»   » ಎಸ್ ನಾರಾಯಣ್ ಬಾಲಿವುಡ್ ಗೆ ಪದಾರ್ಪಣೆ

ಎಸ್ ನಾರಾಯಣ್ ಬಾಲಿವುಡ್ ಗೆ ಪದಾರ್ಪಣೆ

By: ಉದಯರವಿ
Subscribe to Filmibeat Kannada

ಬಹುಮುಖ ಪ್ರತಿಭೆ, ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರು ತಮ್ಮ 24 ವರ್ಷಗಳ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್ ಚಿತ್ರರಂಗಕ್ಕೆ ಜಿಗಿದಿದ್ದಾರೆ. ಹಿಂದಿ ಚಿತ್ರಕ್ಕೆ ಅವರು ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.

ಅವರ ನಿರ್ದೇಶನದ ಚಿತ್ರ ಇದೇ ಮೇ ಎರಡನೇ ವಾರದಲ್ಲಿ ಆರಂಭವಾಗಲಿದೆ. ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ದಕ್ಷ' ಚಿತ್ರವನ್ನು ಅವರು ಹಿಂದಿಯಲ್ಲೂ ನಿರ್ದೇಶಿಸಲಿದ್ದಾರೆ. ಏಪ್ರಿಲ್ 24ರಂದು 'ದಕ್ಷ' ಚಿತ್ರ ಬಿಡುಗಡೆಯಾಗುತ್ತಿದ್ದು, ಅಂದೇ ತಮ್ಮ ಹಿಂದಿ ಚಿತ್ರವನ್ನು ವಿವರಗಳು ಹೊರಬೀಳಲಿವೆ. [ಕಲಾಸಾಮ್ರಾಟ್ 'ದಕ್ಷ' ಚಿತ್ರ ಗಿನ್ನಿಸ್ ದಾಖಲೆ ಮಾಡಿದ್ದೇಗೆ?]

ಕಲಾಸಾಮ್ರಾಟ್ 'ದಕ್ಷ' ಚಿತ್ರ ಗಿನ್ನಿಸ್ ದಾಖಲೆ ಮಾಡಿದ್ದೇಗೆ?

ಎಸ್ ನಾರಾಯಣ್ ಹಾಗೂ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರ ಕಾಂಬಿನೇಷನಲ್ಲಿ ಮೂಡಿಬರುತ್ತಿರುವ 'ದಕ್ಷ' ಚಿತ್ರ ಗಿನ್ನಿಸ್ ದಾಖಲೆಗೆ ನಾಮನಿರ್ದೇಶನಗೊಂಡಿದೆ. ಇಷ್ಟಕ್ಕೂ 'ದಕ್ಷ' ಚಿತ್ರದಲ್ಲಿ ಅಂತಹದ್ದೇನಿದೆ? ಗಿನ್ನಿಸ್ ದಾಖಲೆಗೆ ಕಾರಣವಾಗಿರುವ ಅಂಶಗಳೇನು ಎಂದು ನೋಡಿದರೆ ಹೌದಾ ಎಂದು ಹೌಹಾರಿದರೂ ಅಚ್ಚರಿಯಿಲ್ಲ.

ಈ ಚಿತ್ರವನ್ನು ಸಿಂಗಲ್ ಶಾಟ್ ನಲ್ಲಿ ಮಾಡಿಮುಗಿಸಿದ್ದಾರೆ ನಾರಾಯಣ್. ಇದಿಷ್ಟೇ ಅಲ್ಲದೆ ದುನಿಯಾ ವಿಜಿ ಅವರ ಸಮರ್ಪಣಾಭಾವದ ನಟನೆಯೂ ಇದಕ್ಕೆ ಜೊತೆಯಾಗಿದೆ. ಭಯೋತ್ಪಾದಕ ದಾಳಿ ಕುರಿತ ಈ ಚಿತ್ರದ ಕಾಲಾವಧಿ 2 ಗಂಟೆ 22 ನಿಮಿಷಗಳು. ದುನಿಯಾ ವಿಜಿ ಜೊತೆ ನಾರಾಯಣ್ ಅವರ ಪುತ್ರ ಪಂಕಜ್ ಹಾಗೂ ನೇಹಾ ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ವಿಜಯ್ ಅವರು ಕಮಾಂಡೋ ಪಾತ್ರವನ್ನು ಪೋಷಿಸಿದ್ದು, ರಿಯಲ್ ಸ್ಟಂಟ್ಸ್ ಮೂಲಕ ಪ್ರೇಕ್ಷಕರನ್ನು ಬೆರಗಾಗಿಸಲಿದ್ದಾರೆ. 'ದಕ್ಷ' ಚಿತ್ರವನ್ನು ಶೂಟ್ ಮಾಡಿರುವ ಸ್ಥಳದಲ್ಲೇ ಹಿಂದಿ ಚಿತ್ರವನ್ನೂ ನಾರಾಯಣ್ ನಿರ್ದೇಶಿಸಲಿದ್ದಾರೆ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

English summary
Kala Samrat S Narayan all set to debut in Bollywood. Narayan has finally got an opportunity to direct an Hindi movie starting on May second week. Sources say Narayan will be directing the Daksha movie to Hindi. Kannada Daksha is releasing on 24th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada