»   » ಸಮಂತಾ-ನಾಗಚೈತನ್ಯ ಮದುವೆಯ ಎಕ್ಸ್ ಕ್ಲೂಸಿವ್ ಫೋಟೋ.!

ಸಮಂತಾ-ನಾಗಚೈತನ್ಯ ಮದುವೆಯ ಎಕ್ಸ್ ಕ್ಲೂಸಿವ್ ಫೋಟೋ.!

Posted By:
Subscribe to Filmibeat Kannada

ಟಾಲಿವುಡ್ ತಾರಾ ಜೋಡಿ ಅಕ್ಕಿನೇನಿ ನಾಗಚೈತನ್ಯ ಮತ್ತು ನಟಿ ಸಮಂತಾ ಅವರ ವಿವಾಹ ಇಂದು (ಅಕ್ಟೋಬರ್ 6) ಗೋವಾದಲ್ಲಿ ನೆರವೇರಲಿದೆ.

ವರ್ಷದ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಮಂತಾ ಮತ್ತು ನಾಗಚೈತನ್ಯ ಗುರು-ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಪ್ರವೇಶಿಸುತ್ತಿದ್ದಾರೆ. ಈಗಾಗಲೇ ಇವರಿಬ್ಬರ ಅದ್ಧೂರಿ ವಿವಾಹ ಮಹೋತ್ಸವಕ್ಕೆ ಗೋವಾ ಕಡಲತೀರ ಸಿದ್ದವಾಗಿದ್ದು, ಸ್ವರ್ಗದಂತೆ ಕಂಗೊಳಿಸುತ್ತಿದೆ.

ಸ್ಯಾಮ್ ಮತ್ತು ಚೈ ಮದುವೆಗೂ ಮುಂಚೆ ಕೆಲವು ಫೋಟೋಗಳನ್ನ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂದೆ ನೋಡಿ.....

'ಮದುಮಗ'ನ ಫಸ್ಟ್ ಲುಕ್

ನಟ ನಾಗಚೈತನ್ಯ ಅವರು ಮದುಮಗನ ಗೆಟಪ್ ನಲ್ಲಿ ಕಂಗೊಳಿಸುತ್ತಿರುವ ಫೋಟೋವನ್ನ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಹಂಚಿಕೊಂಡಿದ್ದಾರೆ. ಅಪ್ಪ ನಾಗಾರ್ಜುನ ಮತ್ತು ಸೋದರ ಮಾವ ನಟ ವೆಂಕಟೇಶ್ ಅವರ ಜೊತೆ ನಾಗಚೈತನ್ಯ ಫೋಸ್ ಕೊಟ್ಟಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿತ್ರಗಳು: ಟಾಲಿವುಡ್ ಪ್ರೇಮಪಕ್ಷಿ ಸಮಂತಾ-ನಾಗಚೈತನ್ಯ ನಿಶ್ಚಿತಾರ್ಥ

ಸ್ವರ್ಗದಂತಾಗಿದೆ ಗೋವಾ ಕಡಲತೀರ

ಸಮಂತಾ ಮತ್ತು ನಾಗಚೈತನ್ಯ ಅವರ ವಿವಾಹ ಕಾರ್ಯಕ್ರಮಕ್ಕೆ ಗೋವಾ ಕಡಲತೀರದಲ್ಲಿ ವಿಶೇಷವಾದ ಸೆಟ್ ಹಾಕಲಾಗಿದ್ದು, ಸ್ವರ್ಗದಂತೆ ಸಿಂಗರಿಸಲಾಗಿದೆ. ಅದರ ಫೋಟೋಗಳನ್ನ ಕೂಡ ಸಮಂತಾ ಪೋಸ್ಟ್ ಮಾಡಿದ್ದಾರೆ.

ಸಮಂತಾ-ನಾಗಚೈತನ್ಯ ಮದುವೆ ಮುಗಿದು ಹೋಗಿದೆಯಂತೆ.!

ಶುಕ್ರವಾರ ಹಿಂದೂ ಸಂಪ್ರದಾಯದ ಮದುವೆ

ಸಮಂತಾ ಮತ್ತು ನಾಗಚೈತನ್ಯ ಅವರ ವಿವಾಹ ಶುಕ್ರವಾರ (ಅಕ್ಟೋಬರ್ 6) ರಂದು ನಡೆಯಲಿದ್ದು, ಹಿಂದೂ ಸಂಪ್ರದಾಯದ ಪ್ರಕಾರ ನೆರವೇರಲಿದೆ.

ಶನಿವಾರ ಕ್ರೈಸ್ತ ಧರ್ಮದ ಪ್ರಕಾರ ಮದುವೆ

ಶುಕ್ರವಾರ ಹಿಂದೂ ಸಂಪ್ರದಾಯದಲ್ಲಿ ವಿವಾಹವಾದರೇ, ಶನಿವಾರ (ಅಕ್ಟೋಬರ್ 7) ಕ್ರೈಸ್ತ ಧರ್ಮದ ಪ್ರಕಾರ ಸ್ಯಾಮ್ ಮತ್ತು ನಾಗ್ ಮದುವೆ ನಡೆಯಲಿದೆ.

ಗೋವಾದ ಕಡಲ ಕಿನಾರೆಯಲ್ಲಿ ಮದುವೆ ಆಗ್ತಾರಂತೆ ಸಮಂತಾ-ನಾಗ ಚೈತನ್ಯ

ಹೈದರಾಬಾದ್‌ನಲ್ಲಿ ಆರತಕ್ಷತೆ

ಗೋವಾದಲ್ಲಿ ಖಾಸಗಿಯಾಗಿ ನಡೆಯುತ್ತಿರುವ ಮದುವೆಯ ನಂತರ ಅಕ್ಟೋಬರ್ 15 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನೆರವೇರಲಿದೆ. ಇಲ್ಲಿ ಅಭಿಮಾನಿಗಳಿಗೆ ಮತ್ತು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡುವ ಸಾಧ್ಯತೆ ಇದೆ.

ನ್ಯೂಯಾರ್ಕ್ ನಲ್ಲಿ ಹನಿಮೂನ್

ಈ ಮೊದಲೇ ನಿರ್ಧರಿಸಿದಂತೆ ಹನಿಮೂನ್ ಗಾಗಿ ನ್ಯೂಯಾರ್ಕ್ ಗೆ ತೆರೆಳಲಿದೆ ನವಜೋಡಿ. ಯಾಕಂದ್ರೆ, ಇವರಿಬ್ಬರು ಮೊದಲ ಸಿನಿಮಾ 'ಎ ಮಾಯೇ ಚೇಸಾವೆ' ಆರಂಭವಾಗಿದ್ದೇ ನ್ಯೂಯಾರ್ಕ್ ನಲ್ಲಿ. ಹೀಗಾಗಿ, ಆ ನೆನಪಿಗೋಸ್ಕರ ಹನಿಮೂನ್ ಪ್ಲಾನ್ ಕೂಡ ಅಲ್ಲೇ ಮಾಡಿದ್ದಾರೆ.

English summary
Samantha Ruth Prabhu and Naga Chaitanya are all set to tie the knot in a grand wedding ceremony in Goa on Today (october 6th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada