For Quick Alerts
  ALLOW NOTIFICATIONS  
  For Daily Alerts

  ಸೆಂಚುರಿ ಸ್ಟಾರ್, ಪವರ್ ಸ್ಟಾರ್ ಮಧ್ಯೆ 'ಇವರು' ರಾಯಲ್ ಸ್ಟಾರ್.!

  By Harshitha
  |

  'ನಟ ಸಾರ್ವಭೌಮ', 'ವರನಟ', 'ಕನ್ನಡದ ಕಲಾರತ್ನ'...ಹೀಗೆ ಡಾ.ರಾಜ್ ಕುಮಾರ್ ಗೆ ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಹೆಸರುಗಳೆಷ್ಟೋ..!?

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೂ ಕಮ್ಮಿ ಇಲ್ಲ. 'ನಾಟ್ಯ ಸಾರ್ವಭೌಮ', 'ಕರುನಾಡ ಚಕ್ರವರ್ತಿ', 'ಸೆಂಚುರಿ ಸ್ಟಾರ್', 'ಸ್ಯಾಂಡಲ್ ವುಡ್ ಕಿಂಗ್' ಅಂತೆಲ್ಲಾ ಶಿವಣ್ಣನಿಗೆ ಅಪ್ಪಟ ಭಕ್ತರು ನಾಮಕರಣ ಮಾಡಿದ್ದಾರೆ.

  ಇನ್ನೂ ಪುನೀತ್ ರಾಜ್ ಕುಮಾರ್ 'ಪವರ್ ಸ್ಟಾರ್' ಅಂತಲೇ ಹೆಸರುವಾಸಿ. ಮೂರ್ಮೂರು 'ಸ್ಟಾರ್' ಗಳು ಇರುವ ರಾಜವಂಶದಲ್ಲಿ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಎಂಬ ಹೊಸ ನಕ್ಷತ್ರ ಉಗಮವಾಗಿದೆ. [ಸ್ಯಾಂಡಲ್ ವುಡ್ ಗೆ ರಾಜಣ್ಣನ ಕುಟುಂಬದ ಮತ್ತೊಂದು ಕುಡಿ]

  ವಿನಯ್ ರಾಜ್ ಕುಮಾರ್ ಅಭಿನಯದ ಎರಡನೇ ಸಿನಿಮಾ 'ರನ್ ಆಂಟನಿ' ಬಿಡುಗಡೆ ಆಗಿದೆ. ಹೀಗಿರುವಾಗ, ವಿನಯ್ ರಾಜ್ ಕುಮಾರ್ ಗೂ ಒಂದು ಹೊಸ ಬಿರುದು ಬೇಡ್ವಾ.?

  'ಸಿದ್ಧಾರ್ಥ' ಬಿಡುಗಡೆ ಆದ ಕೂಡಲೆ ವಿನಯ್ ಗೆ 'ಮೆಗಾ 3G ಪವರ್ ಸ್ಟಾರ್' ಅಂತ ರಾಜವಂಶದ ಅಭಿಮಾನಿಗಳು ನಾಮಕರಣ ಮಾಡಿದ್ದರು. ಆದ್ರೆ, ಅದನ್ನು ಬದಿಗೆ ಸರಿಸಿರುವ 'ರನ್ ಆಂಟನಿ' ಚಿತ್ರತಂಡ ವಿನಯ್ ರಾಜ್ ಕುಮಾರ್ ಗೆ 'ರಾಯಲ್ ಸ್ಟಾರ್' ಅಂತ ಬಿರುದು ನೀಡಿದೆ. [ವಿನಯ್ ಈಗ 'ಮೆಗಾ 3G ಪವರ್ ಸ್ಟಾರ್']

  'ರನ್ ಆಂಟನಿ' ಚಿತ್ರದ ಟೈಟಲ್ ಕಾರ್ಡ್ ನಲ್ಲಿ 'ರಾಯಲ್ ಸ್ಟಾರ್' ವಿನಯ್ ರಾಜ್ ಕುಮಾರ್ ಅಂತಲೇ ತೋರಿಸಲಾಗಿದೆ. ಹೀಗಾಗಿ, ಇನ್ಮುಂದೆ 'ರಾಯಲ್ ಸ್ಟಾರ್' ವಿನಯ್ ರಾಜ್ ಕುಮಾರ್ ಗೆ ಜೈ ಅನ್ನಿ...!

  English summary
  Kannada Movie 'Run Antony' team has given new title called 'Royal Star' for Kannada Actor Vinay Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X