For Quick Alerts
  ALLOW NOTIFICATIONS  
  For Daily Alerts

  ಶಿಲ್ಪಾ ಗಣೇಶ್ ಹುಟ್ಟುಹಬ್ಬದಲ್ಲಿ ತಾರೆಯರ ರಂಗು

  By Pavithra
  |
  ಶಿಲ್ಪಾ ಗಣೇಶ್ ಬರ್ತ್‌ಡೇಯಲ್ಲಿ ನಟಿ ಮಣಿಯರ ಮೋಜು ಮಸ್ತಿ...!! | Filmibeat Kannada

  ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಹಾಗೂ ನಿರ್ಮಾಪಕಿ ಶಿಲ್ಪಾ ಗಣೇಶ್ ಇತ್ತೀಚಿಗಷ್ಟೆ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಸಿನಿಮಾರಂಗ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ಹೆಸರು ಮಾಡಿರುವ ಶಿಲ್ಪಾ ಗಣೇಶ್ ಚಿತ್ರರಂಗದ ಪ್ರತಿಯೊಬ್ಬರ ಬಳಿಯೂ ಉತ್ತಮ ಬಾಂದವ್ಯವನ್ನು ಹೊಂದಿದ್ದಾರೆ.

  ಮುಖ್ಯವಾಗಿ ಸಿನಿಮಾ ನಾಯಕರ ಪತ್ನಿಯರು ಹಾಗೂ ತಂತ್ರಜ್ಞರ ಮಡದಿಯರ ಬಳಿ ಉತ್ತಮ ಸ್ನೇಹ ಹೊಂದಿರುವ ಶಿಲ್ಪಾ ಅವರ ಬರ್ತಡೇಯನ್ನು ಸ್ಯಾಂಡಲ್ ವುಡ್ ನಾಯಕಿಯರೆಲ್ಲರೂ ಸೇರಿ ಆಚರಣೆ ಮಾಡಿದ್ದಾರೆ.

  ಗಣೇಶ್ ಮಗಳ ಆಕ್ಟಿಂಗ್ ನೋಡಿದ್ರೆ ಥ್ರಿಲ್ ಆಗ್ತೀರಾ.

  ಆರ್ ಆರ್ ನಗರದಲ್ಲಿರುವ ಗಣೇಶ್ ಅವರ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮ ಜೋರಾಗಿ ನಡೆದಿದ್ದು ನಟಿಯಾದ ಹರ್ಷಿಕಾ ಪೂಣಚ್ಚ, ಅಮೂಲ್ಯ, ಮಾನ್ವಿತಾ ಹರೀಶ್, ಶಾನ್ವಿ ಶ್ರೀವತ್ಸಾ, ನಭಾ ನಟೇಶ್, ಆಶಿಕಾ ರಂಗನಾಥ್, ಸುಧಾರಾಣಿ, ಶೃತಿ, ಕಾರುಣ್ಯ ರಾಮ್ ಹೀಗೆ ಇನ್ನು ಅನೇಕರು ಹುಟ್ಟುಹಬ್ಬದ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.

  ಶಿಲ್ಪಾ ಗಣೇಶ್ ಅವರ ಮನೆಯಲ್ಲಿ ನಾಯಕ ನಟಿಯರು ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಕಳೆದ ಎರಡು ಮೂರು ವರ್ಷಗಳಿಂದಲೂ ಮಹಿಳಾ ದಿನಾಚರಣೆ, ಶಿಲ್ಪಾ ಗಣೇಶ್ ಹುಟ್ಟುಹಬ್ಬ ಹೀಗೆ ವಿಶೇಷ ಸಂದರ್ಭದಲ್ಲಿ ತಾರೆಯರೆಲ್ಲರೂ ಒಟ್ಟಿಗೆ ಸೇರಿಕೊಳ್ಳುತ್ತಾರೆ.

  English summary
  Kannada film producer Shilpa Ganesh has recently celebrated his birthday. Harshika Poonachka, Manvitha Harish, Shanvi Srivatsa, Nabha Nathesh, Ashika Ranganath, Sudharani and others are present at Shilpa Ganesh's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X