»   » ಗಿನ್ನಿಸ್ ಜಾಗತಿಕ ದಾಖಲೆಗೆ ಎಸ್ ನಾರಾಯಣ್ ಚಿತ್ರ

ಗಿನ್ನಿಸ್ ಜಾಗತಿಕ ದಾಖಲೆಗೆ ಎಸ್ ನಾರಾಯಣ್ ಚಿತ್ರ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಇದೊಂದು ಅಪರೂಪದ ಅಧ್ಯಾಯ. ಕನ್ನಡ ಚಿತ್ರವೊಂದು ಗಿನ್ನಿಸ್ ಜಾಗತಿಕ ದಾಖಲೆಗೆ ಸೇರ್ಪಡೆಯಾಗಲು ನಾಮಿನೇಟ್ ಆಗಿದೆ. ಈ ದಾಖಲೆಗೆ ಕಾರಣವಾಗುತ್ತಿರುವುದು ಕಲಾ ಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದ ಚಿತ್ರ ಎಂಬುದು ವಿಶೇಷ.

ಎಸ್ ನಾರಾಯಣ್ ಹಾಗೂ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರ ಕಾಂಬಿನೇಷನಲ್ಲಿ ಮೂಡಿಬರುತ್ತಿರುವ 'ದಕ್ಷ' ಚಿತ್ರ ಗಿನ್ನಿಸ್ ದಾಖಲೆಗೆ ನಾಮನಿರ್ದೇಶನಗೊಂಡಿದೆ. 'ಚಂಡ' ಚಿತ್ರದ ಬಳಿಕ ನಾರಾಯಣ್ ಹಾಗೂ ದುನಿಯಾ ವಿಜಯ್ ಕೈಜೋಡಿಸಿರುವ ಚಿತ್ರ ಇದಾಗಿದೆ. [ದುನಿಯಾ ವಿಜಿ ಅಭಿನಯದ ಜಾಕ್ಸನ್ ವಿಮರ್ಶೆ]


S Narayan's 'Daksha' Nominated For Guinness World Records

ಇಷ್ಟಕ್ಕೂ 'ದಕ್ಷ' ಚಿತ್ರದಲ್ಲಿ ಅಂತಹದ್ದೇನಿದೆ? ಗಿನ್ನಿಸ್ ದಾಖಲೆಗೆ ಕಾರಣವಾಗಿರುವ ಅಂಶಗಳೇನು ಎಂದು ನೋಡಿದರೆ ಹೌದಾ ಎಂದು ಹೌಹಾರಿದರೂ ಅಚ್ಚರಿಯಿಲ್ಲ. ಈ ಚಿತ್ರವನ್ನು ಸಿಂಗಲ್ ಶಾಟ್ ನಲ್ಲಿ ಮಾಡಿಮುಗಿಸಿದ್ದಾರೆ ನಾರಾಯಣ್. ಇದಿಷ್ಟೇ ಅಲ್ಲದೆ ದುನಿಯಾ ವಿಜಿ ಅವರ ಸಮರ್ಪಣಾಭಾವದ ನಟನೆಯೂ ಇದಕ್ಕೆ ಜೊತೆಯಾಗಿದೆ.


ಭಯೋತ್ಪಾದಕ ದಾಳಿ ಕುರಿತ ಈ ಚಿತ್ರದ ಕಾಲಾವಧಿ 2 ಗಂಟೆ 22 ನಿಮಿಷಗಳು. ದುನಿಯಾ ವಿಜಿ ಜೊತೆ ನಾರಾಯಣ್ ಅವರ ಪುತ್ರ ಪಂಕಜ್ ಹಾಗೂ ನೇಹಾ ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.


S Narayan's 'Daksha' Nominated For Guinness World Records

ಚಿತ್ರದಲ್ಲಿ ವಿಜಯ್ ಅವರು ಕಮಾಂಡೋ ಪಾತ್ರವನ್ನು ಪೋಷಿಸಿದ್ದು, ರಿಯಲ್ ಸ್ಟಂಟ್ಸ್ ಮೂಲಕ ಪ್ರೇಕ್ಷಕರನ್ನು ಬೆರಗಾಗಿಸಲಿದ್ದಾರೆ. ಶೀಘ್ರದಲ್ಲೇ ಸೆನ್ಸಾರ್ ಆಗಲಿರುವ ಈ ಚಿತ್ರವನ್ನು ನೋಡಬೇಕಾದರೆ ಫೆಬ್ರವರಿ ಕೊನೆಯ ತನಕ ಕಾಯಲೇಬೇಕು. (ಏಜೆನ್ಸೀಸ್)

English summary
II is a pride moment for Sandalwood. Yes, a Kannada movie gets nominated for Guinness World Records. Duniya Vijay and S Narayan have again teamed up for a movie after Chanda. The movie which has been titled as Daksha, has now made big news in Gandhinagara. Daksha has been nominated for Guinness records.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada