For Quick Alerts
  ALLOW NOTIFICATIONS  
  For Daily Alerts

  ಸಂಚಾರಿ ಥಿಯೇಟರ್ ರಂಗಿನ ದಶಮಾನೋತ್ಸವ

  By Rajendra
  |

  ರಂಗಭೂಮಿಯಲ್ಲಿ ಈಗಾಗಲೇ ಸಾಧಿಸಿರುವುದನ್ನು ಮೆಲಕು ಹಾಕುತ್ತ, ಇನ್ನೂ ಸಾಧಿಸಬಹುದಾದದ್ದನ್ನು ಕನಸು ಕಟ್ಟುವ, ಹೊಸ ಹೊಸ ಅನುಭವಗಳಿಗೆ ತೆರೆದುಕೊಳ್ಳಬೇಕೆನ್ನುವ, ಎಲ್ಲ ಸಾಧ್ಯತೆಗಳ ಬಗ್ಗೆಯೂ ಇಣುಕಿ ನೋಡಬೇಕೆನ್ನುವ ಉತ್ಸಾಹದ ಮನಸ್ಸುಗಳಿಗೆ ಕೆಲಸ ಮಾಡಲು ಒಂದು ಖಾಲಿ ರಂಗಸ್ಥಳ, ಸಂಚಾರಿ ಥಿಯೇಟರ್.

  2004 ಆಗಸ್ಟ್ 3 ರಂದು ಹೆಚ್.ಎಸ್. ವೆಂಕಟೇಶ ಮೂರ್ತಿ ಅವರು ರಚಿಸಿದ "ಉರ್ಮಿಳಾ" ನಾಟಕದ ಮೂಲಕ ಸಂಚಾರಿ ಥಿಯೇಟರ್ ತನ್ನ ರಂಗ ಸಾಹಸವನ್ನು ಪ್ರಾರಂಭಿಸಿತು. ರಂಗಾಯಣ ರಘು, ಮಂಗಳಾ ಎನ್ ಮತ್ತು ಗಜಾನನ ಟಿ ನಾಯ್ಕ್ ಅವರು ಪ್ರಾರಂಭಿಸಿದ ಸಂಚಾರಿ ಥಿಯೇಟರ್, ರಂಗಭೂಮಿಗೆ ಹಾಗೂ ಚಲನಚಿತ್ರ ಕ್ಷೇತ್ರಕ್ಕೆ ಹಲವಾರು ಉದಯೋನ್ಮಕ ಕಲಾವಿದರನ್ನು ನೀಡಿದೆ.

  ರಂಗಭೂಮಿಯಲ್ಲಿ ಹೊಸ ಪ್ರಯೋಗಗಳನ್ನು ಹುಟ್ಟು ಹಾಕುವ ಉದ್ದೇಶದಿಂದ ಪ್ರಾರಂಭವಾದ ಹವ್ಯಾಸಿ ತಂಡ, ಹಲವಾರು ಪ್ರಯೋಗಗಳನ್ನು ಮಾಡುವ ಮೂಲಕ ರಂಗ ಪ್ರೇಮಿಗಳ ಹೃದಯದಲ್ಲಿ ಸ್ಥಾನವನ್ನು ಗಿಟ್ಟಿಸಿದೆ.

  ಕಳೆದೊಂದು ದಶಕದಲ್ಲಿ ಸಂಚಾರಿ ಥಿಯೇಟರ್ ಸಾಧಿಸಿದ್ದು ಬಹಳಷ್ಟು. ಕರ್ನಾಟಕ ನಾಟಕ ಅಕಾಡೆಮಿ ಜೊತೆಗೂಡಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ. ರಂಗಭೂಮಿಗೆ ಹೊಸಬರ ಬರುವಿಕೆಗಾಗಿಯೇ "ಪೂರ್ವರಂಗ" ಕಾರ್ಯಾಗಾರವನ್ನು ಮತ್ತು ಪ್ರತಿ ವರುಷ ಬಿ.ವಿ.ಕಾರಂತ ಮತ್ತು ಪ್ರೇಮಾ ಕಾರಂತರ ನೆನಪಿನಲ್ಲಿ ಮಕ್ಕಳಿಗಾಗಿ "ವಾರಾಂತ್ಯ ರಂಗಶಿಬಿರ"ವನ್ನು, ಪ್ರತಿ ಬೇಸಿಗೆಯಲ್ಲಿ ಮಕ್ಕಳಿಗಾಗಿ ಬೇಸಿಗೆ ರಂಗಶಿಬಿರವನ್ನು ಹಮ್ಮಿಕೊಳ್ಳುತ್ತದೆ. ಇದಕ್ಕೆಲ್ಲಾ ಬೆನ್ನುಲುಬಾಗಿ ದುಡಿದವರು ಸಂಚಾರಿಯ ಸಂಸ್ಥಾಪಕರಾದ ಮಂಗಳಾ ಎನ್, ರಂಗಾಯಣ ರಘು ಮತ್ತು ಗಜಾನನ ಟಿ ನಾಯ್ಕ್.

  ಆಗಸ್ಟ್ 3 ರಂದು ದಶಮಾನೋತ್ಸವಕ್ಕೆ ಕಾಲಿಟ್ಟ ಸಂಚಾರಿ ಥಿಯೇಟರ್ ರಂಗ ಪ್ರೇಮಿಗಳಿಗೆ ವೈವಿಧ್ಯಮಯ ನಾಟಕಗಳ ಪ್ರದರ್ಶನಗಳನ್ನು ನೀಡುವ ಉದ್ದೇಶದಿಂದ "ಸಂಚಾರಿ ಸಡಗರ"ವನ್ನು ಆಯೋಜಿಸಿದೆ. ಆಗಸ್ಟ್ 12 ರಿಂದ 19 ರವರೆಗಿನ 8 ದಿನದಲ್ಲಿ 10 ನಾಟಕಗಳ 12 ಪ್ರದರ್ಶನಗಳನ್ನು ಹಮ್ಮಿಕೊಂಡಿದೆ.

  ಆಗಸ್ಟ್ 12 ರಂದು ರಂಗಶಂಕರದಲ್ಲಿ 'ಕೈಲಾಸಂ ಕೀಚಕ - ಎ ಲವ್ ಸ್ಟೋರಿ' ನಾಟಕದಿಂದ ಪ್ರಾರಂಭವಾಗುವ ರಂಗಪ್ರಯೋಗ ಆಗಸ್ಟ್ 19 ರ ಸಂಜೆ ಕಲಾಸೌಧದಲ್ಲಿ ನಡೆಯುವ 'ಊರ್ಮಿಳಾ' ನಾಟಕದೊಂದಿಗೆ ಸಮಾರೋಪಗೊಳ್ಳಲಿದೆ. ಆರು ದಿನ ರಂಗಶಂಕರದಲ್ಲಿ ಜರುಗುವ ಈ ಉತ್ಸವದಲ್ಲಿ ಶಾಲೆಯ ಮಕ್ಕಳನ್ನು ಶಾಲೆಯಿಂದಲೇ ರಂಗಮಂದಿರದೆಡೆಗೆ ಕರೆದುಕೊಂಡು ಬರುವಂತಹ ಒಂದು ಸಂಸ್ಕೃತಿಗೆ ಶಾಲೆಗಳು ತೆರೆದುಕೊಳ್ಳಲಿ ಎನ್ನುವ ಆಶಯದೊಂದಿಗೆ 13 ಮತ್ತು 14 ರಂದು ಬೆಳಗ್ಗೆ 11 ಗಂಟೆಗೆ ಮಕ್ಕಳಿಗಾಗಿ ಎರಡು ನಾಟಕಗಳನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ.

  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಚಾರಿ ಥಿಯೇಟರ್ ಸಂಸ್ಥಾಪಕ ಹಾಗೂ ಖ್ಯಾತ ಚಲನಚಿತ್ರ ನಟ ರಂಗಾಯಣ ರಘು, "ಸಂಚಾರಿ ತಂಡ ದಶಕಗಳಿಂದ ರಂಗಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಹಲವಾರು ರಂಗ ಕಲಾವಿದರನ್ನು ಪರಿಚಯಿಸಿದ ಖ್ಯಾತಿ ಕೂಡಾ ನಮಗಿದೆ. ದಶಮಾನೋತ್ಸವದ ಸಂಧರ್ಭದಲ್ಲಿ 8 ದಿನಗಳಲ್ಲಿ 10 ನಾಟಕಗಳ 12 ಪ್ರದರ್ಶನಗಳನ್ನು ಆಯೋಜಿಸಿದ್ದು ಇದು ಕೂಡಾ ವಿಶೇಷವಾಗಿದೆ" ಎಂದರು.

  ಸಂಚಾರಿ ಥಿಯೇಟರ್ ಸಂಸ್ಥಾಪಕಿ ಮಂಗಳಾ ಎನ್ ಮಾತನಾಡಿ, "ಒಂದು ಹವ್ಯಾಸಿ ರಂಗ ತಂಡ 10 ನಾಟಕಗಳನ್ನು ಇಷ್ಟು ಕಡಿಮೆ ಸಮಯದಲ್ಲಿ ಪ್ರದರ್ಶಿಸುವುದು ಒಂದು ವಿಶೇಷವೇ ಸರಿ. ಈ ರೀತಿಯ ವಿಶಿಷ್ಟ ಉತ್ಸವದ ಮೂಲಕ ವೈವಿಧ್ಯಮಯ ನಾಟಕಗಳನ್ನು ರಂಗಪ್ರೇಮಿಗಳಿಗೆ ನೀಡಿ ರಸದೌತಣ ಉಣಬಡಿಸುವುದು ನಮ್ಮ ಗುರಿಯಾಗಿದೆ" ಎಂದರು.

