For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಅವರನ್ನ ಭೇಟಿ ಮಾಡಿದ ಸಾರಾ ಗೋವಿಂದು

  By Bharath Kumar
  |

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನ ಭೇಟಿ ಮಾಡಿದ್ದಾರೆ. ಸಾರಾ ಗೋವಿಂದು ಅವರು ರಜನಿಯನ್ನ ಯಾಕೆ ಭೇಟಿ ಮಾಡಿದರು ಎಂಬುದು ಕಾಡುವ ಪ್ರಶ್ನೆ. ಸಾರಾ ಗೋವಿಂದು ಮಗನ ಮದುವೆಗೆ ರಜನಿಯನ್ನ ಆಹ್ವಾನಿಸಲು ಚೆನ್ನೈನಲ್ಲಿರುವ ರಜನಿ ನಿವಾಸಕ್ಕೆ ಸಾರಾ ಗೋವಿಂದು ಮಂಗಳವಾರ ಹೋಗಿದ್ದರು.

  ಸಾರಾ ಗೋವಿಂದು ಅವರ ಮಗ ಅನೂಪ್ ಸಾರಾ ಗೋವಿಂದು ಹಾಗೂ ಮೇಘನಾ ಅವರ ಮದುವೆ ಇದೇ ಫೆಬ್ರವರಿ 19 ರಂದು ಬೆಂಗಳೂರಿನ ಯಲಹಂಕದಲ್ಲಿ ನಡೆಯಲಿದ್ದು, ಕನ್ನಡ ಚಿತ್ರರಂಗ ಸೇರಿದಂತೆ ತಮಿಳು, ತೆಲುಗಿನ ಹಲವು ಸಿನಿಮಾ ಕಲಾವಿದರು ಮದುವೆಗೆ ಭಾಗಿಯಾಗಲಿದ್ದಾರೆ.

  '2.0', 'ಕಾಲ' ನಂತರ ರಜನಿಕಾಂತ್ ಕೊನೆಯ ಚಿತ್ರ ಘೋಷಣೆ

  ಸಾರಾ ಗೋವಿಂದು ಅವರ ಆಹ್ವಾನವನ್ನ ಸ್ವೀಕರಿಸಿರುವ ರಜನಿಕಾಂತ್, ಮದುವೆಗೆ ಖಂಡಿತಾ ಬರುತ್ತೇನೆ ಎಂದು ಭರವಸೆಯನ್ನೂ ಕೊಟ್ಟಿದ್ದಾರೆ.

  ರಜನಿಕಾಂತ್ ಮಾತ್ರವಲ್ಲದೇ, ತಮಿಳು ನಟ ಶರತ್ ಕುಮಾರ್, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಸೋನಿಯಾ ಅಗರ್ ವಾಲ್ ಸೇರಿದಂತೆ ಹಲವು ಹಿರಿಯ ನಟರನ್ನ ಮದುವೆಗೆ ಆಹ್ವಾನಿಸಲಾಗಿದೆ.

  English summary
  Karnataka Film Chamber President sa ra govindu has meet super star rajinikanth at chennai and he invites rajinikanth to his son's marriage

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X