For Quick Alerts
  ALLOW NOTIFICATIONS  
  For Daily Alerts

  RRR ಚಿತ್ರದ ಒಂದು ಫೈಟ್ ಸೀನ್ ಗೆ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತಾ?

  |

  ಬಾಹುಬಲಿ ಸಿನಿಮಾದ ನಂತರ ಎಸ್ ಎಸ್ ರಾಜಮೌಳಿ ನಿರ್ದೇಶನ ಚಿತ್ರ ಆರ್.ಆರ್.ಆರ್. ಚಿತ್ರಕ್ಕೆ ಅಧಿಕೃತವಾಗಿ ಹೆಸರಿಟ್ಟಲ್ಲ. ಆದರೂ ಆರ್.ಆರ್.ಆರ್ ಎಂದೇ ಖ್ಯಾತಿ ಗಳಿಸಿಕೊಂಡಿದೆ. ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಇಬ್ಬರು ನಾಯಕರಿದ್ದು, ಅಜಯ್ ದೇವಗಾನ್ ಮತ್ತು ಆಲಿಯಾ ಭಟ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಸದ್ಯದ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಅತ್ಯಂತ ಪ್ರಮುಖವಾದ ಸಾಹಸ ದೃಶ್ಯವಿದೆಯಂತೆ. ಇಬ್ಬರು ಹೀರೋಗಳು ಸುಮಾರು 2 ಸಾವಿರ ಜನರ ಜೊತೆ ಯುದ್ಧ ಮಾಡುವ ಸನ್ನಿವೇಶ ಅದು. ಅದಕ್ಕಾಗಿ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಿಸುವ ತಯಾರಿ ನಡೆಸಿದ್ದಾರಂತೆ ರಾಜಮೌಳಿ.

  ಸುಮಾರು 100ಕ್ಕೂ ಅಧಿಕ ವಿದೇಶಿ ತಂತ್ರಜ್ಞರು ಈ ಆಕ್ಷನ್ ಸೀನ್ ಶೂಟಿಂಗ್ ನಲ್ಲಿ ಕೆಲಸ ಮಾಡುತ್ತಿದ್ದು, ಇದಕ್ಕಾಗಿ ದೊಡ್ಡ ಸೆಟ್ ಹಾಕಲಿದ್ದಾರಂತೆ. ಇಡೀ ಚಿತ್ರಕ್ಕೆ ಇದು ಆಕರ್ಷಣೀಯ ಸಾಹಸ ದೃಶ್ಯವಾಗಲಿದೆ ಎಂಬ ಅಭಿಪ್ರಾಯವಿದೆ.

  ರಾಜಮೌಳಿ 'RRR' : ಕತೆ, ನಾಯಕಿ, ಬಿಡುಗಡೆ ದಿನಾಂಕ ಬಹಿರಂಗ!

  ಅಂದ್ಹಾಗೆ, ಈ ಆಕ್ಷನ್ ಸೀನ್ ಗಾಗಿ ಆರ್ಆರ್ಆರ್ ತಂಡ ಖರ್ಚು ಮಾಡುತ್ತಿರುವ ಹಣ ಸುಮಾರು 45 ಕೋಟಿಯಂತೆ. ಸದ್ಯಕ್ಕೆ ಈ ಮೊತ್ತದಲ್ಲಿ ಈ ಸೀನ್ ಶೂಟ್ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಸುಮಾರು ಎರಡು ತಿಂಗಳು ಪ್ಲಾನ್ ಆಗಿದೆಯಂತೆ.

  'ಮಹಾಭಾರತ'ದ ಆಸೆ ಬೇಡ: ಕೊನೆ ಸಿನಿಮಾದ ಬಗ್ಗೆ ರಾಜಮೌಳಿ ಅಚ್ಚರಿ.!

  ಇನ್ನುಳಿದಂತೆ ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ಮೊದಲ ಸಲ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದು, ಇಡೀ ಸೌತ್ ಇಂಡಸ್ಟ್ರಿಯಲ್ಲಿ ಈ ಸಿನಿಮಾ ಸಂಚಲನ ಸೃಷ್ಟಿಸಿದೆ. 2020ರ ಜುಲೈ 30ರಂದು ಈ ಸಿನಿಮಾ ರಿಲೀಸ್ ಆಗಲಿದೆ.

  English summary
  SS Rajamouli planning to do most expensive action scene in RRR. its is the highlight action scene in this movie. jr ntr and ram charan will be seen fighting along with 2 thousand men in it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X