For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ-ದರ್ಶನ್ ಬಗ್ಗೆ ಸಾಧು ಇಷ್ಟೊಂದು ದೊಡ್ಡ ಮಾತು ಹೇಳಿದ್ದೇಕೆ.?

  |

  ''ದೊಡ್ಡೋರಾಗಬೇಕಂದ್ರೆ ದೊಡ್ಡ ದೊಡ್ಡ ಸವಾಲುಗಳನ್ನ ಎದುರಿಸಲೆಬೇಕು. ಉಪ್ಪಿ, ದರ್ಶನ್ ಜೀವನವೇ ಇದಕ್ಕೆ ಸಾಕ್ಷಿ''....ಹೀಗಂತ ಹೇಳಿದ್ದು ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಸಾಧುಕೋಕಿಲಾ. ಇದಕ್ಕೆ ಅವರು ಉದಾಹರಣೆಯನ್ನ ಕೂಡ ಕೊಟ್ಟಿದ್ದಾರೆ.

  ರಿಯಲ್ ಸ್ಟಾರ್ ಉಪೇಂದ್ರ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಆಧಾರಸ್ತಂಭಗಳಲ್ಲಿ ಪ್ರಮುಖರು. ಇವರಿಬ್ಬರ ಜೊತೆಯಲ್ಲೂ ಸಾಧು ಕೋಕಿಲಾ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ. ಇಬ್ಬರನ್ನ ಬಹಳ ಹತ್ತಿರದಿಂದ ಕಂಡಿರುವ ಸಾಧು, ಇಬ್ಬರ ವೃತ್ತಿಪರತೆ, ಅವರ ಡೆಡಿಕೇಷನ್ ಗೆ ಶಬ್ಬಾಶ್ ಎಂದಿದ್ದಾರೆ.

  'ಉಪೇಂದ್ರ ಅತೃಪ್ತ ವ್ಯಕ್ತಿ' - ಸಾಧು ಕೋಕಿಲ ಕಾಮೆಂಟ್! 'ಉಪೇಂದ್ರ ಅತೃಪ್ತ ವ್ಯಕ್ತಿ' - ಸಾಧು ಕೋಕಿಲ ಕಾಮೆಂಟ್!

  ಅದರಲ್ಲೂ 'ರಕ್ತಕಣ್ಣೀರು' ಮತ್ತು 'ಅನಾಥರು' ಸಿನಿಮಾ ಮಾಡಬೇಕಾದರೇ ಈ ನಟರ ಕೆಲಸ ನೋಡಿ ಸ್ವತಃ ಸಾಧು ಆಶ್ಚರ್ಯವಾಗಿದ್ದರಂತೆ. ಯಾಕಂದ್ರೆ, ಅನಾಥರು ಶೂಟಿಂಗ್ ವೇಳೆ ಉಪ್ಪಿ ರಕ್ತಸುರಿಸಿದ್ದರಂತೆ. ದರ್ಶನ್ ಕೂಡ ನಟನೆ ಅಂತ ಬಂದ್ಮೇಲೆ ಯಾವುದನ್ನೂ ಲೆಕ್ಕಿಸುವುದಿಲ್ಲವಂತೆ. ಈ ಇಬ್ಬರ ಸ್ಟಾರ್ ನಟರ ವ್ಯಕ್ತಿತ್ವವನ್ನ ಸಾಧು ಅವರು ಉದಾಹರಣೆ ಸಮೇತ ಹೇಳಿಕೊಂಡಿದ್ದಾರೆ. ಮುಂದೆ ಓದಿ...

  'ರಕ್ತ ಕಣ್ಣೀರು'ಗಿಂತ ಅನಾಥರು ಕಷ್ಟ

  'ರಕ್ತ ಕಣ್ಣೀರು'ಗಿಂತ ಅನಾಥರು ಕಷ್ಟ

  ಉಪೇಂದ್ರ ಅಭಿನಯಿಸಿದ್ದ 'ರಕ್ತ ಕಣ್ಣೀರು' ಚಿತ್ರಕ್ಕಿಂತ 'ಅನಾಥರು' ಸಿನಿಮಾ ಮಾಡುವಾಗ ತುಂಬಾ ಕಷ್ಟವಾಗಿತ್ತು ಎಂದು ಸಾಧು ಕೋಕಿಲಾ ಹೇಳಿದ್ದರು. ಈ ಎರಡು ಚಿತ್ರಗಳನ್ನ ನಿರ್ದೇಶನ ಮಾಡಿದ್ದು ಇದೇ ಸಾಧು. ದರ್ಶನ್ ಮತ್ತು ಉಪೇಂದ್ರ ಇಬ್ಬರ ಜೊತೆಯೂ ಕೆಲಸ ಮಾಡಿರುವ ಸಾಧು ಮಹಾರಾಜ್ ಇವರಿಬ್ಬರ ವೃತ್ತಿಯ ಬಗ್ಗೆ ಶಬ್ಬಾಶ್ ಎಂದಿದ್ದಾರೆ.

  ಅನಾಥರು : ರೀಮೇಕ್ ಮಾಡಿದ್ರೂ ಹೀಗೇ ಮಾಡಬೇಕು!ಅನಾಥರು : ರೀಮೇಕ್ ಮಾಡಿದ್ರೂ ಹೀಗೇ ಮಾಡಬೇಕು!

  ಉಪ್ಪಿ ಪಕ್ಕ ಯಾರೂ ಕೂರುತ್ತಿರಲಿಲ್ಲ

  ಉಪ್ಪಿ ಪಕ್ಕ ಯಾರೂ ಕೂರುತ್ತಿರಲಿಲ್ಲ

  'ರಕ್ತ ಕಣ್ಣೀರು' ಸಿನಿಮಾ ಮಾಡಬೇಕಾದರೇ, ಉಪೇಂದ್ರ ಅವರಿಗೆ ಮೇಕಪ್ ನೋಡಿ ಅವರ ಪಕ್ಕದಲ್ಲಿ ಯಾರೂ ಕುಳಿತುಕೊಳ್ಳುತ್ತಿರಲಿಲ್ಲ. ಚಿತ್ರದ ನಾಯಕಿ ನಟಿಯಾಗಿದ್ದ ರಮ್ಯಾಕೃಷ್ಣ ಅವರೇ ಉಪ್ಪಿ ಪಕ್ಕದಲ್ಲಿ ಕೂರಲು ಭಯ ಪಡ್ತಿದ್ದರು. ಅಷ್ಟರ ಮಟ್ಟಿಗೆ ಉಪ್ಪಿಗೆ ಆ ಕುಷ್ಠರೋಗದ ಮೇಕಪ್ ಮಾಡಿದ್ವಿ' - ಸಾಧುಕೋಕಿಲಾ

  ಉಪೇಂದ್ರಗೆ 'ಹೀಗೆ ಮಾಡಬೇಡಿ' ಎಂದ '2.0' ನಿರ್ದೇಶಕ ಶಂಕರ್.! ಉಪೇಂದ್ರಗೆ 'ಹೀಗೆ ಮಾಡಬೇಡಿ' ಎಂದ '2.0' ನಿರ್ದೇಶಕ ಶಂಕರ್.!

  'ಅನಾಥರು' ದೃಶ್ಯದಲ್ಲಿ ಏನಾಯಿತು.?

  'ಅನಾಥರು' ದೃಶ್ಯದಲ್ಲಿ ಏನಾಯಿತು.?

  ''ಉಪೇಂದ್ರ ಅವರನ್ನ ಪ್ರತಿದಿನ ಬಿಸಿಲಿನಲ್ಲಿ ನಿಲ್ಲಿಸುತ್ತಿದ್ದೇವೆ. ಸ್ನಾನ ಕೂಡ ಮಾಡುತ್ತಿರಲಿಲ್ಲ. ಯಾಕಂದ್ರೆ, ಅವರ ಪಾತ್ರಕ್ಕೆ ನೋಡಲು ಕಪ್ಪಾಗಿರಬೇಕಿತ್ತು. ವಿಲನ್ ಗಳು ಉಪ್ಪಿಯನ್ನ ಹೊಡೆದು ಕುರಿಯನ್ನ ನೇತು ಹಾಕಿದ ಹಾಗೆ, ಕಂಬಕ್ಕೆ ಉಲ್ಟಾ ನೇತಾಹಾಕುತ್ತಾರೆ. ಕೆಳಗಡೆಯಿಂದ ಟೈರ್ ನ ಟ್ಯೂಬ್ ನಲ್ಲಿ ಹೊಡೆಯಬೇಕಿತ್ತು. ಇದು ನೈಜವಾಗಿ ಮಾಡಲಾಗಿತ್ತು''

  ''ಬರಿ ರೀಮೇಕ್ ಮಾಡ್ತೀರಾ ಯಾಕೆ'' ಎಂದಿದ್ದಕ್ಕೆ ಉಪೇಂದ್ರ ಹೇಳಿದ್ದೇನು ಗೊತ್ತಾ.? ''ಬರಿ ರೀಮೇಕ್ ಮಾಡ್ತೀರಾ ಯಾಕೆ'' ಎಂದಿದ್ದಕ್ಕೆ ಉಪೇಂದ್ರ ಹೇಳಿದ್ದೇನು ಗೊತ್ತಾ.?

  ಉಪ್ಪಿಗೆ ರಕ್ತ ಹೆಪ್ಪುಗಟ್ಟಿತ್ತು

  ಉಪ್ಪಿಗೆ ರಕ್ತ ಹೆಪ್ಪುಗಟ್ಟಿತ್ತು

  ''ಸಂಜೆವರೆಗೂ ಈ ದೃಶ್ಯ ನಡೆದಿತ್ತು. ಶೂಟಿಂಗ್ ಮುಗಿದ ಮೇಲೆ ಉಪ್ಪಿ ಅವರು ಬಂದು, ಸಾಧು ನನಗೆ ಯಾಕೋ ಬೆನ್ನು ನೋವುತ್ತಿದೆ, ಇರಿ ನೋಡ್ತೀನಿ ಅಂತ ನೋಡಿದ್ರು. ಆಮೇಲೆ ಶರ್ಟ್ ಬಿಚ್ಚಿ ನೋಡಿದ್ರೆ, ಇಡೀ ಬೆನ್ನು ಪೂರ್ತಿ ರಕ್ತವಾಗಿತ್ತು. ಆದ್ರೂ, ಉಪೇಂದ್ರ ಅವರು ಪರವಾಗಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನೊಂದು ದೃಶ್ಯದಲ್ಲಿ ಉಪೇಂದ್ರ ಅವರಿಗೆ ನಿಜವಾಗಲೂ ಪೊರಕೆಯಿಂದ ಹೆಂಗಸೊಬ್ಬಳು ಹೊಡೆದಿದ್ದಳು. ಒಬ್ಬ ಕಲಾವಿದ ಅಂದ್ರೆ ಇದು....''

  ಡೈರೆಕ್ಷನ್ ಮಾಡಿ ಅಂತಿದ್ದವರಿಗೆ 'ಮೆಗಾ ಬ್ರೇಕಿಂಗ್' ನೀಡಿದ ಉಪೇಂದ್ಡೈರೆಕ್ಷನ್ ಮಾಡಿ ಅಂತಿದ್ದವರಿಗೆ 'ಮೆಗಾ ಬ್ರೇಕಿಂಗ್' ನೀಡಿದ ಉಪೇಂದ್

  ಗೋಣಿಚೀಲದಲ್ಲಿ ದರ್ಶನ್.!

  ಗೋಣಿಚೀಲದಲ್ಲಿ ದರ್ಶನ್.!

  'ಒಂದು ಗೋಣಿ ಚೀಲದಲ್ಲಿ ಕಟ್ಟಿ ದರ್ಶನ್ ಅವರನ್ನ ಬಿಸಾಕಬೇಕಿತ್ತು. ಅವರ ಹೈಟಿಗೆ ಒಂದು ಗೋಣಿ ಚೀಲದಲ್ಲಿ ಕಟ್ಟುವುದು ಕಷ್ಟವಾಗ್ತಿತ್ತು. ಆದ್ರು, ಕೈಕಾಲುಗಳನ್ನ ಮಡಿಚಿಕೊಂಡು ಹೇಗೋ ಮಾಡಿದ್ರು. ಆಮೇಲೆ ಅವರ ಮುಖಕ್ಕೆ ಸಕ್ಕರೆ ನೀರು ಹಾಕಿ, ಅವರನ್ನ ರಸ್ತೆಯಲ್ಲಿ ಬಿಟ್ಟು ಕಾಯ್ತಾ ಕೂತಿದ್ವಿ. ಯಾಕಂದ್ರೆ, ದರ್ಶನ್ ಅವರ ದೇಹದ ಮೇಲೆ ಇರುವೆಗಳು, ನೋಣಗಳು ಬಂದು ಅವರ ಮೇಲೆ ಕೂರಬೇಕಿತ್ತು. ಆಗ ಶಾರ್ಟ್ ಓಕೆ ಆಗಿತ್ತು. ಅವರ ಡೆಡಿಕೇಷನ್ ನೋಡಿದ್ರೆ, ಅದು ನಿಜವಾದ ಕಲೆ' ಎನ್ನಬಹುದು ಎಂದು ಸಾಧು ಮೆಚ್ಚುಗೆ ವ್ಯಕ್ತಪಡಿಸಿದ್ರು.

  ದರ್ಶನ್ ಬೇಸರ : ಅಯ್ಯೋ..ಅಂತ ಕನ್ನಡ ಸಿನಿಮಾಗೆ ಬರ್ತಾರೆದರ್ಶನ್ ಬೇಸರ : ಅಯ್ಯೋ..ಅಂತ ಕನ್ನಡ ಸಿನಿಮಾಗೆ ಬರ್ತಾರೆ

  English summary
  Kannada actor, music director sadhu kokila reveals interesting fact about darshan and upendra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X