆದ್ರೀದು, ಹೊಸ ಅತಿಥಿಯ ಕಥೆ. ಏನೆಂದು ತಿಳಿದುಕೊಳ್ಳಲು ಮುಂದೆ ಓದಿ.....

ಇವರೇ ಆ ಹೊಸ ಅತಿಥಿ

ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಕುಟುಂಬಕ್ಕೆ ಹೊಸ ಕಾರ್ ಅತಿಥಿಯಾಗಿ ಆಗಮಿಸಿದೆ.

ಮದುವೆಯ ಮೊದಲ ವಾರ್ಷಿಕೋತ್ಸವಕ್ಕೆ ರಾಧಿಕಾ ಮಾಡಿರೋ ಪ್ಲಾನ್ ಅದ್ಭುತ.!

ಯಾವ ಕಾರ್ ಇದು

ಬೆಂಗಳೂರಿನಲ್ಲಿ ಕಾರ್ ಖರೀದಿಸಿರುವ ಯಶ್, ಕೆಂಪು ಬಣ್ಣದ ''Mercedes Benz'' ಕೊಂಡುಕೊಂಡಿದ್ದಾರೆ. ಈ ವೇಳೆ ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಸೇರಿದಂತೆ ಯಶ್ ಸ್ನೇಹಿತರು ಭಾಗಿಯಾಗಿದ್ದಾರೆ.

ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ ಯಶ್-ರಾಧಿಕಾ ದಂಪತಿ

ವಾರ್ಷಿಕೋತ್ಸಕ್ಕೆ ಉಡುಗೊರೆ.?

ಡಿಸೆಂಬರ್ 9ಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮೊದಲನೇ ವಾರ್ಷಿಕೋತ್ಸವ ಸಂಭ್ರಮ. ಹೀಗಾಗಿ, ರಾಧಿಕಾ ಪಂಡಿತ್ ಅವರಿಗೆ, ಯಶ್ ಗಿಫ್ಟ್ ನೀಡಿರಬಹುದಾ..? ಎಂಬ ಕುತೂಹಲ ಕಾಡುತ್ತಿದೆ.

ರೈತರ ಪಾಲಿಗೆ ಆಧುನಿಕ 'ಭಗೀರಥ'ನಾದ ರಾಕಿಂಗ್ ಸ್ಟಾರ್ ಯಶ್

ಯಶ್ ಕಾರ್ ಕ್ರೇಜ್

ಈಗಾಗಲೇ ಯಶ್ ಅವರ ಬಳಿ 'ಆಡಿ' ಕಾರು ಸೇರಿದಂತೆ ಇತರೆ ಕಾರುಗಳಿವೆ. ಈಗ ಹೊಸದೊಂದು ಕಾರ್ ಖರೀದಿಸಿದ್ದಾರೆ. ಇದರಿಂದ ಯಶ್ ಅವರ ಕಾರ್ ಕಲೆಕ್ಷನ್ ಗೆ ಮತ್ತೊಂದು ಕಾರ್ ಸೇರಿಕೊಂಡಿದೆ.

ಅಮೇರಿಕಾದ ಯಶ್ ಅಭಿಮಾನಿ, ರಾಕಿಂಗ್ ಸ್ಟಾರ್ ಬಗ್ಗೆ ಬಿಚ್ಚಿಟ್ಟ ಇಂಟ್ರೆಸ್ಟಿಂಗ್ ವಿಚಾರ

English summary
Kannada Actor, Rocking star Yash bought a new mercedes benz car.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada