For Quick Alerts
  ALLOW NOTIFICATIONS  
  For Daily Alerts

  ಬಾರದ ಲೋಕಕ್ಕೆ ಪಯಣಿಸಿದ ಕಾಶಿನಾಥ್: ದುಃಖತಪ್ತರಾದ ಸಾರಾ ಗೋವಿಂದು

  By ಯಶಸ್ವಿನಿ.ಎಂ.ಕೆ.
  |

  ಮೈಸೂರು, ಜನವರಿ 18: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅವರ ನಿಧನಕ್ಕೆ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಸಂತಾಪ ಸೂಚಿಸಿದ್ದಾರೆ. ''ಕಾಶಿನಾಥ್ ಸ್ನೇಹಜೀವಿ, ಕನ್ನಡ ಚಿತ್ರರಂಗದ ಆಸ್ತಿ. ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ'' ಎಂದು ಸಾ.ರಾ.ಗೋವಿಂದು ಪ್ರತಿಕ್ರಿಯೆ ನೀಡಿದರು.

  ''ಕಾಶೀನಾಥ್ ಅವರು ನಗುನಗುತಾ ಮಾತನಾಡಿಸುತ್ತಿದ್ದರು. ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಠಿಸಿದವರು. ಜತೆಗೆ ಹೊಸಬರಿಗೆ ಅವಕಾಶವನ್ನು ಕೊಡುತ್ತಿದ್ದರು. ಅವರ ಗರಿಡಿಯಲ್ಲಿ ಬೆಳೆದ ಎಷ್ಟೋ ಕಲಾವಿದರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಕೆಲವು ಬಾರಿ ವಿರೋಧ ಬಂದರೂ ಅದಕ್ಕೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಒಟ್ಟಾರೆ ಅಪ್ಪಟ ಕನ್ನಡ ಚಿತ್ರ ನಿರ್ದೇಶಕ ನಟನನ್ನು ನಾವು ಕಳೆದುಕೊಂಡಿದ್ದೇವೆ'' ಎಂದು ಸಾ.ರಾ ಗೋವಿಂದು ವಿಷಾದ ವ್ಯಕ್ತಪಡಿಸಿದರು.

  ಚಿತ್ರರಂಗದಿಂದ ಟ್ವಿಟ್ಟರ್ ನಲ್ಲಿ ಕಾಶಿನಾಥ್ ಗೆ ಅಶ್ರುತರ್ಪಣ

  ನಟ ಕಾಶೀನಾಥ್ ಅಗಲಿಕೆ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಸುರೇಶ್ ಹೆಬ್ಳಿಕರ್, ''ವಿಮರ್ಶಕರೊಬ್ಬರು ನಟ ಕಾಶೀನಾಥ್ ಚಿತ್ರಗಳನ್ನು ಬೆಸ್ಟ್ ಎಂದಿದ್ದರು. ಅವರು ಮೌನಿ ಮನುಷ್ಯ, ಅಗತ್ಯವಿದ್ದಷ್ಟು ಮಾತ್ರ ಮಾತನಾಡುತ್ತಿದ್ದರು. ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು'' ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

  English summary
  Veteran Kannada Actor, Director Kashinath passed away in Bengaluru today (January 18th). KFCC President Sa Ra Govindu expressed his condolences to Kashinath.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X