Don't Miss!
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- News
Assembly election 2023: ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಎಚ್.ಡಿ.ಕೆ
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೀವನದಲ್ಲಿ ಯಾವಾಗಲೂ 'ಪಾಸಿಟಿವ್' ಆಗಿರಲು ಸಾಧ್ಯವೇ?: ನೋಡಿ 'ಪಾಸಿಟಿವ್' ಕಿರುಚಿತ್ರ
ಎಲ್ಲರೂ ಯಾವಾಗಲೂ ಪಾಸಿಟಿವ್ ಆಗಿರಬೇಕು ಎನ್ನುವಾಗಲೇ ನೆಗೆಟಿವ್ ಸಂಗತಿಯೊಂದು ನಮ್ಮ ಬದುಕಿನೊಳಗೆ ಬಂದಿದೆ. ಆ ನೆಗೆಟಿವ್ ವಿಚಾರವು ನಮ್ಮಲ್ಲಿಯೂ ನೆಗೆಟಿವ್ ಆಗಿರಬೇಕು ಎನ್ನುವುದು ಎಲ್ಲರ ಬಯಕೆ. ಹಾಗೆಯೇ ಪಾಸಿಟಿವ್ ಎಂಬುದು ಕಿವಿಯೊಳಗೆ ಬಿದ್ದರೆ ಮೈ ಒಂದು ಕ್ಷಣ ನಡುಗುತ್ತದೆ. ಜೀವನದಲ್ಲಿ ಪಾಸಿಟಿವ್ ಬೇಕೋ ಅಥವಾ ನೆಗೆಟಿವ್ ಬೇಕೋ ಎಂಬ ಆಯ್ಕೆ ಶುರುವಾಗಿದೆ.
ಇಂತಹದೇ ವಸ್ತುವನ್ನಿಟ್ಟುಕೊಂಡ ಕಿರುಚಿತ್ರವೊಂದು ಗಮನ ಸೆಳೆಯುತ್ತಿದೆ. 'ಪಾಸಿಟಿವ್' ಎಂಬ ಶೀರ್ಷಿಕೆಯ ಈ ಕಿರುಚಿತ್ರ, 'ಡೇಲಿ ಹಂಟ್' ಲಾಕ್ ಡೌನ್ ಅವಧಿಯಲ್ಲಿ ಆಯೋಜಿಸಿದ್ದ 'ಲಾಕ್ ಡೌನ್ ಶಾರ್ಟ್ ಫಿಲಂ ಸ್ಪರ್ಧೆ'ಯಲ್ಲಿ ರನ್ನರ್ ಅಪ್ ಆಗಿದೆ.
ಕೇವಲ 1.51 ನಿಮಿಷದ ಅವಧಿಯ ಈ ಕಿರುಚಿತ್ರವನ್ನು ಚಂದನ್ ಕೇಶವ್ ನಿರ್ದೇಶಿಸಿ, ನಟಿಸಿ ಸಿದ್ಧಪಡಿಸಿದ್ದಾರೆ. ಅವರೊಂದಿಗೆ ಪ್ರಭು ಎಂ.ಕೆ. ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
ಮನೆಯಲ್ಲಿ ಇಬ್ಬರು ಇಸ್ಪೀಡ್ ಆಡುತ್ತಿದ್ದಾರೆ. ಜೀವನದಲ್ಲಿ ಯಶಸ್ಸು ಸಿಗಬೇಕೆಂದರೆ ನಾವು ಅನುಸರಿಸಬೇಕಾದ ಒಂದೇ ಒಂದು ಸಂಗತಿಯೆಂದರೆ ಅದು ನಕಾರಾತ್ಮಕ ಆಲೋಚನೆಯ ಜನರನ್ನು ದೂರ ಇರಿಸುವುದು ಮತ್ತು ಪಾಸಿಟಿವ್ ಜನರ ಜತೆ ಸಮಯ ಕಳೆಯುವುದು ಎನ್ನುವುದು ಒಬ್ಬಾತನ ಸಲಹೆ.
ಆದರೆ ಎಲ್ಲ ಬಗೆಯ ಪಾಸಿಟಿವ್‌ಗಳೂ ಒಳ್ಳೆಯದಲ್ಲ. ಪಾಸಿಟಿವ್ ಎನ್ನುವುದು ತನ್ನಲ್ಲಿಯೂ ಭೀತಿ ಹುಟ್ಟಿಸುತ್ತದೆ ಎನ್ನುವುದು ಎದುರಿಗೆ ಕುಳಿತ ವ್ಯಕ್ತಿ, ಸೀನುವ ಮೂಲಕ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಅನುಮಾನ ಹಂಚಿಕೊಂಡಾಗ ಅರಿವಾಗುತ್ತದೆ.
ಒಂದು ನಿಮಿಷದಷ್ಟು ಅವಧಿಯಲ್ಲಿಯೇ ಸೂಕ್ಷ್ಮ ಸಂಗತಿಯೊಂದನ್ನು ಈ ಕಿರುಚಿತ್ರದಲ್ಲಿ ಹೇಳಿದ್ದಾರೆ ಚಂದನ್ ಕೇಶವ್. ಸೂರ್ಯನಾರಾಯಣ್ ನೀಡಿರುವ ಹಿನ್ನೆಲೆ ಸಂಗೀತ ಕಿರುಚಿತ್ರದ ಆಶಯಕ್ಕೆ ಪೂರಕವಾದ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಟ್ರೋಲ್ ಹೈದ ಪೇಜಿನ ಹೈದ ಸ್ಟುಡಿಯೋಸ್ ಈ ಲಾಕ್ ಡೌನ್ ಶಾರ್ಟ್ ಮೂವಿ ಸ್ಪರ್ಧೆ ಆಯೋಜಿಸಿತ್ತು. ಮೂರು ನಿಮಿಷಕ್ಕಿಂತ ಕಡಿಮೆ ಅವಧಿಯ ಚಿತ್ರಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮನೆಯ ಒಳಗೇ ಕಿರುಚಿತ್ರ ತಯಾರಿಸುವುದು ಕಡ್ಡಾಯವಾಗಿತ್ತು.
250 ರೂ ಪ್ರವೇಶ ಶುಲ್ಕದೊಂದಿಗೆ 50ಕ್ಕೂ ಹೆಚ್ಚು ಕಿರುಚಿತ್ರಗಳು ಸ್ಪರ್ಧೆಗೆ ಬಂದಿದ್ದವು. ತೀರ್ಪುಗಾರರಾಗಿದ್ದ ನಿರ್ದೇಶಕರಾದ ಎಂ.ಜಿ. ಶ್ರೀನಿವಾಸ್, ಅನೂಪ್ ಆಂಥೋನಿ ಮತ್ತು ಅರ್ಜುನ್ ಕುಮಾರ್ ಅವುಗಳಲ್ಲಿ ಉತ್ತಮವಾದುದ್ದನ್ನು ಆಯ್ಕೆ ಮಾಡಿದ್ದರು.
ಮೊದಲ ಬಹುಮಾನ ಪಡೆದುಕೊಂಡ ತಂಡಕ್ಕೆ 10,000 ರೂ ನಗದು ಪ್ರಕಟಿಸಲಾಗಿತ್ತು. ರೆಡ್ ಲೈನ್ ಎಂಬ ಕಿರುಚಿತ್ರ ಮೊದಲ ಸ್ಥಾನ ಪಡೆದುಕೊಂಡಿತು.