»   » ರಾಕಿಂಗ್ ಸ್ಟಾರ್ ಯಶ್ ಇನ್ ಲವ್: ಗಾಸಿಪ್ ಅಲ್ಲ

ರಾಕಿಂಗ್ ಸ್ಟಾರ್ ಯಶ್ ಇನ್ ಲವ್: ಗಾಸಿಪ್ ಅಲ್ಲ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಈಗ ಪ್ರೀತಿಗೆ ಬಿದ್ದಿರೋದು ಕನ್ಫರ್ಮ್ ಆಗಿದೆ. ಆದರೆ ನೀವಂದ್ಕೊಂಡ ಹಾಗೆ ಅದು ರಾಧಿಕಾ ಪಂಡಿತ್ ಜೊತೆಗಲ್ಲ. ಇನ್ಯಾರ ಜೊತೆಗೆಗ್ ಎಂಬುದು ತಾನೆ ನಿಮ್ಮ ಡೌಟು. ಜಯಣ್ಣ ಕಂಬೈನ್ಸ್ ಜೊತೆಗೆ.

ಯಶ್ ಈಗ ಜಯಣ್ಣ ಕಂಬೈನ್ಸ್ ನ ಮತ್ತೊಂದ್ ಸಿನಿಮಾ 'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ' ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಯಶ್ ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಜಯಣ್ಣ ಬ್ಯಾನರ್ ಚಿತ್ರಗಳನ್ನ ಮಾಡ್ತಿದ್ದು ಎರಡೂವರೆ ವರ್ಷಗಳಲ್ಲಿ ಇದು ಯಶ್ ಜಯಣ್ಣ ಕಂಬೈನ್ಸ್ ನ ಐದನೇ ಸಿನಿಮಾ.

ಯಶ್ ಗೆ ಜಯಣ್ಣ ಬ್ಯಾನರ್ ಅಂದ್ರೆ ಹೋಂ ಬ್ಯಾನರ್ ಆಗ್ತಿದೆ. ಇನ್ನು ಜಯಣ್ಣ ಅಂಡ್ ಟೀಂಗೆ ಕೂಡ ಯಶ್ ನಮ್ ಹೈದ ಆಗಿದ್ದಾನೆ. ಇಲ್ಲಿರೋ ಮತ್ತೊಂದು ವಿಶೇಷ ಆಂದ್ರೆ 'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ' ಸಿನಿಮಾಗೆ ಜೋಡಿಯಾಗ್ತಿರೋದು ಯಶ್ ಮತ್ತು ರಾಧಿಕಾ ಪಂಡಿತ್.

ಈ ಬಗ್ಗೆ ರಾಧಿಕಾ ಪಂಡಿತ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. A great production house (jayanna combines) a promising new director, an expert cinematographer, a magical music , a much liked lead combination, a super entertaining script.. Is called......MR n MRS RAMACHARI

ಮತ್ತೆ 'ಡ್ರಾಮಾ' ಜೋಡಿ ಒಂದಾಗ್ತಿದ್ದು ಯಶ್-ರಾಧಿಕಾ ಅಂದ್ರೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗೋದು ಸಹಜ. ಯಶಸ್ವಿ ಜಯಣ್ಣ-ಯಶ ಜೋಡಿಯ ಉಳಿದ ನಾಲ್ಕು ಚಿತ್ರಗಳ ಡೀಟೈಲ್ಸ್ ಸ್ಲೈಡ್ ಗಳಲ್ಲಿ ನೋಡುತ್ತಾ ಸಾಗಿ.

ಜಾನು ಪರ್ವಾಗಿಲ್ಲ ಅನ್ನಿಸಿಕೊಂಡ ಚಿತ್ರ

ಜಾನು-ಪ್ರೀತಂ ಗುಬ್ಬಿ ನಿರ್ದೇಶನದ ಯಶ್ ಚಿಕ್ಕಮಗಳೂರ ಚಿಕ್ಕಮಲ್ಲಿಗೆ ದೀಪಾ ಸನ್ನಿಧಿ ಜೋಡಿಯಾಗಿದ್ದ ಚಿತ್ರ. ಚಿತ್ರ ಗೆಲ್ಲದಿದ್ರೂ ಪರ್ವಾಗಿಲ್ಲ ಅನ್ನಿಸಿಕೊಳ್ತು.

ಡ್ರಾಮಾ ಅರ್ಧ ಶತಕ ಪೂರೈಸಿದ ಚಿತ್ರ

ಡ್ರಾಮಾ-ಯೋಗರಾಜ ಭಟ್ರ ಚಿತ್ರ ಡ್ರಾಮಾ ಯಶಸ್ವಿ ಐವತ್ತು ದಿನಗಳನ್ನ ಪೂರೈಸ್ತು. ಯಶ್-ರಾಧಿಕಾ ಜೊತೆಗೆ ಸತೀಶ-ಸಿಂಧು ಜೋಡಿ, ಅಂಬಿ ಅಭಿನಯ ಕಮಾಲ್ ಮಾಡ್ತು.

ಪವನ್ ಗೂಗ್ಲಿಗೆ ಪ್ರೇಕ್ಷಕರು ಕ್ಲೀನ್ ಬೋಲ್ಡ್

ಗೂಗ್ಲಿ-ಪವನ್ ಒಡೆಯರ್ ಬಿಟ್ಟ ಗೂಗ್ಲಿಗೆ ಪ್ರೇಕ್ಷಕ ಕ್ಲೀನ್ ಬೋಲ್ಡಾದ. ಮತ್ತೊಮ್ಮೆ ಜಯಣ್ಣ ಕೋಟಿ ಕೊಳ್ಳೆ ಹೊಡೆದ ಚಿತ್ರ.

ಗಜಕೇಸರಿ ಮೇಲೆ ನಿರೀಕ್ಷೆಗಳು ಸಾಕಷ್ಟಿವೆ

ಗಜಕೇಸರಿ-ಮುಂಗಾರುಮಳೆ ಕ್ಯಾಮರಾಮನ್ ಕೃಷ್ಣ ಚಿತ್ರ ಯಶ್-ಅಮೂಲ್ಯಾ ಜೋಡಿ ಜೊತೆ ಚಿತ್ರ ಯಶ್ ಜೋಶ್ ನಿಂದ ಗೆಲ್ಲೋ ಸಾಧ್ಯತೆ ಹೆಚ್ಚು.

ಯಶ್ ಗೆ ಒಳ್ಳೆ ಸಿನಿಮಾ ಜೊತೆ ಲವ್ ಆಗಿದೆ

ಯಾವ್ ಹುಡ್ಗಿ ಜೊತೆ ಲವ್ವಾಗುತ್ತೋ ಗೊತ್ತಿಲ್ಲ. ನಮ್ ಹೀರೋಗಳಿಗೆ ಒಳ್ಳೆ ಸಿನಿಮಾ ಜೊತೆ ಲವ್ವಾಗ್ತಿರೋದೇ ಸಂತಸದ ವಿಚಾರ.

English summary
Rocking Star Yash is in Love, it's not a gossip. Its 100 % true. But he is not in love with any actress, he falls in love with Jayanna combines movies! His new film has been titled Mr & Mrs Ramachari. Shooting for this film will start once Yash completes Gaja Kesari.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada