For Quick Alerts
  ALLOW NOTIFICATIONS  
  For Daily Alerts

  ಪವರ್ ಸ್ಟಾರ್ ಪುನೀತ್ ಹಾದಿಯಲ್ಲಿ ರಾಕಿಂಗ್ ಸ್ಟಾರ್ ಯಶ್

  By ಜೀವನರಸಿಕ
  |

  ಸ್ಯಾಂಡಲ್ ವುಡ್ ನಲ್ಲಿ ಹಾಗೊಂದು ಟ್ರ್ಯಾಕ್ ರೆಕಾರ್ಡ್ ಇರೋದು ಪವರ್ ಸ್ಟಾರ್ ಪುನೀರ್ ರಾಜ್ ಕುಮಾರ್ ಹೆಸ್ರಲ್ಲಿ. ಇತ್ತೀಚೆಗಿನ ಟ್ರೆಂಡ್ ಹೀರೋಗಳಲ್ಲಿ ಸತತ ನಾಲ್ಕೈದು ಸಿನಿಮಾಗಳನ್ನ ಗೆಲ್ಲಿಸಿಕೊಟ್ಟ ಅನ್ ಬ್ರೇಕಬಲ್ ಹೀರೋ ಅನ್ನೋ ಹೆಮ್ಮೆ ಇದ್ದಿದ್ದು ಪವರ್ ಸ್ಟಾರ್ ಪುನೀತ್ ಗೆ.

  ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಲಾಂಗು ಮಚ್ಚು ಹಿಡಿದು ರಕ್ತದ ಮತ್ತು ಸೋಲಿನ ಕೊಚ್ಚೆಯಲ್ಲಿ ಒದ್ದಾಡ್ತಿದ್ದ ಸಮಯದಲ್ಲಿ ಗೆಲುವಿನ ಮೇಲೆ ಗೆಲುವು ಸಾಧಿಸಿ ಸ್ಯಾಂಡಲ್ ವುಡ್ ನ ಸರದಾರನಾಗಿ ಮಿಂಚಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. [ಎರಡನೇ ವರ್ಷವೂ ಸ್ಯಾಂಡಲ್ ವುಡ್ ಸುಲ್ತಾನ್ ಯಶ್]

  ಈಗ ಯಶ್ ಕೂಡ ಪುನೀತ್ ಹಾದಿಯಲ್ಲೇ ಸಾಗ್ತಿದ್ದಾರೆ. ಪೈಸಾ ವಸೂಲ್ ನಟ ಅನ್ನಿಸಿಕೊಂಡಿರೋ ಯಶ್ 2012ರಿಂದೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸ್ತಿರೋ ದಾಳಿಗೆ ಸೂಪರ್ ಸ್ಟಾರ್ ಗಳೇ ಸೈಡಿಗೆ ನಿಲ್ತಿದ್ದಾರೆ. ಇಷ್ಟಕ್ಕೂ ಯಶ್ ಅಬ್ಬರಿಸೋದಕ್ಕೆ ಅವ್ರಿಗೆ ಕರಗತವಾಗಿರೋ ಅಪ್ಪಟ ಅಭಿನಯವೇ ಗಾಡ್ ಫಾದರ್ ಅಂತಿದೆ ಗಾಂಧಿನಗರ. ['ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ವಿಮರ್ಶೆ]

  ಸದ್ಯ ಪವರ್ ಸ್ಟಾರ್ ಸೋಲು ಗೆಲವಿನ ನಡುಯವೆ ಏಳು ಬೀಳುಗಳನ್ನ ಕಾಣ್ತಾ ಇದ್ರೆ, ಯಶ್ ಮಾತ್ರ ಐದು ವರ್ಷಗಳ ಹಿಂದಿನ ಪವರ್ ಸ್ಟಾರ್ ಆಗಿ ಸ್ಯಾಂಡಲ್ ವುಡ್ ಅಷ್ಟೂ ಪ್ರೇಕ್ಷಕರ ಮನಸ್ಸನ್ನ ಕದ್ದಿದ್ದಾರೆ. ಯಶ್ ಅವರ ಮಿಸ್ಟರ್ ಅಂಡರ್ ಮಿಸಸ್ ರಾಮಾಚಾರಿ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  ನಿರ್ದೇಶಕರಾಗಿ ಬದಲಾಗುತ್ತಿರುವ ಸಂಭಾಷಣೆಕಾರ ಮಂಜು ಮಾಂಡ್ಯ ಅವರ ಆಕ್ಷನ್ ಕಟ್ ನಲ್ಲಿ ಮೂಡಿಬರಲಿರುವ ಚಿತ್ರ 'ಮಾಸ್ಟರ್ ಪೀಸ್'. ಈ ಚಿತ್ರದ ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆಗಳಿವೆ. ಒಟ್ನಲ್ಲಿ ರಾಕಿಂಗ್ ಸ್ಟಾರ್ ಈಗ ಸ್ಯಾಂಡಲ್ ವುಡ್ ನ ಹಾಟ್ ಫೇವರಿಟ್.

  English summary
  Rocking Star Yash is continuously giving hit movies in Sandalwood. The fans hardly believes that, the actor is in the path of Power Star Puneeth Rajkumar, who has also given successful movies in Kannada film industry in the recent past.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X