»   » ಸೂಪರ್ ಹಿಟ್ ಚಿತ್ರವಾಗಿ ರಾಕಿಂಗ್ ಸ್ಟಾರ್ ಯಶ್ ಗೂಗ್ಲಿ

ಸೂಪರ್ ಹಿಟ್ ಚಿತ್ರವಾಗಿ ರಾಕಿಂಗ್ ಸ್ಟಾರ್ ಯಶ್ ಗೂಗ್ಲಿ

Posted By:
Subscribe to Filmibeat Kannada

ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿರುವ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಗೂಗ್ಲಿ' ಸೆಂಚುರಿ ನಿರೀಕ್ಷೆಯಲ್ಲಿದೆ. ಈಗಾಗಲೆ 'ಗೂಗ್ಲಿ' ಚಿತ್ರ ತೊಂಬತ್ತು ದಿನಗಳನ್ನು ಪೂರೈಸಿದ್ದು ಶತಕ ಸಂಭ್ರಮಕ್ಕೆ ಇನ್ನು ಕೇವಲ ಹತ್ತೇ ದಿನಗಳು ಮಾತ್ರ ಬಾಕಿ ಉಳಿದಿವೆ.

ಸುಮಾರು ರು.4 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಈ ಚಿತ್ರ ಬಾಕ್ಸ್ ಆಫೀಸಲ್ಲಿ ರು.14 ಕೋಟಿ ಕಲೆಕ್ಷನ್ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಬಾಕ್ಸ್ ಆಫೀಸ್ ನ ಹೊಸ ನಾಯಕನಾಗಿ ಹೊರಹೊಮ್ಮಿದ್ದಾರೆ. ಗೂಗ್ಲಿ ಚಿತ್ರ "ಸೂಪರ್ ಹಿಟ್" ಎಂದು ಘೋಷಿಸಲಾಗಿದೆ. [ಗೂಗ್ಲಿ ಚಿತ್ರ ವಿಮರ್ಶೆ]


ಗೂಗ್ಲಿ' ಚಿತ್ರದ ತೆಲುಗು ರೀಮೇಕ್ ರೈಟ್ಸ್ ಗೆ ಭರ್ಜರಿ ರೈಟ್ಸ್ ಸಿಕ್ಕಿದೆ. ಲುಗು ರೀಮೇಕ್ ರೈಟ್ಸ್ ಸುಮಾರು ರು.45 ಲಕ್ಷಕ್ಕೆ ಮಾರಾಟವಾಗಿದೆ. ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ ಚಿತ್ರವಿದು.

ಯಶ್ ಜೋಡಿಯಾಗಿ ಕೃತಿ ಕರಬಂಧ ಇದ್ದಾರೆ. ಅನಂತನಾಗ್, ಸುಧಾಬೆಳವಾಡಿ, ಸಾಧುಕೋಕಿಲ, ನೀನಾಸಂ ಅಶ್ವತ್ ಮುಂತಾದವರು 'ಗೂಗ್ಲಿ' ಚಿತ್ರದ ತಾರಾಬಳಗದಲ್ಲಿದ್ದಾರೆ. ವೈದಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೋಶ್ವ ಶ್ರೀಧರ್ ಸಂಗೀತ ನೀಡಿದ್ದಾರೆ.

ಸನತ್ ಸುರೇಶ್ ಸಂಕಲನ, ಪಳನಿರಾಜ್, ರವಿವರ್ಮ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಪವನ್ ಒಡೆಯರ್, ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಕವಿರಾಜ್ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Rocking Star Yash and Kriti Karabanda lead romantic comedy film Googly running towards 100 days. The film released on 19 July 2013 and opened to a fantastic response at the box office. The film has been declared a "Super Hit".
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada