For Quick Alerts
  ALLOW NOTIFICATIONS  
  For Daily Alerts

  ಗಣೇಶ್ 'ರೋಮಿಯೋ' ಬಂಡವಾಳ ಬಯಲು!

  By Rajendra
  |

  ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಪ್ರೇಕ್ಷಕರು ಮತ್ತೊಮ್ಮೆ ಕೈಹಿಡಿದಿದ್ದಾರಾ? ಅವರ ಅಭಿನಯದ ಲೇಟೆಸ್ಟ್ ರೊಮ್ಯಾಂಟಿಕ್ ಕಾಮಿಡಿ ಚಿತ್ರ ರೋಮಿಯೋ ಬಾಕ್ಸಾಫೀಸಲ್ಲಿ ಸದ್ದು ಮಾಡುತ್ತಿದೆಯಾ? ಯಾವೋನಿಗ್ ಗೊತ್ತು? ಆದರೆ ಗಣೇಶ್ ಮಾತ್ರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

  ಇತ್ತೀಚೆಗೆ ಅವರ ಮನೆಯಲ್ಲಿ ಸಣ್ಣ ಪಾರ್ಟಿಯೊಂದು ನಡೆದಿದೆ. 'ರೋಮಿಯೋ' ಚಿತ್ರದ ನಿರ್ದೇಶಕ ಶೇಖರ್ ಅವರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ ಗಣೇಶ್. ಈ ಸಂತಸಕ್ಕೆ ಕಾರಣವಾಗಿರುವುರು 'ರೋಮಿಯೋ' ಚಿತ್ರದ ಯಶಸ್ವಿ ಪ್ರದರ್ಶನ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

  'ರೋಮಿಯೋ' ಚಿತ್ರದ ವಿತರಕ ಕೆ ಮಂಜು ಅವರ ಪ್ರಕಾರ ಚಿತ್ರ ಲಾಭ ಮಾಡಿದೆ. ಈ ಚಿತ್ರ ಅಂದಾಜು ರು.2.5 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಅಲ್ಲಿಗೆ ಹೂಡಿದ ಬಂಡವಾಳ ವಾಪಸ್ ಬಂತೆ? ಅಥವಾ ನಿರ್ಮಾಪಕರಿಗೆ ಏನಾದರೂ ಲಾಭ ಆಯ್ತಾ? ಮಂಜು ಪ್ರಕಾರ ಅಷ್ಟೋ ಇಷ್ಟೋ ಲಾಭ ಆಗಿದೆ ಎಂದು ಭಾವಿಸಬಹುದು.

  ಈ ಚಿತ್ರವನ್ನು ನವೀನ್ ರಮೇಶ್ ಕುಮಾರ್ ನಿರ್ಮಿಸಿದ್ದು ಗಣೇಶ್ ಗೆ ಮರುಜನ್ಮ ಪ್ರಸಾದಿಸಿದೆ. ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳು ಸಹಕರಿಸಿದ್ದರೆ ಚಿತ್ರ ಇನ್ನೊಂದಷ್ಟು ದುಡ್ಡು ಮಾಡುತ್ತಿತ್ತು. ಆದರೆ ಅವರು ಚಿತ್ರವನ್ನು ಎತ್ತಂಗಡಿ ಮಾಡುವ ಮೂಲಕ 'ರೋಮಿಯೋ' ಆರ್ಭಟಕ್ಕೆ ತಡೆಯೊಡ್ಡಿದ್ದಾರೆ.

  ಮಲ್ಟಿಫ್ಲೆಕ್ಸ್ ಗಳಿಗೆ ತಕ್ಕಪಾಠ ಕಲಿಸಬೇಕು ಎಂದು ಕೆ ಮಂಜು ಗುಡುಗಿದ್ದಾರೆ. ಅವರು ಏನು ಪಾಠ ಕಲಿಸುತ್ತಾರೋ ಏನೋ ಅವರಿಗೇ ಗೊತ್ತು. ಈ ಸಂದರ್ಭದಲ್ಲಿ ಮಂಜು ಇನ್ನೊಂದು ಶಪಥವನ್ನೂ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ವರ್ಷಕ್ಕೊಂದು ಚಿತ್ರ ಮಾಡ್ತಾರಂತೆ.

  ಏತನ್ಮಧ್ಯೆ ಪಿಸಿ ಶೇಖರ್ ಮತ್ತೊಂದು ಕತೆಯನ್ನು ಸಿದ್ಧಪಡಿಸುತ್ತಿದ್ದಾರೆ. ಅದರ ಡೀಟೇಲ್ಸ್ ಸದ್ಯಕ್ಕೆ ಲಭ್ಯವಿಲ್ಲ. 'ರೋಮಿಯೋ' ಯಶಸ್ಸು ಚಿತ್ರದ ನಿರ್ಮಾಪಕ ನವೀನ್ ಅವರ ಮುಖದಲ್ಲಿ ನಗುಮೂಡಿಸಿದೆ. ಅವರ ನಗು ಇನ್ನೊಂದಷ್ಟು ಚಿತ್ರಗಳ ನಿರ್ಮಾಣಕ್ಕೆ ಬಲ ನೀಡಲಿ ಎಂಬುದು ಎಲ್ಲರ ಹಾರೈಕೆ. (ಏಜೆನ್ಸೀಸ್)

  English summary
  Golden Star Ganesh latest romantic comedy Romeo had done well in the box office? According to distributor K Manju the film has collected roughly Rs.2.5 crores. The collections has brought back life to ganesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X