»   » ಚಲನಚಿತ್ರ ಅಕಾಡೆಮಿಗೆ ರಾಜೇಂದ್ರಸಿಂಗ್ ಬಾಬು ಸಾರಥ್ಯ

ಚಲನಚಿತ್ರ ಅಕಾಡೆಮಿಗೆ ರಾಜೇಂದ್ರಸಿಂಗ್ ಬಾಬು ಸಾರಥ್ಯ

Posted By:
Subscribe to Filmibeat Kannada

ಅಂತೂ ಇಂತೂ ಒಂದುವರೆ ವರ್ಷಗಳ ಕಾಲ ಖಾಲಿಯಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನ ಇಂದು (ಸೋಮವಾರ ನ.24) ಭರ್ತಿಯಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಚಲನಚಿತ್ರ ಅಕಾಡೆಮಿಯ ಆಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಇಂದು ಅಧಿಸೂಚನೆ ಹೊರಡಿಸಿದ್ದು, 18 ತಿಂಗಳ ಅವಧಿಯವರೆಗೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬೂರವರನ್ನ ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರ ಹುದ್ದೆಗೆ ನೇಮಿಸಿದೆ. [ಚಲನಚಿತ್ರ ಅಕಾಡೆಮಿಗೆ ನಟಿ ತಾರಾ ರಾಜೀನಾಮೆ]

ನಟಿ ತಾರಾ ಅನುರಾಧ ರಾಜೀನಾಮೆಯಿಂದ ತೆರವಾಗಿದ್ದ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ಡಾ.ಜಯಮಾಲಾ, ಬಸಂತ್ ಕುಮಾರ್ ಪಾಟೀಲ್, ಗಿರೀಶ್ ಕಾಸರವಳ್ಳಿ, ಬರಗೂರು ರಾಮಚಂದ್ರಪ್ಪ ಸೇರಿದಂತ ದಿಗ್ಗಜರ ಹೆಸರೇ ಕೇಳಿಬಂದಿತ್ತು. ಈ ಕುರಿತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಲಾಬಿ ಕೂಡ ನಡೆದಿತ್ತು. [ಬೆಳ್ಳಿಹೆಜ್ಜೆಯಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು]

S.V.Rajendra Singh Babu to head Karnataka Chalanachitra Academy

ಚಲನಚಿತ್ರ ಅಕಾಡೆಮಿಗೆ ರಾಜೇಂದ್ರ ಸಿಂಗ್ ಬಾಬುರನ್ನ ಅಧ್ಯಕ್ಷರನ್ನಾಗಿ ನೇಮಿಸುವಂತೆ, ಬಾಬು ನೇತೃತ್ವದ ತಂಡ, ಸಿ.ಎಂ. ಸಿದ್ದರಾಮಯ್ಯನವರಿಗೆ ಮನವಿ ಪತ್ರ ಕೂಡ ಸಲ್ಲಿಸಿತ್ತು. ಇದೀಗ ಅಧಿಕೃತವಾಗಿ ಸರ್ಕಾರ, ಬಾಬು ಅವರನ್ನ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ಇನ್ನೂ, ಕಂಠೀರವ ಸ್ಟುಡಿಯೋ ನಿಗಮದ ಅಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮಿ ಅರಸ್ ರವರನ್ನ ಸರ್ಕಾರ ನೇಮಕ ಮಾಡಿದೆ.

ನಿರ್ದೇಶಕ ನಾಗಾಭರಣ, ನಟಿ ತಾರಾ ಅನುರಾಧ ನಂತ್ರ ಚಲನಚಿತ್ರ ಅಕಾಡೆಮಿಯ ಸ್ಥಾನದ ಗದ್ದುಗೆಗೆ ಏರಿರುವ ನಿರ್ಮಾಪಕ, ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರ ಹಿಟ್ ಚಿತ್ರಗಳ ವಿವರ ಇಂತಿವೆ:

* 1975 - ನಾಗಕನ್ಯೆ
* 1977 - ನಾಗರಹೊಳೆ
* 1978 - ಕಿಲಾಡಿ ಜೋಡಿ
* 1981 - ಅಂತ
* 1981 - ಸಿಂಹದ ಮರಿ ಸೈನ್ಯ
* 1984 - ಬಂಧನ
* 1990 - ಮುತ್ತಿನ ಹಾರ
* 1994 - ಮಹಾಕ್ಷತ್ರಿಯಾ
* 1995 - ಹಿಮಪಾತ
* 1997 - ಮುಂಗಾರಿನ ಮಿಂಚು
* 2001 - ಕುರಿಗಳು ಸಾರ್ ಕುರಿಗಳು
* 2002 - ಕೋತಿಗಳು ಸಾರ್ ಕೋತಿಗಳು
* 2003 - ಕತ್ತೆಗಳು ಸಾರ್ ಕತ್ತೆಗಳು
* 2004 - ಲವ್
* 2006 - ಮೋಹಿನಿ 9886788888

English summary
Karnataka Government has appointed Veteran Producer and Director S.V.Rajendra Singh Babu as President for the Karnataka Chalanachitra Academy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada