For Quick Alerts
  ALLOW NOTIFICATIONS  
  For Daily Alerts

  'ಪೈಲ್ವಾನ್' ಮೂಲಕ ಬಾಲಿವುಡ್ ಪ್ರವೇಶಿಸಿದ ಸಂಜಿತ್ ಹೆಗ್ಡೆ

  |

  'ಕಣ್ಣು ಮಣಿಯೇ ಕಣ್ಣು ಹೊಡಿಯೇ..' ಎಂದು 'ಪೈಲ್ವಾನ್' ಸುದೀಪ್ ಹಾಡು ಹಾಡುತ್ತಿದ್ದಾರೆ. ಈ ಹೊಸ ಹಾಡಿನಲ್ಲಿ ಸಂಜಿತ್ ಹೆಗ್ಡೆ ಧ್ವನಿ ಇದೆ.

  ಮೊದಲ ಥೀಮ್ ಸಾಂಗ್ ಬಳಿಕ 'ಪೈಲ್ವಾನ್' ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಕಿಚ್ಚನ ರೊಮ್ಯಾಂಟಿಕ್ ಹಾಡು ಇದಾಗಿದ್ದು, ಯೂ ಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

  ಸ್ಯಾಂಡಲ್ ವುಡ್ ನ ಯುವ ಹಾಗೂ ಪ್ರತಿಭಾವಂತ ಹಾಡುಗಾರ ಸಂಜಿತ್ ಹೆಗ್ಡೆ ಈ ಹಾಡನ್ನು ಹಾಡಿದ್ದಾರೆ. ಎಂದಿನಂತೆ ತಮ್ಮ ಧ್ವನಿಯ ಮೂಲಕ ಹಾಡಿಗೆ ಹೊಸ ರೂಪ ನೀಡಿದ್ದಾರೆ. ಸಿಕ್ಕಾಪಟ್ಟೆ ಸ್ವೀಟ್ ಆಗಿ ಈ ಹಾಡನ್ನು ಹಾಡಿದ್ದಾರೆ.

  'ಬಂದ ನೋಡು ಪೈಲ್ವಾನ್' : ಚಿತ್ರದ ಮೊದಲ ಹಾಡು ರಿಲೀಸ್ 'ಬಂದ ನೋಡು ಪೈಲ್ವಾನ್' : ಚಿತ್ರದ ಮೊದಲ ಹಾಡು ರಿಲೀಸ್

  ಇನ್ನೊಂದು ವಿಶೇಷ ಏನೆಂದರೆ, ಈ ಹಾಡಿನ ಮೂಲಕ ಸಂಜಿತ್ ಹೆಗ್ಡೆ ಬಾಲಿವುಡ್ ಹಾಗೂ ಮಾಲಿವುಡ್ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದಾರೆ...

  ಐದೂ ಭಾಷೆಯ ಹಾಡಿಗೆ ಸಂಜಿತ್ ಧ್ವನಿ

  ಐದೂ ಭಾಷೆಯ ಹಾಡಿಗೆ ಸಂಜಿತ್ ಧ್ವನಿ

  'ಪೈಲ್ವಾನ್' ಸಿನಿಮಾದ 'ಕಣ್ಣು ಮಣಿಯೇ..ಕಣ್ಣು ಹೊಡೆಯೇ..' ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಕನ್ನಡದಲ್ಲಿ ಮಾತ್ರವಲ್ಲದೆ ಎಲ್ಲ ಭಾಷೆಗಳಲ್ಲಿ ಸಂಜಿತ್ ಹೆಗ್ಡೆ ಹಾಡಿದ್ದಾರೆ. ಹಾಡಿನ ಟ್ಯೂಬ್ ಒಂದೇ ಆಗಿದ್ದು, ಸಾಹಿತ್ಯ ಮಾತ್ರ ಬದಲಾಗಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಹಾಡನ್ನು ಸಂಜಿತ್ ಹಾಡಿದ್ದಾರೆ.

  ಮೊದಲ ಬಾರಿಗೆ ಹಿಂದಿ ಹಾಡು

  ಮೊದಲ ಬಾರಿಗೆ ಹಿಂದಿ ಹಾಡು

  ಸೌತ್ ಇಂಡಿಯಾದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಸಂಜಿತ್ ಹೆಗ್ಡೆ 'ಪೈಲ್ವಾನ್' ಹಾಡಿನ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದಾರೆ. ಈ ಹಿಂದೆ, ಕನ್ನಡ, ತಮಿಳು ಹಾಗೂ ತೆಲುಗು ಚಿತ್ರಗಳ ಹಾಡುಗಳಿಗೆ ಸಂಜಿತ್ ಧ್ವನಿ ನೀಡಿದ್ದರು. ಇನ್ನು ಮಲೆಯಾಳಂ ನಲ್ಲಿಯೂ ಇದೇ ಮೊದಲ ಬಾರಿಗೆ ಸಂಜಿತ್ ಗಾನ ಯಾನ ಪ್ರಾರಂಭ ಆಗಿದೆ.

  ಕೋಟೆನಾಡಿನಲ್ಲಿ ಮೊಳಗಲಿದೆ 'ಪೈಲ್ವಾನ್' ಹಾಡುಗಳು ಕೋಟೆನಾಡಿನಲ್ಲಿ ಮೊಳಗಲಿದೆ 'ಪೈಲ್ವಾನ್' ಹಾಡುಗಳು

  ಮತ್ತೊಂದು ದೊಡ್ಡ ಅವಕಾಶ ನೀಡಿದ ಜನ್ಯ

  ಮತ್ತೊಂದು ದೊಡ್ಡ ಅವಕಾಶ ನೀಡಿದ ಜನ್ಯ

  'ಸರಿಗಮಪ' ಕಾರ್ಯಕ್ರಮದಲ್ಲಿ ತಮ್ಮ ಡಿಫರೆಂಟ್ ಶೈಲಿಯ ಹಾಡಿನ ಮೂಲಕ ಸಂಚಿತ್ ಹೆಗ್ಡೆ ಫೇಮಸ್ ಆಗಿದ್ದರು. ಅದೇ ಕಾರ್ಯಕ್ರಮದ ತೀರ್ಪುಗಾರರಾಗಿದ್ದ ಅರ್ಜುನ್ ಜನ್ಯ, ಮುಂದೆ ಸಂಚಿತ್ ಗೆ ಒಳ್ಳೆ ಒಳ್ಳೆಯ ಅವಕಾಶ ನೀಡಿದರು. ಇದೀಗ 'ಪೈಲ್ವಾನ್' ಸಿನಿಮಾಗೆ ಸಹ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ತಮ್ಮ ಹುಡುಗನಿಗೆ ಐದೂ ಭಾಷೆಗಳಲ್ಲಿ ಹಾಡುವ ಅವಕಾಶ ಕೊಟ್ಟಿದ್ದಾರೆ.

  ಇದೇ ಮೊದಲ ಬಾರಿಗೆ ಸುದೀಪ್ ಗೆ ಹಾಡು

  ಇದೇ ಮೊದಲ ಬಾರಿಗೆ ಸುದೀಪ್ ಗೆ ಹಾಡು

  ಸಂಜಿತ್ ಕನ್ನಡದಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಈ ಹಿಂದೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಗಣೇಶ್, ಸತೀಶ್ ನೀನಾಸಂ ಸಿನಿಮಾಗಳಲ್ಲಿ ಸಂಜಿತ್ ಧ್ವನಿ ನೀಡಿದ್ದರು. ಆದರೆ, ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಸಿನಿಮಾಗೆ ಸಂಚಿತ್ ಹಾಡುವ ಅದೃಷ್ಟ ಸಿಕ್ಕಿದೆ.

  English summary
  Siger Sanchith Hegde has sung Pailwan songs in all 5 languages.
  Tuesday, July 16, 2019, 20:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X