For Quick Alerts
  ALLOW NOTIFICATIONS  
  For Daily Alerts

  ಆದಿತ್ಯ ಜೊತೆಗೆ ಸಿನಿಮಾ ಘೋಷಿಸಿದ ಎಸ್.ನಾರಾಯಣ್: ನಾಯಕಿ ಯಾರು?

  |

  ಹಿರಿಯ ಸಿನಿಮಾ ನಿರ್ದೇಶಕ ಎಸ್.ನಾರಾಯಣ್ ಹೊಸ ಸಿನಿಮಾದ ಜೊತೆ ಮರಳಿ ಬಂದಿದ್ದಾರೆ. ಎಸ್.ನಾರಾಯಣ್ ನಿರ್ದೇಶನದ ಸಿನಿಮಾ ಒಂದು ಬಿಡುಗಡೆ ಆಗಿ ಮೂರು ವರ್ಷಗಳಾಗಿವೆ.

  ಎಸ್.ನಾರಾಯಣ್ ಸಿನಿಮಾಕ್ಕೆ ಆದಿತ್ಯ ಅನ್ನು ನಾಯಕರಾಗಿದ್ದು, ಅವರೂ ಸಹ ಸಿನಿಮಾದಲ್ಲಿ ನಟಿಸಿ ಬಹುಕಾಲವೇ ಆಗಿದೆ. ಇಬ್ಬರಿಗೂ ಈ ಸಿನಿಮಾ 'ಕಮ್ ಬ್ಯಾಕ್' ಸಿನಿಮಾ ಆಗಿರಲಿದೆ.

  ಆದಿತ್ಯ ನಟಿಸಿದ್ದ 'ಚಕ್ರವರ್ತಿ' ಸಿನಿಮಾ 2017 ರಲ್ಲಿ ಬಿಡುಗಡೆ ಆಗಿತ್ತು. ಆ ನಂತರ ಕೆಲವು ಸಿನಿಮಾಗಳಲ್ಲಿ ಆದಿತ್ಯ ನಟಿಸಿದರಾದರೂ ಯಾವೊಂದು ಸಿನಿಮಾ ಸಹ ಇನ್ನೂ ಬಿಡುಗಡೆ ಆಗಿಲ್ಲ. ಹಾಗಾಗಿ ಎಸ್.ನಾರಾಯಣ್ ಹಾಗೂ ಆದಿತ್ಯ ಇಬ್ಬರಿಗೂ ಇದು ಕಮ್‌ ಬ್ಯಾಕ್ ಸಿನಿಮಾ ಎಂದೇ ಹೇಳಲಾಗುತ್ತಿದೆ.

  ಸಿನಿಮಾಕ್ಕೆ ಅದಿತಿ ಪ್ರಭುದೇವಾ ಅನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ಸಿನಿಮಾದಲ್ಲಿ ನಾಯಕಿಯದ್ದು ರಫ್ ಆಂಡ್ ಟಫ್ ಆಗಿರುವ ಹುಡುಗಿಯ ಪಾತ್ರವಂತೆ. ಇದಕ್ಕೆ ಅದಿತಿ ಸೂಕ್ತ ಎನಿಸಿತಂತೆ ಎಸ್.ನಾರಾಯಣ್ ಗೆ.

  ರವಿ ಎಂಬುವರು ಆದಿತ್ಯ ಅವರನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾದ ಕತೆ ಬರೆದಿದ್ದರಂತೆ. ಅದೇ ಕತೆಯ ಎಳೆಯನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿದ್ದಾರೆ ಎಸ್.ನಾರಾಯಣ್. ಸಿನಿಮಾದ ಕತೆ ನನಗೆ, ಆದಿತ್ಯ ಗೆ ಹಾಗೂ ನಾಯಕಿ ಅದಿತಿಗೆ ಹೊಸತರಹದ್ದು. ಆದರೆ ಮೂವರಿಗೂ ಕತೆ ಇಷ್ಟವಾಗಿದೆ. ಹೊಸ ರೀತಿಯ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದೇವೆ ಎಂದಿದ್ದಾರೆ ಎಸ್.ನಾರಾಯಣ್.

  Shivaraj Kumar and Rakshith Shetty awarded Dadasaheb Phalke Award south 2020 | Filmibeat kannada

  ಸಿನಿಮಾವು ಸಾಮಾನ್ಯ ವ್ಯಕ್ತಿಯೊಬ್ಬನ ಕತೆ ಆಗಿರಲಿದೆ. ಸಿನಿಮಾದಲ್ಲಿ ಆದಿತ್ಯ ಎರಡು ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಗಂಭೀರವಾದ ಕಣ್ಣುಗಳುಳ್ಳ ಆದಿತ್ಯಗೆ ಈ ಪಾತ್ರ ಬಹಳ ಚೆನ್ನಾಗಿ ಒಪ್ಪುತ್ತದೆ ಎಂದಿದ್ದಾರೆ ಎಸ್.ನಾರಾಯಣ್. ಇದೇ ತಿಂಗಳಿನಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

  English summary
  S Narayan directing movie after three years. Adithya is hero and Aditi Prabhudev is heroine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X