  ಸಂಚಾರಿ ಥಿಯೇಟರ್ ಮತ್ತೊಬ್ಬ ಸಂಸ್ಥಾಪಕರಾದ ಗಜಾನನ ಟಿ ನಾಯ್ಕ್ ಮಾತನಾಡಿ, "ನಮ್ಮ ತಂಡದಲ್ಲಿ ತರಬೇತಿ ಪಡೆಯುವವರು ಮುಂದಿನ ದಿನಗಳಲ್ಲಿ ನಾಟಕಗಳನ್ನು ನಿರ್ದೇಶಿಸುವ ಅವಕಾಶವನ್ನು ನೀಡುತ್ತೇವೆ. ಈ ಮೂಲಕ ತಂಡದ ಸದಸ್ಯರನ್ನು ಸರ್ವತೋಮುಖವಾಗಿ ರಂಗಪ್ರಯೋಗಗಳಿಗೆ ಸಜ್ಜು ಮಾಡುವುದು ನಮ್ಮ ಉದ್ದೇಶ ಎಂದರು.

  ಸಂಚಾರಿ ಥಿಯೇಟರ್ ತಂಡದ ಕಲಾವಿದರು

  ಸಂಚಾರಿ ವಿಜಯ್, ವಿನಯ್ ಕೃಷ್ಣಸ್ವಾಮಿ, , ಅರವಿಂದ್ ಕುಪ್ಳೀಕರ್, ಮಾಲತೇಶ್, ಚಂದ್ರಕೀರ್ತಿ, ಗಣಪತಿ ಗೌಡ, ಕೆ.ಶ್ರೀನಿವಾಸ್, ನಾಗರಾಜ ಸೋಮಯಾಜಿ, ಕಾರ್ತೀಕ್, ಮಹೇಶ ಕುಮಾರ, ರವಿ, ಅಜಯ್ ರಾಜ್, ಶೇಷಮೂರ್ತಿ, ಧನುಷ್, ಗಿರೀಶ್., ಸಂದೀಪ್ ಜೈನ್,ಕಾರ್ತೀಕ್.ವಿ.ಎನ್, ಪ್ರಸನ್ನ ಶೆಟ್ಟಿ, ಶ್ರೀನಿವಾಸ, ಯುವರಾಜ್ ಮುಝಾಮಿಲ್ ರಾಹುಲ್ ಖಾನ್, ನಾಗರಾಜ,ವಿ, ಶಶಿಕುಮಾರ್, ಶ್ರೀಮಂತ್, ನಿರ್ಮಲ, ಪವಿತ್ರ, ಉಜ್ವಲಾ, ಸುರಭಿ, ದುರ್ಗಾ, ಸೌಮ್ಯ, ಸೌಮ್ಯಕುಮಾರಿ, ವಾಸವಿ, ಕಲ್ಪನಾ ನಾಗಾನಾಥ್. ನಿಶಾ, ಸತ್ಯಶ್ರೀ, ಅಪೂರ್ವ ಬರಗೂರು, ಚುಕ್ಕಿ, ಶೋಭ, ಅಂಕಿತಾ, ನಯನಾ

  ವಿನ್ಯಾಸಗಾರರು ಮತ್ತು ನಿರ್ದೇಶಕರು

  ಗಜಾನನ.ಟಿ.ನಾಯ್ಕ, ಎಸ್.ರಾಮನಾಥ ಅರುಣ್ ಸಾಗರ್, ಸಂಚಾರಿ ವಿಜಯ್, ಕಿರಣ್.ಟಿ.ಸಿ, ಶಿವಕುಮಾರ್ ಸುಣಗಾರ್, ಶಶಿಧರ್ ಅಡಪ, ಗಣಪತಿ ಗೌಡ, ಚಂದ್ರಕೀರ್ತಿ, ಮಾಲತೇಶ್ ಬಡಿಗೇರ್, ವಿನಯ್ ಚಂದ್ರ, ಅರವಿಂದ್ ಕುಪ್ಳೀಕರ್, ಕೃಷ್ಣಕುಮಾರ್ ನಾರ್ಣಕಜೆ, ಮುಸ್ತಾಫ, ಎಸ್.ಕೆ.ರಾಘವೇಂದ್ರ, ಮುದ್ದಣ್ಣ, ಅನಿಲ್,ಜಗದೀಶ್,

  ಸಂಚಾರಿಯ ಸಂಗಡಿಗರು

  ರತ್ನ, ಶ್ರುತಿ ಭಿಡೆ, ರಾಘವೇಂದ್ರ, ಪ್ರಕಾಶ್, ಕೃಷ್ಣಮೂರ್ತಿ, ಹರ್ಷ, ಕಾರ್ತೀಕ್,ಪ್ರವೀಣ್, ಪ್ರವೀಣ್ ರಾಜ, ದಿಗ್ವಿಜಯ್,ಅರ್ಜುನ್, ರಚನಾ, ವರುಣ್,ರಾಕೇಶ್,ಕಾರ್ತೀಕ್, ಶ್ರೀನಿಧಿ.

  English summary
  SANCHARI THEATER FESTIVAL – SANCHARI SADAGARA”, a new experiment which will showcase 10 plays by one team in 8 Days. Which will be held between August 12th & August 19th, 2014. Co – FOUNDER OF SANCHARI THEATER N. MANGALA & GAJANA T NAIK WERE PRESENT ON THE OCCASION.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X