For Quick Alerts
  ALLOW NOTIFICATIONS  
  For Daily Alerts

  ಮಾಸಾಂತ್ಯಕ್ಕೆ ತೆರೆಗೆ ರಾಕಿಂಗ್ ಸ್ಟಾರ್ ಯಶ್ 'ಗೂಗ್ಲಿ'

  By Rajendra
  |

  ರಾಕಿಂಗ್ ಸ್ಟಾರ್ ಯಶ್ ನಾಯಕ ನಟನಾಗಿರುವ 'ಗೂಗ್ಲಿ' ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುವ ಸಮಯ ಹತ್ತಿರವಾಗಿದೆ. ಇದೇ ಜುಲೈ ಅಂತ್ಯಕ್ಕೆ ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ. ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಸ್ವಲ್ಪ ಹೆಚ್ಚಾಗಿಯೇ ಇವೆ.

  'ಗೋವಿಂದಾಯ ನಮಃ' ದಂತಹ ಕಾಮಿಡಿ ಹಿಟ್ ಚಿತ್ರ ಕೊಟ್ಟ ಪವನ್ ಈ ಬಾರಿ ಆಕ್ಷನ್, ರೊಮ್ಯಾನ್ಸ್ ಮೂಲಕ 'ಗೂಗ್ಲಿ' ಎಸೆದಿದ್ದಾರೆ. ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ ಚಿತ್ರವಿದು.

  ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಮೂಡಬಿದಿರೆ, ಮಂಗಳೂರು ಮುಂತಾದಕಡೆ ಚಿತ್ರೀಕರಣ ನಡೆದಿದೆ. ಯಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಕೃತಿಖರಬಂದ. ಅನಂತನಾಗ್, ಸುಧಾಬೆಳವಾಡಿ, ಸಾಧುಕೋಕಿಲ, ನೀನಾಸಂ ಅಶ್ವತ್ ಮುಂತಾದವರು ಗೂಗ್ಲಿ' ಚಿತ್ರದ ತಾರಾಬಳಗದಲ್ಲಿದ್ದಾರೆ.

  ವೈದಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೋಶ್ವ ಶ್ರೀಧರ್ ಸಂಗೀತ ನೀಡಿದ್ದಾರೆ. ಸನತ್ ಸುರೇಶ್ ಸಂಕಲನ, ಪಳನಿರಾಜ್, ರವಿವರ್ಮ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಪವನ್ ಒಡೆಯರ್, ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಕವಿರಾಜ್ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Rocking Star Yash and Kriti Kharbanda lead Kannada action-romance film Googly slated for release in July. The film directed by Pawan Wadeyar and produced by Jayanna combines. Ananth Nag, Sadhu Kokila,among others play the supporting roles. Joshua Sridhar is the score and soundtrack composer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X